ಹೊಸ XUV700 ಬೆಲೆ ಮಾಹಿತಿ ಬಹಿರಂಗ- ಕೇವಲ 57 ನಿಮಿಷಗಳಲ್ಲಿ 25 ಸಾವಿರ ಬುಕ್ಕಿಂಗ್ ಪಡೆದುಕೊಂಡ Mahindra

ಮಹೀಂದ್ರಾ ಕಂಪನಿಯು(Mahindra) ತನ್ನ ಬಹುನೀರಿಕ್ಷಿತ XUV700 ಎಸ್‌ಯುವಿ ಮಾದರಿಯ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಹೊಸ ಕಾರಿನ ಬೆಲೆ ಪಡಿಸುತ್ತಿದ್ದಂತೆ ಹೊಸ ಕಾರು ಖರೀದಿಗೆ ಕೆಲವೇ ನಿಮಿಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಹೊಸ Mahindra XUV700 ಬೆಲೆ ಬಹಿರಂಗ

ಹೊಸ ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 22.89 ಲಕ್ಷಕ್ಕೆ ನಿಗದಿಪಡಿಸಿದ್ದು, ಆರಂಭಿಕ ಬೆಲೆಯನ್ನು ಮೊದಲು ಬುಕ್ಕಿಂಗ್ ದಾಖಲಿಸಿದ 25 ಸಾವಿರ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಮಹೀಂದ್ರಾ ಕಂಪನಿಯು ಇಂದು ಮುಂಜಾನೆ ಹತ್ತು ಗಂಟೆಗೆ ಬುಕ್ಕಿಂಗ್ ಆರಂಭಿಸುತ್ತಿದ್ದಂತೆ ರೂ. 21 ಸಾವಿರ ಮುಂಗಡದೊಂದಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಸದ್ಯಕ್ಕೆ ಆನ್‌ಲೈನ್ ಬುಕ್ಕಿಂಗ್ ಸ್ಥಗಿತ ಮಾಡಿರುವ ಮಹೀಂದ್ರಾ ಕಂಪನಿಯು ನಾಳೆ ಮುಂಜಾನೆ ಹತ್ತು ಗಂಟೆಯಿಂದ ಮತ್ತೆ ಬುಕ್ಕಿಂಗ್ ಆರಂಭಿಸುವುದಾಗಿ ಹೇಳಿಕೊಂಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ದಾಖಲಿಸುವ ಮೊದಲ 25 ಸಾವಿರ ಗ್ರಾಹಕರಿಗೆ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷಕ್ಕೆ ವಿತರಣೆ ಮಾಡಲಿದ್ದು, 25 ಸಾವಿರ ಯುನಿಟ್ ನಂತರ ಕಾರು ಖರೀದಿಸುವ ಗ್ರಾಹಕರಿಗೆ ಕಂಪನಿಯು ರೂ. 50 ಸಾವಿರ ದರ ಹೆಚ್ಚಳ ಮಾಡಿ ಹೊಸ ದರಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

25 ಸಾವಿರ ಯುನಿಟ್ ನಂತರ ಎಕ್ಸ್‌ಯುವಿ700 ಕಾರು ಖರೀದಿಸುವ ಗ್ರಾಹಕರಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 22.99 ಲಕ್ಷ ಪಾವತಿಸಬೇಕಿದ್ದು, ಹೊಸ ಕಾರು ಎಂಎಕ್ಸ್ ಮತ್ತು ಎಎಕ್ಸ್ ಸರಣಿಯೊಂದಿಗೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

MX Series
Fuel Type 5-Seater (MT)
MX Petrol ₹12.49 Lakh
Diesel ₹12.99 Lakh
AndrenoX Series
Fuel Type MT AT
AX3

(5-Seater)

Petrol ₹14.49 Lakh ₹15.99 Lakh
Diesel ₹14.99 Lakh* ₹16.69 Lakh
AX5

(5-Seater)

Petrol ₹15.49 Lakh** ₹17.09 Lakh
Diesel ₹16.09 Lakh** ₹17.69 Lakh**
AX7

(7-Seater)

Petrol ₹17.99 Lakh ₹19.59 Lakh
Diesel ₹18.59 Lakh ₹20.19 Lakh
Diesel + AWD NA ₹21.49 Lakh
AX7 Luxury

(7-Seater)

Petrol NA ₹21.29 Lakh
Diesel ₹20.29 Lakh ₹21.89 Lakh
Diesel + AWD NA ₹22.99 Lakh
*Also available in 7-Seater at an additional ₹ 70,000
**Also available in 7-Seater at an additional ₹ 60,000
ಹೊಸ Mahindra XUV700 ಬೆಲೆ ಬಹಿರಂಗ

ಹೊಸ ಕಾರಿನ ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆಯೆಂತೆ.

ಹೊಸ Mahindra XUV700 ಬೆಲೆ ಬಹಿರಂಗ

ಎಎಕ್ಸ್3 ವೆರಿಯೆಂಟ್‌ಗಳು ಐದು ಆಸನ ಸೌಲಭ್ಯವನ್ನು ಮಾತ್ರ ಹೊಂದಿದ್ದು, ಇದರಲ್ಲೂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಈ ರೂಪಾಂತರದಲ್ಲಿ ಗ್ರಾಹಕರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಆಸಕ್ತ ಗ್ರಾಹಕರು ಈ ವೆರಿಯೆಂಟ್‌ನಲ್ಲಿ 7 ಸೀಟರ್ ಮಾದರಿಯನ್ನು ಹೆಚ್ಚುವರಿ ಬೆಲೆಯಲ್ಲಿ ಖರೀದಿಸಬಹುದು.

ಹೊಸ Mahindra XUV700 ಬೆಲೆ ಬಹಿರಂಗ

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯು ಖರೀದಿಗೆ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಹಾಗೆಯೇ ಎಎಕ್ಸ್7 ಮಾದರಿಯು ಹೈ ಎಂಡ್ ಮಾದರಿಯಲ್ಲಿ ಆಲ್ ವ್ಹೀಲ್ ಮಾದರಿಯು ಸಹ ಖರೀದಿಗೆ ಲಭ್ಯವಿದ್ದು, ಆಸಕ್ತ ಗ್ರಾಹಕರಿಗಾಗಿ ಕಂಪನಿಯು ಎಎಕ್ಸ್ 7 ಲಗ್ಷುರಿ ಮಾದರಿಯನ್ನು ಸಹ ಮಾರಾಟ ಆರಂಭಿಸಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಎಎಕ್ಸ್7 ಮಾದರಿಯು ಸ್ಟ್ಯಾಂಡರ್ಡ್ ಆಗಿ 7 ಸೀಟರ್ ಮಾದರಿಗಳಾಗಿದ್ದು, 5 ಸೀಟರ್ ಮಾದರಿಗಳಲ್ಲಿ 7 ಸೀಟರ್ ಸೌಲಭ್ಯ ಬೇಕಾದಲ್ಲಿ ಹೆಚ್ಚುವರಿಯಾಗಿ ರೂ. 70 ಸಾವಿರ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ.

ಹೊಸ Mahindra XUV700 ಬೆಲೆ ಬಹಿರಂಗ

ಇನ್ನು ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಹಾಗೆಯೇ ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಎಲೆಕ್ಟ್ರಿಕ್ ಬ್ಲ್ಯೂ, ಎವರೆಸ್ಟ್ ವೈಟ್, ಡ್ಯಾಜಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೆಡ್ ರೇಂಜ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಕಾರು ಮಾದರಿಯಾಗಿ ಕಂಪನಿಯು ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಅಭಿವೃದ್ದಿಪಡಿಸಿದೆ.

ಹೊಸ Mahindra XUV700 ಬೆಲೆ ಬಹಿರಂಗ

ಎಎಕ್ಸ್ ಸೀರಿಸ್ ಟಾಪ್ ಎಂಡ್ ಮಾದರಿಗಳು ಕಂಪನಿಯ 64 ಫೀಚರ್ಸ್ ಒಳಗೊಂಡ ಆ್ಯಂಡಿನೊಎಕ್ಸ್ ಕಾರ್ ಕನೆಕ್ಟ್ ಟೆಕ್ನಾಲಜಿ ಹೊಂದಿರಲಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ಹೊಸ ಕಾರ್ ಕೆನೆಕ್ಟ್ ಸೌಲಭ್ಯದಲ್ಲಿ ವ್ಯಯಕ್ತಿಕರಣಗೊಳಿಸಿದ ಸುರಕ್ಷಾ ಸೌಲಭ್ಯಗಳು ಸಹ ಲಭ್ಯವಿದ್ದು, ಧ್ವನಿ ಸಂಜ್ಞೆಯ ಮೂಲಕವೇ ಕ್ಯಾಬಿನ್ ಫೀಚರ್ಸ್‌ಗಳನ್ನು ನಿಯಂತ್ರಣ ಮಾಡಬಹುದು.

Most Read Articles

Kannada
English summary
Mahindra xuv700 suv gets 25000 booking new car price revised
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X