ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಾರುಗಳ ಮಾರಾಟವನ್ನು ಹೆಚ್ಚಿಸಲು ಭರ್ಜರಿ ಡಿಸ್ಕೌಂಟ್ ಗಳನ್ನು ಘೋಷಿಸಿದೆ, ಕಳೆದ ತಿಂಗಳು ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ದಾಖಲೆಯ ಮಟ್ಟದ ಕುಸಿತವನ್ನು ಕಂಡಿತು.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಾರುಗಳ ಮಾರಾಟ ತಿಂಗಳಿಂದ ತಿಂಗಳಿಗೆ ಕುಸಿತವನ್ನು ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದ ಹಲವು ಕಡೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಇದರಿಂದ ಮಾರುತಿ ಸುಜುಕಿ ಕಂಪನಿಯ ಕಾರುಗಳ ಉತ್ಪಾದನೆಯ ಮೇಲೆಯು ಪರಿಣಾಮವನ್ನು ಬೀರಿದೆ. ಇದೀಗ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡುವ ಪಕ್ರಿಯೆ ಆರಂಭಗೊಂಡಿದೆ. ಇದರ ನಡುವೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಕಾರುಗಳ ಖರೀದಿ ಮೇಲೆ ಮಾರುತಿ ಸುಜುಕಿ ನೆಕ್ಸಾ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಗ್ನಿಸ್

ಈ ಮಾರುತಿ ಇಗ್ನಿಸ್ ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇಗ್ನಿಸ್ ಕಾರಿನ ‘ಸಿಗ್ಮಾ' ರೂಪಾಂತರದ ಮೇಲೆ ರೂ.20,000 ನಗದು ರಿಯಾಯಿತಿ ಅನ್ನು ನೀಡಿದೆ. ಇದರೊಂದಿಗೆ ‘ಆಲ್ಫಾ' ರೂಪಾಂತರದ ಮೇಲೆ ರೂ.15,000 ಮತ್ತು ಜೆಟಾ ರೂಪಾಂತರದ ಮೇಲೆ ರೂ.10,000 ವರೆಗಿನ ನಗದು ರಿಯಾಯಿತಿಯನ್ನು ನೀಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಉಳಿದಂತೆ ಮಾರುತಿ ಸುಜುಕಿ ಇಗ್ನಿಸ್ ಕಾರಿನ ಎಲ್ಲಾ ರೂಪಾಂತರಗಳ ಮೇಲೆ ರೂ.15,000 ವಿನಿಮಯ ಬೋನಸ್ ಮತ್ತು ರೂ.3,000 ಗಳವರೆಗಿನ ಕಾರ್ಪೊರೇಟ್ ರಿಯಾಯಿತಿ ಸಹ ಆಫರ್‌ನಲ್ಲಿದೆ.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಬಲೆನೊ

ಈ ಮಾರುತಿ ಬಲೆನೊ ಕಾರಿನ ‘ಸಿಗ್ಮಾ' ರೂಪಾಂತರದಲ್ಲಿ ರೂ.25,000 ನಗದು ರಿಯಾಯಿತಿಯನ್ನು ನೀಡಿದೆ. ಇದರೊಂದಿಗೆ ಬಲೆನೊ ಕಾರಿನ ‘ಡೆಲ್ಟಾ' ಕಾರಿನ ಮೇಲೆ ರೂ.15,000 ಮತ್ತು ಜಿಟಾ, ಆಲ್ಫಾ ರೂಪಾಂತರಗಳ ಮೇಲೆ ರೂ.10,000 ಗಳವರೆಗೆ ರಿಯಾಯಿತಿಗಳನ್ನು ಘೋಷಿಸಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಆದರೆ ಈ ಆಫರ್ ಗಳು ಬಲೆನೊದ ಸಿವಿಟಿ ಮಾದರಿಗಳಿಗೆ ಇಲ್ಲಮ್ ಮ್ಯಾನುವಲ್ ಮಾದರಿಗಳ ಮೇಲೆ ಮಾತ್ರ ಡಿಸ್ಕೌಂಡ್ ನೀಡಲಾಗಿದೆ. ಬಲೆನೊದ ಎಲ್ಲಾ ರೂಪಾಂತರಗಳಲ್ಲಿ ರೂ.10,000 ವಿನಿಮಯ ಬೋನಸ್ ಮತ್ತು ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿದೆ.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಿಯಾಜ್

ಸಿಯಾಜ್‌ನಲ್ಲಿ ಕಾರಿನ ಮೇಲೆ ಈ ತಿಂಗಳು ಯಾವುದೇ ನಗದು ರಿಯಾಯಿತಿ ಇಲ್ಲ. ಇನ್ನು ಈ ಕಾರಿನ ಮೇಲೆ ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಎಕ್ಸ್‌ಎಲ್6

ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರಿನ ಮೇಲೆ ರೂ.4000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿದೆ. ಇದರ ಮೇಲೆ ಯಾವುದೇ ನಗದು ರಿಯಾಯಿತಿ ಅಥವಾ ವಿನಿಮಯ ಬೋನಸ್ ಆಫರ್ ಅನ್ನು ನೀಡಿಲ್ಲ.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಎಸ್-ಕ್ರಾಸ್‌

ಈ ಮಾರುತಿ ಸುಜುಕಿ ಎಸ್-ಕ್ರಾಸ್‌ ಕಾರಿನ ಮೇಲೆ ರೂ.15,000 ನಗದು ರಿಯಾಯಿತಿಯನ್ನು ನೀಡಲಾಗಿದೆ, ಇದರೊಂದಿಗೆ ರೂ.15,000 ವರೆಗಿನ ವಿನಿಮಯ ಬೋನಸ್ ಅನ್ನು ನೀಡಿದೆ. ಇದರೊಂದಿಗೆ ಈ ಕಾರಿನ ಮೇಲೆ ರೂ.3,000 ಅವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದ್ದಾರೆ.

ನೆಕ್ಸಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಆನ್‌ಲೈನ್‌ನಲ್ಲಿ ಮಂಜೂರು ಮಾಡಿದ ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ (ಎಂಎಸ್‌ಎಸ್ಎಫ್) ಪ್ರಕರಣಗಳಲ್ಲಿ ಹೆಚ್ಚುವರಿ ರೂ.3,000 ಲಭ್ಯವಿದೆ, ಎಲ್ಲಾ ಮಾದರಿಗಳಿಗೆ ಅನ್ವಯಿಸುತ್ತದೆ. ಈ ಭರ್ಜರಿ ಆಫರ್ ಗಳು ಮಾರುತಿ ಸುಜುಕಿ ಕಾರುಗಳ ಮಾರಾಟವನ್ನು ಹೆಚ್ಚಿಸಲು ನೆರವಾಗಬಹುದು.

Most Read Articles

Kannada
English summary
Maruti Suzuki NEXA Discounts June 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X