ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಭಾರತದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಲಕ್ಷದ ಗಡಿ ದಾಟಿದೆ.

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈಗಾಗಲೇ ಈ ಮಹಾಮಾರಿ ವೈರಸ್'ಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಪ್ರತಿ ದಿನ ಸುಮಾರು 3 ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ದೇಶಾದ್ಯಂತ ವೈದ್ಯಕೀಯ ಮೂಲ ಸೌಲಭ್ಯಗಳ ಕೊರತೆ ಎದುರಾಗಿದೆ. ಕರೋನಾ ವೈರಸ್ ಎರಡನೇ ಅಲೆಯಲ್ಲಿ ಸೋಂಕಿತರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ.

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಸಕಾಲಕ್ಕೆ ಆಕ್ಸಿಜನ್ ದೊರಕದ ಕಾರಣ ಪ್ರತಿ ದಿನ ಸಹಸ್ರಾರು ಜನರು ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿರುವ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ಸೋಂಕಿತರಿಗೆ ನೆರವಾಗುತ್ತಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈಗ ದೇಶದ ಅಗ್ರ ಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಜೈಡಸ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಗುಜರಾತ್‌ನ ಅಹಮದಾಬಾದ್‌ನ ಸೀತಾಪುರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವುದಾಗಿ ಪ್ರಕಟಿಸಿದೆ.

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈ ಆಸ್ಪತ್ರೆಯ ನಿರ್ಮಾಣಕ್ಕೆ ರೂ.126 ಕೋಟಿ ವೆಚ್ಚವಾಗಲಿದೆ. ಈ ಪೂರ್ತಿ ಹಣವನ್ನು ಮಾರುತಿ ಸುಜುಕಿ ಪ್ರತಿಷ್ಠಾನದಿಂದ ಭರಿಸಲಾಗುತ್ತದೆ. ಈ ಆಸ್ಪತ್ರೆಯನ್ನು ಜೈಡಸ್ ಗ್ರೂಪ್‌ನ ಸಿಎಸ್‌ಆರ್ ಅಂಗವಾದ ರಾಮನ್‌ಭಾಯ್ ಫೌಂಡೇಶನ್‌ ನಿರ್ವಹಿಸಲಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಕೋವಿಡ್ 19 ರೋಗಿಗಳನ್ನು ಉಪಚರಿಸಲು ಹಾಗೂ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಇಂಡಿಯಾದ ಎಂಡಿ ಹಾಗೂ ಸಿಇಒ ಕೆನಿಚಿ ಅಯುಕಾವಾ, ನಮ್ಮ ಗುಜರಾತ್ ಉತ್ಪಾದನಾ ಘಟಕವು ಆರಂಭವಾದಾಗ, ಈ ಪ್ರದೇಶದಲ್ಲಿ ಯಾವುದೇ ಪ್ರಮುಖ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿಲ್ಲ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ನಾವು ಉತ್ತಮ ಗುಣಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿದ್ದೇವೆ. ಈ ಆಸ್ಪತ್ರೆಯನ್ನು ಜೈಡಸ್ ಗ್ರೂಪ್ ನಿರ್ವಹಣೆ ಮಾಡಲಿದೆ. ಈ ಆಸ್ಪತ್ರೆಯು ಕೋವಿಡ್ 19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನೆರವಾಗಲಿದೆ ಎಂದು ಹೇಳಿದರು.

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸೀತಾಪುರದ ಅಕ್ಕ ಪಕ್ಕದ ಹಳ್ಳಿಗಳಲ್ಲಿ ವಾಸಿಸುವ 3.75 ಲಕ್ಷಕ್ಕೂ ಹೆಚ್ಚು ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ಸೇವೆ ನೀಡಲಾಗುವುದು ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾದ ಮಾರುತಿ ಸುಜುಕಿ

ಈ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳಿಗೆ 50 ಹಾಸಿಗೆಗಳ ಸೌಲಭ್ಯವಿದೆ. ಇದನ್ನು 100 ಹಾಸಿಗೆಗಳಿಗೆ ಹೆಚ್ಚಿಸಲಾಗುವುದು. ಈ ಸೌಲಭ್ಯವು 7.5 ಎಕರೆ ಪ್ರದೇಶದಲ್ಲಿದೆ. ಈ ಆಸ್ಪತ್ರೆ ಈ ಪ್ರದೇಶದಲ್ಲಿರುವ ಮೊದಲನೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ.

Most Read Articles

Kannada
English summary
Maruti Suzuki to open multi speciality hospital for Covid 19 patients. Read in Kannada.
Story first published: Wednesday, May 19, 2021, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X