ಕೋವಿಡ್ ಸಂಕಷ್ಟ: ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಭಾಗಶಃ ಲಾಕ್ಡೌನ್, ಕರ್ಫ್ಯೂ ವಿಧಿಸಲಾಗುತ್ತಿದ್ದು, ವೈಸರ್ ಭೀತಿ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಅದರಲ್ಲೂ ತೀವ್ರ ಉಸಿರಾಟದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಆಕ್ಸಿಜನ್ ಕೊರತೆಯು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಉತ್ಪಾದನಾ ಸಾಮಾರ್ಥ್ಯಕ್ಕಿಂತ ಹತ್ತು ಪಟ್ಟು ಬೇಡಿಕೆ ಬರುತ್ತಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡಲು ಪರದಾಡುತ್ತಿರುವ ಆಕ್ಸಿಜನ್ ಕಂಪನಿಗಳು ಸಾಮಾರ್ಥ್ಯ ಮೀರಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಕೆಲವು ಆಕ್ಸಿಜನ್ ಉತ್ಪಾದನಾ ವಿವಿಧ ಕಂಪನಿಗಳ ಜೊತೆಗೂಡಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತೆರೆಯುತ್ತಿವೆ. ಇತ್ತೀಚೆಗೆ ಗುಜರಾತ್ ಮೂಲದ ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿಯು ಕೂಡಾ ಎಂಜಿ ಮೋಟಾರ್ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ವಡೋದರದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಹೊಸ ಘಟಕದ ಮೂಲಕ ಸಾಧ್ಯವಾದಷ್ಟು ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸುವ ಗುರಿಹೊಂದಲಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕಾರು ಉತ್ಪಾದನಾ ಘಟಕವನ್ನು ವೈದ್ಯಕೀಯ ಅಗತ್ಯತೆ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಎಂಜಿ ಮೋಟಾರ್ ಹೆಮ್ಮೆ ವ್ಯಕ್ತಪಡಿಸಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಸಂಕಷ್ಟ ಪರಿಸ್ಥಿತಿಯಲ್ಲಿ ಸಮುದಾಯ ಕಾಳಜಿ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾ ಹಿರಿಯ ಅಧಿಕಾರಿಗಳು ಸಾಧ್ಯವಾದಷ್ಟು ಬೆಂಬಲವನ್ನು ಒದಗಿಸುತ್ತೇವೆ ಎನ್ನುವ ಭರವಸೆ ನೀಡಿದ್ದು, ಕೋವಿಡ್ ವಿರುದ್ದದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಕಂಪನಿಯು ಬದ್ದವಾಗಿದೆ ಎಂದಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಕಳೆದ ವರ್ಷವು ಸಹ ಕಾರು ಉತ್ಪಾದನೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಮಾಕ್ಸ್ ಕಂಪನಿಯ ವೆಂಟೆಲೆಟರ್ ಉತ್ಪಾದನೆಯ ಹೆಚ್ಚಳಕ್ಕೂ ಸ್ಥಳಾವಕಾಶ ಒದಗಿಸುತ್ತಿತ್ತು.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ವಡೋದರಾ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಆಧುನಿಕ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಸಹ ದೇಣಿಯಾಗಿ ನೀಡಿರುವ ಎಂಜಿ ಮೋಟಾರ್ ಕಂಪನಿಯು ದೇಶಾದ್ಯಂತ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಕರೋನಾ ವಾರಿಯರ್ಸ್‌ಗೆ ಯಾವುದೇ ತೊಂದರೆಯಾಗದಂತೆ ನಿರಂತವಾಗಿ ಸ್ಯಾನಿಟೈಜ್ ಸೌಲಭ್ಯವನ್ನು ಉಚಿತವಾಗಿ ಒದಗಿಸಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್

ಇದೀಗ ಕೋವಿಡ್ ಅಬ್ಬರ ಹೆಚ್ಚಿರುವುದರಿಂದ ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿ ಜೊತೆಗೂಡಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ತೀವ್ರಗೊಳಿಸಲಾಗಿದ್ದು, ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಸಮುದಾಯದ ಸೇವೆಗೆ ಮುಂದಾಗಿರುವ ಎಂಜಿ ಮೋಟಾರ್ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Most Read Articles

Kannada
English summary
MG Motor India Collaborates With Devnandan Gases To Increase Medical Oxygen Production In India. Read in Kannada.
Story first published: Wednesday, April 21, 2021, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X