Just In
- 7 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 8 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 9 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 10 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನ ಹೊರವಲಯದಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಜೆಡ್ಎಸ್ ಪೆಟ್ರೋಲ್ ವರ್ಷನ್
ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ತನ್ನ ಐದನೇ ಕಾರು ಮಾದರಿಯಾಗಿ ಹೊಸ ಕಂಪ್ಯಾಕ್ಟ್ ಎಸ್ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಅತ್ಯುತ್ತಮ ಫೀಚರ್ಸ್ಗಳನ್ನು ಪಡೆದುಕೊಳ್ಳಲಿದೆ.
ಹೊಸ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಸದ್ಯ ಹೊಸ ಕಾರನ್ನು ನಮ್ಮ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿವಿಧ ವೆರಿಯೆಂಟ್ನೊಂದಿಗೆ ಜೆಡ್ಎಸ್ ಪೆಟ್ರೋಲ್ ಮಾದರಿಯ ಪರೀಕ್ಷೆ ಕೈಗೊಂಡಿದ್ದು, ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಕಾರು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
2020ರ ಫೆಬ್ರವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಎಂಜಿ ಹೊಸ ಕಾರು ಮಾದರಿಯು ಈ ವರ್ಷದ ಮೂರನೇ ತ್ರೈಮಾಸಿಕ ವೇಳೆಗೆ ಬಿಡುಗಡೆಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಜೆಡ್ಎಸ್ ಬದಲಾಗಿ ಆಸ್ಟರ್ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಎಂಜಿ ಕಂಪನಿಯು ಆಸ್ಟರ್ ಹೆಸರನ್ನು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್ಮಾರ್ಕ್ ಸಲ್ಲಿಸಿದ್ದು, ಆಸ್ಟರ್ ಹೆಸರನ್ನು ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಗಾಗಿ ಬಳಕೆ ಮಾಡಬಹುದಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಭಿನ್ನವಾದ ತಾಂತ್ರಿಕ ಅಂಶಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಸೌಲಭ್ಯವು ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಿದೆ. ಹೊಸ ಎಡಿಎಎಸ್ ಸೌಲಭ್ಯ ಅಳವಡಿಕೆಯಿಂದಾಗಿ ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ರಡಾರ್ ಬಳಕೆಯಾಗಲಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು.
ಜೊತೆಗೆ ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡುವ ಎಡಿಎಎಸ್ ಸೌಲಭ್ಯವು ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸಲಿದ್ದು, ಪ್ರಯಾಣಿಕರಿಗೆ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಇದರೊಂದಿಗೆ ಹೊಸ ಕಾರಿನಲ್ಲಿ ಅತ್ಯುತ್ತಮ ಲೆದರ್ ವ್ಯಾರ್ಪ್ ಆಸನಗಳು, ಹಿಂಬದಿಯ ಪ್ರಯಾಣಿಕರಿಗೆ ಎಸಿ ವೆಂಟ್ಸ್, 10-ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಲ್ಯಾಟ್-ಬಾಟಮ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಹಿಂಬದಿಯ ಪ್ರಯಾಣಿಕರಿಗೆ ಅರಾಮದಾಯಕವಾದ ಆಸನ ಸೌಲಭ್ಯಗಳಿವೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!
ಹೊಸ ಕಾರು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಹೊಸ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಮತ್ತು ಪರ್ಫಾಮೆನ್ಸ್ ಬಯಸುವ ಗ್ರಾಹಕರು ಟರ್ಬೊ ಪೆಟ್ರೋಲ್ ಮಾದರಿಯನ್ನು ಖರೀದಿಸಬಹುದು.
ಹೊಸ ಕಾರಿನಲ್ಲಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಗಾಗಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರಬಹುದೆಂದು ಅಂದಾಜಿಸಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಈ ಮೂಲಕ ಮಧ್ಯಮ ಕ್ರಮಾಂಕದ ಎಸ್ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಎಂಜಿ ಹೊಸ ಕಂಪ್ಯಾಕ್ಟ್ ಎಸ್ಯುವಿ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 9.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗುತ್ತಿದೆ.