ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
ಹೊಸ ಜೆಡ್ಎಸ್ ಪೆಟ್ರೋಲ್ ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನಲ್ಲಿ ಅತ್ಯುತ್ತಮ ಫೀಚರ್ಸ್ ಜೋಡಣೆ ಮಾಡಲಿದ್ದು, ಹೊಸ ಕಾರಿನ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಂದುವರಿಸಿದೆ.

ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಗ್ಲೊಸ್ಟರ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಜೆಡ್ಎಸ್ ಪೆಟ್ರೋಲ್ ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆ. ಹೊಸ ಕಾರು ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿರುವ ಎಂಜಿ ಕಂಪನಿಯು ಹೊಸ ಕಾರಿನಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಭಿನ್ನವಾದ ತಾಂತ್ರಿಕ ಅಂಶಗಳನ್ನು ಅಳವಡಿಸುತ್ತಿದೆ.

ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಜೆಡ್ಎಸ್ ಕಾರು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹೊಸ ಕಾರು ಐಷಾರಾಮಿ ಕಾರುಗಳಲ್ಲಿ ಅಳವಡಿಸಲಾಗುವ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಪಡೆದುಕೊಂಡಿರುವುದು ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಿದ್ದು, ಕಾರಿನ ಒಳಭಾಗದಲ್ಲಿ ಹಲವಾರು ಆಕರ್ಷಕ ಫೀಚರ್ಸ್ ಅಳವಡಿಸಿರುವುದು ರೋಡ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಎಡಿಎಎಸ್ ಸೌಲಭ್ಯ ಅಳವಡಿಕೆಯಿಂದ ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ರಡಾರ್ ಬಳಕೆಯಾಗಲಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು. ಜೊತೆಗೆ ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡಲಿದ್ದು, ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಅತ್ಯುತ್ತಮ ಲೆದರ್ ವ್ಯಾರ್ಪ್ ಆಸನಗಳು, ಹಿಂಬದಿಯ ಪ್ರಯಾಣಿಕರಿಗೆ ಎಸಿ ವೆಂಟ್ಸ್, 10-ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪ್ಲ್ಯಾಟ್-ಬಾಟಮ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಹಿಂಬದಿಯ ಪ್ರಯಾಣಿಕರಿಗೆ ಅರಾಮದಾಯಕವಾದ ಆಸನ ಸೌಲಭ್ಯಗಳಿವೆ.

ಹೊಸ ಕಾರು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಜೆಡ್ಎಸ್ ಪೆಟ್ರೋಲ್ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಮತ್ತು ಪರ್ಫಾಮೆನ್ಸ್ ಬಯಸುವ ಗ್ರಾಹಕರು ಟರ್ಬೊ ಪೆಟ್ರೋಲ್ ಮಾದರಿಯನ್ನು ಖರೀದಿಸಬಹುದು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜೆಡ್ಎಸ್ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಕಾರು 4,314-ಎಂಎಂ ಉದ್ದ, 1,890-ಎಂಎಂ ಅಗಲ, 1,611-ಎಂಎಂ ಎತ್ತರ ಮತ್ತು 2,589-ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಟೆಸ್ಟಿಂಗ್ ಪ್ರಕ್ರಿಯೆಗಳು ಮುಂದುವರಿಸಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಉತ್ತಮ ಬೆಲೆ ಆಯ್ಕೆಯೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿರುವ ಹೊಸ ಕಾರು ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.


Click it and Unblock the Notifications