ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ಫಾಡಾ 2020ರ ಡಿಸೆಂಬರ್‌ ತಿಂಗಳಿನ ಹೊಸ ವಾಹನಗಳ ನೋಂದಣಿ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ 2020ರ ಡಿಸೆಂಬರ್‌ ತಿಂಗಳ ಹೊಸ ವಾಹನ ನೋಂದಣಿ ಪ್ರಮಾಣವು 2019ರ ಡಿಸೆಂಬರ್ ತಿಂಗಳಿಗಿಂತ 11%ನಷ್ಟು ಹೆಚ್ಚಳವಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಹಾಗೂ ಟ್ರಾಕ್ಟರ್'ಗಳ ನೋಂದಣಿಯಲ್ಲಿ ಹೆಚ್ಚಳ ಕಂಡುಬಂದಿದ್ದರೆ, ತ್ರಿಚಕ್ರ ಹಾಗೂ ವಾಣಿಜ್ಯ ವಾಹನಗಳ ನೋಂದಣಿಯಲ್ಲಿ ಇಳಿಕೆ ಕಂಡುಬಂದಿದೆ. ದೇಶಾದ್ಯಂತ ವಿತರಕರು ಡಿಸೆಂಬರ್ ತಿಂಗಳಿನಲ್ಲಿ 18,44,143 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದಾರೆ. 2019ರ ಡಿಸೆಂಬರ್‌ ತಿಂಗಳಿನಲ್ಲಿ 16,61,245 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ದ್ವಿಚಕ್ರ ವಾಹನ ಮಾರಾಟದ ಬಗ್ಗೆ ಹೇಳುವುದಾದರೆ 2020ರ ಡಿಸೆಂಬರ್‌ ತಿಂಗಳಿನಲ್ಲಿ ಹೊಸ ದ್ವಿಚಕ್ರ ವಾಹನ ನೋಂದಣಿ ಪ್ರಮಾಣವು 11.88%ನಷ್ಟು ಹೆಚ್ಚಳವಾಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ 14,24,620 ಯುನಿಟ್‌ಗಳು ನೋಂದಣಿಯಾಗಿದ್ದರೆ, 2019ರ ಡಿಸೆಂಬರ್‌ನಲ್ಲಿ 12,73,318 ಯುನಿಟ್‌ಗಳು ನೋಂದಣಿಯಾಗಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ತ್ರಿಚಕ್ರ ವಾಹನಗಳ ನೋಂದಣಿಯಲ್ಲಿ ಕಳೆದ ತಿಂಗಳು 52.75%ನಷ್ಟು ಇಳಿಕೆ ಕಂಡುಬಂದಿದೆ. 2020ರ ಡಿಸೆಂಬರ್‌ನಲ್ಲಿ ಒಟ್ಟು 27,715 ಯುನಿಟ್‌ಗಳನ್ನು ನೋಂದಾಯಿಸಲಾಗಿದ್ದರೆ, 2019ರ ಡಿಸೆಂಬರ್‌ನಲ್ಲಿ 58,651 ಯುನಿಟ್ ವಾಹನಗಳನ್ನು ನೋಂದಾಯಿಸಲಾಗಿತ್ತು.

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ಪ್ರಯಾಣಿಕರ ವಿಭಾಗದಲ್ಲಿನ ನೋಂದಣಿಯು ಇತರ ವಿಭಾಗಗಳಿಗಿಂತ ಉತ್ತಮವಾಗಿದೆ. ಈ ವಿಭಾಗದಲ್ಲಿ 23.99%ನಷ್ಟು ಬೆಳವಣಿಗೆ ದಾಖಲಾಗಿದೆ. ಕಳೆದ ತಿಂಗಳು 2,71,249 ಯುನಿಟ್ ವಾಹನಗಳು ನೋಂದಾಯಿಸಲ್ಪಟ್ಟಿದ್ದರೆ, 2019ರ ಡಿಸೆಂಬರ್‌ನಲ್ಲಿ 2,18,775 ಯುನಿಟ್ ವಾಹನಗಳು ನೋಂದಣಿಯಾಗಿದ್ದವು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ಕಮರ್ಷಿಯಲ್ ವಾಹನ ವಿಭಾಗದಲ್ಲಿ 13.52%ನಷ್ಟು ಕಡಿಮೆ ವಾಹನಗಳು ನೋಂದಣಿಯಾಗಿವೆ. 2020ರ ಡಿಸೆಂಬರ್‌ನಲ್ಲಿ 51,454 ಯುನಿಟ್‌ಗಳು ನೋಂದಣಿಯಾಗಿದ್ದರೆ, 2019ರ ಡಿಸೆಂಬರ್‌ನಲ್ಲಿ 59,497 ಯುನಿಟ್ ವಾಹನಗಳು ನೋಂದಣಿಯಾಗಿದ್ದವು.

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ಕಳೆದ ತಿಂಗಳು ಹೊಸ ಟ್ರಾಕ್ಟರುಗಳ ನೋಂದಣಿಯಲ್ಲಿ ಅತಿ ಹೆಚ್ಚಳವಾಗಿದೆ. ಕಳೆದ ತಿಂಗಳು ಟ್ರಾಕ್ಟರುಗಳ ಮಾರಾಟವು 35.49%ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು 69,105 ಯುನಿಟ್‌ ಹೊಸ ಟ್ರಾಕ್ಟರುಗಳು ನೋಂದಣಿಯಾಗಿದ್ದರೆ, 2019ರ ಡಿಸೆಂಬರ್‌ನಲ್ಲಿ 51,004 ಯುನಿಟ್‌ ಟ್ರಾಕ್ಟರುಗಳು ನೋಂದಣಿಯಾಗಿದ್ದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಡಿಸೆಂಬರ್ ತಿಂಗಳಿನಲ್ಲಿ 18 ಲಕ್ಷ ಮೀರಿದ ಹೊಸ ವಾಹನ ನೋಂದಣಿ ಪ್ರಮಾಣ

ನಾಲ್ಕು ಚಕ್ರ ವಾಹನಗಳ ಮಾರಾಟಗಾರರ ದಾಸ್ತಾನು 5 - 20 ದಿನಗಳು ಹಾಗೂ ದ್ವಿಚಕ್ರ ವಾಹನಗಳ ದಾಸ್ತಾನು 30 - 35 ದಿನಗಳು ಕಡಿಮೆ ಮಾಡಲಾಗಿದೆ ಎಂದು ಫಾಡಾ ಹೇಳಿದೆ. ವಾಹನಗಳ ಬೆಲೆ ಏರಿಕೆಯಿಂದಾಗಿ ಜನವರಿ ತಿಂಗಳಿನಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಕಡಿಮೆಯಾಗಬಹುದು.

Most Read Articles

Kannada
English summary
More than 18 lakhs new vehicles registered in December 2020. Read in Kannada.
Story first published: Monday, January 11, 2021, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X