ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು- ಕರ್ನಾಟಕ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು!

ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಗೊಳಿಸಲು ಅಂತಿಮ ಹಂತದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ನೀತಿ ಅಡಿ ದೇಶಾದ್ಯಂತ ಎರಡು ಕೋಟಿಗೂ ಅಧಿಕ ವಾಹನಗಳು ಗುಜುರಿ ಸೇರಲಿವೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ಪ್ರಕಟಿಸಿದ್ದು, ಹಸಿರು ತೆರಿಗೆ ಸೇರಿದಂತೆ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರುತ್ತಿರುವುದು ಮಾಲಿನ್ಯ ನಿಯಂತ್ರಣ ಪರಿಣಾಮಕಾರಿಯಾದ ಅಸ್ತ್ರವಾಗಲಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಹೊಸ ಸ್ಕ್ರ್ಯಾಪೇಜ್ ನೀತಿಯು 2022ರ ಅಕ್ಟೋಬರ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಮಾಹಿತಿಯ ಪ್ರಕಾರ ದೇಶಾದ್ಯಂತ 2.15 ಕೋಟಿ ಹಳೆಯ ವಾಹನಗಳಿದ್ದು, ಇದರಲ್ಲಿ ಅರ್ಧದಷ್ಟು ವಾಹನಗಳು ಕರ್ನಾಟಕ ಮತ್ತು ದೆಹಲಿಯಲ್ಲಿ ಓಡಾಡುತ್ತಿವೆ. ಹಳೆಯ ವಾಹನಗಳ ಸಂಗ್ರಹ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದರೆ ದೆಹಲಿ ಎರಡನೇ ಸ್ಥಾನ ಮತ್ತು ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಕರ್ನಾಟಕದಲ್ಲಿ ಸುಮಾರು 39.48 ಲಕ್ಷ ಹಳೆಯ ವಾಹನಗಳಿದ್ದಲ್ಲಿ ದೆಹಲಿಯಲ್ಲಿ 36.14 ಲಕ್ಷ ಮತ್ತು ಉತ್ತರ ಪ್ರದೇಶದಲ್ಲಿ 26.20 ಲಕ್ಷ ವಾಹನಗಳು 20 ವರ್ಷ ಮೇಲ್ಪಟ್ಟಿದ್ದು, ಮೊದಲ ಮೂರು ರಾಜ್ಯಗಳಲ್ಲೇ ಸುಮರು 1 ಕೋಟಿ ಹಳೆಯ ವಾಹಗಳ ಸಂಗ್ರಹವಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ತದನಂತರದ ಸ್ಥಾನ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ರಾಜ್ಯಗಳಲ್ಲೂ ಹೆಚ್ಚಿನ ಸಂಖ್ಯೆಯ ಹಳೆಯ ವಾಹನಗಳಿದ್ದು, ಹಳೆಯ ವಾಹನಗಳು ಕಡ್ಡಾಯವಾಗಿ ಗುಜುರಿ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಜೊತೆಗೆ 8 ವರ್ಷಗಳ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸಲು ನಿರ್ಧರಿಸಲಾಗಿದ್ದು, ಹಸಿರು ತೆರಿಗೆ ನೀತಿಯಡಿ ಬರುವ ವಾಹನಗಳ ಸಂಖ್ಯೆಯಲ್ಲೂ ಕರ್ನಾಟಕದಲ್ಲೇ ಅತಿ ವಾಹನಗಳಿರುವುದಾಗಿ ಕೇಂದ್ರ ಸಾರಿಗೆ ಇಲಾಖೆಯೇ ಮಾಹಿತಿ ಹಂಚಿಕೊಂಡಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಜೊತೆಗೆ 8 ವರ್ಷಗಳ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸಲು ನಿರ್ಧರಿಸಲಾಗಿದ್ದು, ಹಸಿರು ತೆರಿಗೆ ನೀತಿಯಡಿ ಬರುವ ವಾಹನಗಳ ಸಂಖ್ಯೆಯಲ್ಲೂ ಕರ್ನಾಟಕದಲ್ಲೇ ಅತಿ ವಾಹನಗಳಿರುವುದಾಗಿ ಕೇಂದ್ರ ಸಾರಿಗೆ ಇಲಾಖೆಯೇ ಮಾಹಿತಿ ಹಂಚಿಕೊಂಡಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಹಸಿರು ತೆರಿಗೆ ವ್ಯಾಪ್ತಿಗೆ ಬರುವ ವಾಹನಗಳನ್ನು ಹೊರತುಪಡಿಸಿ ಅವಧಿ ಮೀರಿದ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜುರಿಗೆ ಹಾಕುವ ಮಾಲೀಕರಿಗೆ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಿರುವ ಕೇಂದ್ರ ಸರ್ಕಾರವು ಹೊಸ ವಾಹನ ಖರೀದಿಗಾಗಿ ರಸ್ತೆ ತೆರಿಗೆಯಲ್ಲಿ ವಿನಾಯ್ತಿ ನೀಡುವುದಾಗಿ ಹೇಳಿಕೊಂಡಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಹಳೆಯ ವಾಹನವನ್ನು ಅಧಿಕೃತ ಸ್ಕ್ರ್ಯಾಪಿಂಗ್ ಕೇಂದ್ರದಲ್ಲಿ ಸ್ಕಾರ್ಪ್‌ಗೊಳಿಸುವ ಮೂಲಕ ಹೊಸ ವಾಹನ ಖರೀದಿಗಾಗಿ ವ್ಯಯಕ್ತಿಕ ವಾಹನಗಳಿಗಾಗಿ ಶೇ.25 ರಷ್ಟು ಮತ್ತು ಶೇ. 15ರಷ್ಟು ವಾಣಿಜ್ಯ ವಾಹನಗಳಿಗಾಗಿ ರಸ್ತೆ ತೆರಿಗೆ ವಿನಾಯ್ತಿ ನೀಡಲು ನಿರ್ಧರಿಸಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಜೊತೆಗೆ ಹಸಿರು ತೆರಿಗೆಯನ್ನು 8 ವರ್ಷದ ಮೇಲ್ಪಟ್ಟ ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಿಸುವ ಸಂದರ್ಭದಲ್ಲಿ ಮತ್ತು 15 ವರ್ಷ ಮೇಲ್ಪಟ್ಟ ವೈಯಕ್ತಿಕ ಬಳಕೆಯ ವಾಹನಗಳ ಆರ್‌ಸಿ(ನೋಂದಣಿ ಪ್ರಮಾಣಪತ್ರ) ನವೀಕರಿಸುವ ಸಂದರ್ಭದಲ್ಲಿ ಶೇ.15 ರಿಂದ ಶೇ. 25 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗುತ್ತಿದೆ.

ಗುಜರಿ ಸೇರಲಿವೆ 2.15 ಕೋಟಿ ಹಳೆಯ ವಾಹನಗಳು!

ಕೇಂದ್ರ ಸರ್ಕಾರವು ವಿಧಿಸಲು ನಿರ್ಧರಿಸಿರುವ ಹಸಿರು ತೆರಿಗೆ ಪಟ್ಟಿಗೆ ದೇಶಾದ್ಯಂತ ಸುಮಾರು ಐದು ಕೋಟಿ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಯಲ್ಲಿ ಬರಲಿದ್ದು, ಇದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಹಳೆಯ ವಾಹನಗಳಿರುವುದನ್ನು ಕೇಂದ್ರ ಸಾರಿಗೆ ಇಲಾಖೆಯ ಡೇಟಾದಲ್ಲಿ ಬಹಿರಂಗವಾಗಿದೆ.

Article Published On: Monday, August 2, 2021, 11:30 [IST]
English summary
2.15 Crore Vehicles In India Are Older Than 20 Years. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+