ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಕೆಲವು ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಸೆಡಾನ್‌ಗಳಿಗೆ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಸ್‍ಯುವಿ ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಕಳೆದ ಒಂದೆರಡು ವರ್ಷಗಳಲ್ಲಿ ಸೆಡಾನ್‌ಗಳ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ. ಎಸ್‍ಯುವಿಗಳ ಸೀಟುಗಳು ಎತ್ತರದಲ್ಲಿರುತ್ತದೆ, ಇದರಿಂದ ಉತ್ತಮ ಕಂಫರ್ಟ್ ಆಗಿ ಕುಳಿತುಕೊಳ್ಳಬಹುದು. ಅಲ್ಲದೇ ಎಸ್‍ಯುವಿಗಳು ಎತ್ತರವಿರುವುದರಿಂದ ಸುಲುಭವಾಗಿ ಒಳಗೆ ಪ್ರವೇಶಿಸಬಹುದು. ಈ ರೀತಿಯ ಹಲವು ಕಾರಣಗಳಿಂದ ಹೆಚ್ಚಿನ ಜನರು ಎಸ್‍ಯುವಿಗಳನ್ನು ಇಷ್ಟಪಡುತ್ತಾರೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮೈಲೇಜ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುವ ಪ್ರೀಮಿಯಂ ಸೆಡಾನ್ ಕಾರುಗಳಿವೆ. ಇದರಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಪ್ರೀಮಿಯಂ ಸೆಡಾನ್ ಕಾರುಗಳ ಮಾಹಿತಿಗಳು ಇಲ್ಲಿವೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಟೊಯೊಟಾ ಕ್ಯಾಮ್ರಿ

ಈ ಟೊಯೊಟಾ ಕ್ಯಾಮ್ರಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಆದರೆ ಈ ಟೊಯೊಟಾ ಕ್ಯಾಮ್ರಿ ಪ್ರೀಮಿಯಂ ಸೆಡಾನ್ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಛಾಪನ್ನು ಮೂಡಿಸಲು ಸಾಧ್ಯವಾಗಲಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಕ್ಯಾಮ್ರಿ ಹೈಬ್ರಿಡ್‌ನ ಎಂಟನೇ ತಲೆಮಾರಿನ ಮಾದರಿಯನ್ನು 2019ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು, ಈ ಟೊಯೊಟಾ ಕ್ಯಾಮ್ರಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಸುಪರ್ಬ್‌ಗೆ ಪೈಪೋಟಿಯನ್ನು ನೀಡಲಾಗುತ್ತಿದೆ. ಕ್ಯಾಮ್ರಿ ಹೈಬ್ರಿಡ್ ಭಾರತದಲ್ಲಿ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.40.59 ಲಕ್ಷಗಳಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಈ ಟೊಯೊಟಾ ಕ್ಯಾಮ್ರಿ ಕಾರಿಗೆ ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಇದು ಒಟ್ಟಾಗಿ 218 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಟೊಯೊಟಾ ಹೈಬ್ರಿಡ್ ಕಾರು 2.8 ಕಿ.ಮೀ.ನಷ್ಟು ಮೈಲೇಜ್ ಅನ್ನು ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಹ್ಯುಂಡೈ ಎಲಾಂಟ್ರಾ

ಈ ಹ್ಯುಂಡೈ ಎಲಾಂಟ್ರಾ ಪ್ರಸ್ತುತ ದೇಶದಲ್ಲಿ ಕೊರಿಯಾದ ವಾಹನ ತಯಾರಕರ ಪ್ರಮುಖ ಸೆಡಾನ್ ಕೊಡುಗೆಯಾಗಿದೆ ಮತ್ತು ಪ್ರಸ್ತುತ ಇದರ ಬೆಲೆ 17.83 - 21.10 ಲಕ್ಷ ರೂ. (ಎಕ್ಸ್ ಶೋ ರೂಂ). ಹ್ಯುಂಡೈ ಸೆಡಾನ್ ಅನ್ನು 2.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 152 ಪಿಎಸ್ ಮತ್ತು 192 ಎನ್ಎಂ ಉತ್ಪಾದಿಸುತ್ತದೆ,

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಜೊತೆಗೆ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 192 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಇದರ ಡೀಸೆಲ್ ಎಂಜಿನ್ 22.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಸ್ಕೋಡಾ ಸೂಪರ್ಬ್

ಬಿಎಸ್ 6 ಸ್ಕೋಡಾ ಸೂಪರ್ಬ್ ಫೇಸ್ ಲಿಫ್ಟ್ ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೀಮಿಯಂ ಸೆಡಾನ್ ಈ ವರ್ಷದ ಜನವರಿಯಲ್ಲಿ ಕೆಲವು ಹೆಚ್ಚುವರಿ ನವೀಕರಣಗಳನ್ನು ಸಹ ಪಡೆದುಕೊಂಡಿದೆ. ಈ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.31.99 ಲಕ್ಷಗಳಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರೀಮಿಯಂ ಸೆಡಾನ್ ಕಾರುಗಳಿವು

ಸ್ಕೋಡಾ ಸೂಪರ್ಬ್ ಸೆಡಾನ್ ಕಾರಿನಲ್ಲಿ ಲೀಟರ್ ನಾಲ್ಕು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವದಿಸಲಾಗಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಸ್ಕೋಡಾ ಸೂಪರ್ಬ್ ಕಾರು 15.10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Most Read Articles
ಹ್ಯುಂಡೈ ಈ ವರ್ಷದ ಆರಂಭದಲ್ಲಿ ಐ30 ಮತ್ತು ಐ30 ಎನ್ ಲೈನ್‌ನ ನವೀಕರಿಸಿದ ಆವೃತ್ತಿಯನ್ನು ಅನಾವರಣಗೊಳಿಸಿತ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೋಡೋಣ.

Kannada
English summary
Top 3 Most Fuel Efficient Premium Sedans In India. Read In Kannada.
Story first published: Monday, May 10, 2021, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X