ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಜರ್ಮನಿ ಮೂಲದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ತನ್ನ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.43.50 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಮಾದರಿಗೆ ಸ್ಟ್ಯಾಂಡರ್ಡ್ 220ಐ ಎಂ ಸ್ಪೋರ್ಟ್ ರೂಪಾಂತರಕ್ಕಿಂತ ಸುಮಾರು ರೂ.1.60 ಲಕ್ಷ ಹೆಚ್ಚು ದುಬಾರಿಯಾಗಿದೆ. ಕಂಪನಿಯು ಬಿಎಂಡಬ್ಲ್ಯು ಇಂಡಿವಿಜುವಲ್ ಹೈ-ಗ್ಲಾಸ್ ಶ್ಯಾಡೋ ಲೈನ್ ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ ಮತ್ತು ಹೊಸ ಮಾದರಿಯು ಕೇವಲ 24 ಯುನಿಟ್‌ಗಳಿಗೆ ಸೀಮಿತವಾಗಿರುತ್ತದೆ. ಇದು ಲಿಮಿಟೆಡ್ ಎಡಿಷನ್ ಆಗಿದೆ. ಈ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಬ್ಲ್ಯಾಕ್ ಸಫೈರ್ ಮತ್ತು ಆಲ್ಪೈನ್ ವೈಟ್ ಹಾಗೂ ಸೆನ್ಸಾಟೆಕ್ ಬ್ಲಾಕ್ ಮತ್ತು ಸೆನ್ಸಾಟೆಕ್ ಆಯ್ಸ್ಟರ್ ಎಂಬ ಡ್ಯುಯಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಮುಂಭಾಗದಲ್ಲಿ ಬ್ಲ್ಯಾಕ್ ಮೆಶ್-ಶೈಲಿಯ ಎಂ ಗ್ರಿಲ್, ಬ್ಲ್ಯಾಕ್ ORVM ಗಳು, 18-ಇಂಚಿನ ಎಂ ಪರ್ಫಾರ್ಮೆನ್ಸ್ ವೈ ಸ್ಪೋಕ್ ಅಲಾಯ್ ವ್ಹೀಲ್ ಗಳು ಫ್ಲೋಟಿಂಗ್ ಹಬ್, ಎಂ ಪರ್ಫಾರ್ಮೆನ್ಸ್ ರಿಯರ್ ಸ್ಪಾಯ್ಲರ್ ಮತ್ತು ಬ್ಲ್ಯಾಕ್ ಕ್ರೋಮ್ ಎಕ್ಸಾಸ್ಟ್ ಟಿಪ್ಸ್‌ನೊಂದಿಗೆ ಜೆಟ್ ಬ್ಲ್ಯಾಕ್ ಮ್ಯಾಟ್‌ನಲ್ಲಿದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಕ್ಯಾಬಿನ್ ಒಳಗೂ ಸ್ಪೋರ್ಟಿ ಟ್ರೀಟ್ಮೆಂಟ್ ಮುಂದುವರೆಯುತ್ತದೆ. ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಎಲೆಕ್ಟ್ರಿಕಲ್ ಮೆಮೊರಿ ಫಂಕ್ಷನ್ ನೊಂದಿಗೆ ಸ್ಪೋರ್ಟ್ ಸೀಟ್‌ಗಳನ್ನು ನೀಡುತ್ತದೆ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ ಮತ್ತು ಗೆಸ್ಚರ್ ಕಂಟ್ರೋಲ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ,

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಇದರೊಂದಿಗೆ ಪನರೋಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಇಲ್ಯುಮಿನೇಟೆಡ್ ಟ್ರಿಮ್ , ರೇರ್ ವಿವ್ ಕ್ಯಾಮೆರಾದೊಂದಿಗೆ ರಿವರ್ಸಿಂಗ್ ಅಸಿಸ್ಟ್ ಮತ್ತು ಪಾರ್ಕಿಂಗ್ ಅಸಿಸ್ಟ್ ಅನ್ನು ಒಳಗೊಂಡಿದೆ, ಇದರ ಜೊತೆಗೆ ಸ್ಟ್ಯಾಂಡರ್ಡ್ ಮಾದರಿಯಂತೇ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ನಲ್ಲಿ 2.0-ಲೀಟರ್, 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ನೊಂದಿಗೆ ಜೊಡಿಸಲಾಗಿದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಇನ್ನು ಈ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ನಲ್ಲಿ ಇಕೋ, ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿವೆ. ಬ್ರೇಕಿಂಗ್ ಕಾರ್ಯ, ಶಿಫ್ಟ್ ಪ್ಯಾಡಲ್‌ಗಳು ಮತ್ತು ಲಾಂಚ್ ಕಂಟ್ರೋಲ್ ನೊಂದಿಗೆ ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್ ಅವರ್ಯ್ ಮಾತನಾಡಿ, ಬಿಎಂಡಬ್ಲ್ಯು 2 ಸಿರೀಸ್ ಗ್ರ್ಯಾನ್ ಕೂಪೆಯ ಲಿಮಿಟೆಡ್ ಎಡಿಷನ್ ಈ ಹಬ್ಬದ ಸೀಸನ್ ಸಂಭ್ರಮಾಚರಣೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಯಶಸ್ವಿ 'ಬ್ಲ್ಯಾಕ್ ಶ್ಯಾಡೋ' ಎಡಿಷನ್ ಈಗ ಪಡೆಯುತ್ತದೆ. ಅದರ ಪೆಟ್ರೋಲ್ ಅವತಾರದಲ್ಲಿ ಡೈನಾಮಿಕ್ಸ್ ಮೇಲೆ ಸ್ಪಷ್ಟವಾದ ಗಮನವನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ,

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಇದು ಮೋಟಾರ್‌ಸ್ಪೋರ್ಟ್ ಉತ್ಸಾಹಿಗಳ ಅಗತ್ಯತೆಗಳಿಗೆ ಅನುಗುಣವಾಗಿರುತ್ತದೆ.ಇದಲ್ಲದೆ, BMW 'M' ಕಾರ್ಯಕ್ಷಮತೆಯ ಭಾಗಗಳು ಅತ್ಯುತ್ತಮವಾದ ಅಥ್ಲೆಟಿಕ್ ಅಂಚನ್ನು ನೀಡುತ್ತವೆ ಮತ್ತು ಇದು ಎಲ್ಲಾ ಅಂಶಗಳಲ್ಲಿ ಸ್ಪೋರ್ಟಿ ಪಾತ್ರವನ್ನು ಹೆಚ್ಚಿಸುತ್ತದೆ. ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷ ನಮ್ಮ ಗ್ರಾಹಕರಿಗೆ ಶೈಲಿ ಮತ್ತು ಕಾರ್ಯಕ್ಷಮತೆಯೊಂದಿಗೆ ಸಂತೋಷದ ಜಗತ್ತನ್ನು ಪ್ರವೇಶಿಸಲು ಒಂದು ಉತ್ತೇಜಕ ಅವಕಾಶವಾಗಿದೆ ಎಂದು ಹೇಳಿದರು

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಬಿಎಂಡಬ್ಲ್ಯು ತನ್ನ ಹೊಸ 5 ಸಿರೀಸ್ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್(BMW 530i M Sport 'Carbon Edition') ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.66.30 ಲಕ್ಷಗಳಾಗಿದೆ. ಈ ಹೊಸ ಕಾರನ್ನು ಸ್ಥಳೀಯವಾಗಿ ಭಾರತದಲ್ಲಿ ಕಂಪನಿಯ ಚೆನ್ನೈ ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಇನ್ನು ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಮಾದರಿಯ ಖರೀದಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಹಲವಾರು ಆಕರ್ಷಕ ಬಾಹ್ಯ ಅಂಶಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಕಿಡ್ನಿ ಗ್ರಿಲ್ ಮತ್ತು ಸ್ಪ್ಲಿಟರ್‌ಗಳ ಮೇಲೆ ಕಾರ್ಬನ್ ಫೈಬರ್ ಅಂಶವನ್ನು ಹೊಂದಿದೆ. ಅದರ ಜೊತೆಗೆ ಹೊರಗಿನ ಮೀರರ್ಸ್ ಕ್ಯಾಪ್‌ಗಳು ಕಾರ್ಬನ್ ಫೈಬರ್ ಜೊತೆಗೆ ಕಾರ್ಬನ್ ಫೈಬರ್ ಹಿಂಭಾಗದ ಸ್ಪೋಲಿಯರ್‌ನೊಂದಿಗೆ ಕೂಡ ಬರುತ್ತವೆ. ಇನ್ನು ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಕಾರಿನಲ್ಲಿ ಡಾರ್ಕ್ ಥೀಮ್ ಅನ್ನು 662ಎಂ 18-ಇಂಚಿನ ಜೆಟ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳೊಂದಿಗೆ ಸೈಡ್ ಪ್ರೊಫೈಲ್‌ಗೆ ಸಾಗಿಸಲಾಗುತ್ತದೆ.

ಭಾರತದಲ್ಲಿ ಹೊಸ BMW 220i Black Shadow Edition ಬಿಡುಗಡೆ

ಈ ಕಾರ್ಬನ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಲ್ಪೈನ್ ವೈಟ್ ಪೇಂಟ್ ವರ್ಕ್ ನಲ್ಲಿ ಪರಿಚಯಿಸಲಾಗಿದೆ. ಕಾರ್ ಕಾಂಟ್ರಾಕ್ಟ್ ಸ್ಟಿಚಿಂಗ್‌ನೊಂದಿಗೆ ಕಾಗ್ನ್ಯಾಕ್/ಕಪ್ಪು ಬಣ್ಣದ ಸಂಯೋಜನೆಯಲ್ಲಿ ಸೆನ್ಸಾಟೆಕ್ ಟ್ರಿಮ್ ಅನ್ನು ಪಡೆಯುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಅನ್ನು ಲಿಮಿಟೆಡ್ ಎಡಿಷನ್ ಆಗಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ,

Most Read Articles

Kannada
English summary
New bmw 220i black shadow edition launched in india price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X