ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಆಫ್-ರೋಡ್ ಚಾಲನೆಗಾಗಿ ವಿಶೇಷ ಸೌಲಭ್ಯಗಳನ್ನು ಹೊತ್ತುಬರುತ್ತಿರುವ ಫೋರ್ಸ್ ಮೋಟಾರ್ಸ್(Force Motors) ಕಂಪನಿಯ 2021ರ ಗೂರ್ಖಾ(Gurkha) ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಫೋರ್ಸ್ ಮೋಟಾರ್ಸ್ ಕಂಪನಿಯು ಇದೇ ತಿಂಗಳು 27ರಂದು ಹೊಸ ಗೂರ್ಖಾ ಕಾರಿನ ಬೆಲೆ ಮಾಹಿತಿಯನ್ನು ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದು, ಬೆಲೆ ಘೋಷಣೆಯೊಂದಿಗೆ ಹೊಸ ಕಾರಿನ ಖರೀದಿ ಅಧಿಕೃತ ಬುಕ್ಕಿಂಗ್ ಕೂಡಾ ಅಂದೇ ಆರಂಭಗೊಳ್ಳಲಿದೆ. ಬುಕ್ಕಿಂಗ್ ಆರಂಭಗೊಂಡ ನಂತರ ಅಕ್ಟೊಬರ್ 15ರಿಂದ ಹೊಸ ಕಾರಿನ ವಿತರಣೆಯು ಆರಂಭಗೊಳ್ಳಲಿದ್ದು, ಹೊಸ ಕಾರು ಮಹೀಂದ್ರಾ ಥಾರ್ ಕಾರಿಗೆ ಉತ್ತಮ ಪೈಪೋಟಿ ನೀಡಲಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಹೊಸ ಗೂರ್ಖಾ ಎಸ್‌ಯುವಿ ಮಾದರಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ನವೀಕೃತ ಗೂರ್ಖಾ ಎಸ್‌ಯುವಿ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಫೋರ್ಸ್ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಆಕ್ಸೆಸರಿಸ್ ಫೀಚರ್ಸ್ ಹೊರತುಪಡಿಸಿ ಹೆಚ್ಚುವರಿ ಮೊತ್ತದಲ್ಲಿ ಆಫ್-ರೋಡ್ ಚಾಲನೆ ಪೂರಕವಾದ ಮತ್ತಷ್ಟು ಹೊಸ ಸೌಲಭ್ಯಗಳನ್ನು ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಪಡೆದುಕೊಳ್ಳಬಹುದು.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಹೊಸ ಕಾರಿನಲ್ಲಿ ಆಸಕ್ತ ಗ್ರಾಹಕರು ಹೆಚ್ಚುವರಿ ಮೌಲ್ಯದೊಂದಿಗೆ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿಂಡ್ ಸ್ಕೀನ್ ಬಾರ್, ಲಗೇಜ್ ಸಂಗ್ರಹಿಸಲು ರೂಫ್ ಕ್ಯಾರಿಯರ್, ರಿಯರ್ ಪಿನ್ ಲ್ಯಾಡರ್, ಅಲಾಯ್ ಚಕ್ರದೊಂದಿಗೆ ಆಲ್ ಟೆರೇನ್ ಟೈರ್, ರಿಯರ್ ಸೈಡ್ ಫೇಸಿಂಗ್ ಚೈಲ್ಡ್ ಸೀಟ್ ಮತ್ತು ಟೈಲ್ ಲ್ಯಾಂಪ್ ಗ್ರಿಲ್ ನೀಡಲಾಗುತ್ತದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಇನ್ನು 2021ರ ಗೂರ್ಖಾ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಬ್ಲ್ಯಾಕ್ ಔಟ್ ಫ್ರಂಟ್ ಬಂಪರ್, ಎಂಜಿನ್ ಬಾಷ್ ಪ್ಲೇಟ್, ಫಾಗ್ ಲ್ಯಾಂಪ್, ಬಾಡಿ ಕ್ಲ್ಯಾಡಿಂಗ್, ಸ್ನೋರ್ಕಲ್ ಸೌಲಭ್ಯವಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಹೊಸ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಪ್ರಬಲ ಪೈಪೋಟಿ ನೀಡಲಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಹೊಸ ಗೂರ್ಖಾ ಆವೃತ್ತಿಯು 4116 ಎಂಎಂ ಉದ್ದ, 1812 ಎಂಎಂ ಎತ್ತರ, 2400 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಹೊಸ ಕಾರು ರೆಡ್, ಗ್ರಿನ್, ವೈಟ್, ಆರೇಂಜ್, ಗ್ರೆ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿಯು ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿಯಾಗಿ ರೂ. 11 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಲಾಗಿದೆ.

ಆಫ್ ರೋಡ್ ಖದರ್ ಹೆಚ್ಚಿಸಲು ಗೂರ್ಖಾ ಹೊಸ ಮಾದರಿಗೆ ವಿಶೇಷ ಆಕ್ಸೆಸರಿಸ್ ಪ್ಯಾಕೇಜ್

ಫೋರ್ಸ್ ಮೋಟಾರ್ಸ್ ಕಂಪನಿಯಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 3 ಡೋರ್ ಜೊತೆಗೆ 5 ಡೋರ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಆರಂಭಿಕವಾಗಿ 3 ಡೋರ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿರುವ ಕಂಪನಿಯು ಕೆಲ ತಿಂಗಳ ನಂತರ 5 ಡೋರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

More from DriveSpark

Article Published On: Saturday, September 18, 2021, 11:24 [IST]
English summary
New force gurkha suv accessories package and colours revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+