Mahindra Thar ಕಾರಿಗೆ ಪೈಪೋಟಿ ನೀಡಲು ಸಜ್ಜಾದ 2021 Force Gurkha ಹೊಸ ಟೀಸರ್ ಬಿಡುಗಡೆ
ಬಹುನೀರಿಕ್ಷಿತ ಬಿಎಸ್-6 Force Gurkha ಆಫ್-ರೋಡ್ ಎಸ್‌ಯುವಿ ಮಾದರಿಯು ಭಾರತದಲ್ಲಿ ಬಿಡುಗಡೆಗಾಗಿ ಅಂತಿಮ ಸಿದ್ದತೆಯಲ್ಲಿದ್ದು, ಹೊಸ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

2021ರ Gurkha ಬಿಎಸ್-6 ಆವೃತ್ತಿಯು ಕೋವಿಡ್ ಕಾರಣಕ್ಕಾಗಿ ವಿಳಂಬವಾಗಿ ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಕಾರಿನ ಟೀಸರ್ ಬಹಿರಂಗವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ Gurkha ಎಸ್‌ಯುವಿಯನ್ನು Force Motors ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಬಿಎಸ್-6 ಎಮಿಷನ್ ನಿಯಮದೊಂದಿಗೆ ಉನ್ನತೀಕರಣಗೊಂಡಿರುವ Force Gurkha ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್-ರೋಡ್ ಕೌಶಲ್ಯತೆಗೆ ಪೂರಕವಾದ ಹಲವು ಹೊಸ ತಾಂತ್ರಿಕ ಅಂಶಗಳಿವೆ.

ಹೊಸ ಎಮಿಷನ್ ನಿಯಮದಿಂದಾಗಿ ಕಾರಿನ ಎಂಜಿನ್ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದೆ.

ಜೊತೆಗೆ ಕಾರಿನ ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಗಮನಸೆಳೆಯಲಿದೆ.

ಪರ್ಫಾಮೆನ್ಸ್‌ಗೆ ಪೂರಕವಾದ ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಖದರ್‌ಗೆ ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

Gurkha ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಇದರೊಂದಿಗೆ ಹೊಸ Gurkha ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ Force Gurkha ಹೊಸ ಆವೃತ್ತಿಯು ಕಳೆದ ವರ್ಷದ ಜುಲೈ ವೇಳೆಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿತ್ತು. ಆದರೆ ಕೋವಿಡ್ ಪರಿಣಾಮ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಬಹುದಿನಗಳ ನಂತರ ಮರುಚಾಲನೆ ನೀಡಿದ್ದರಿಂದ ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಬೇಕಿತ್ತು.

ಆದರೆ ಈ ವರ್ಷ ಏಪ್ರಿಲ್ ವೇಳೆಗೆ ಕೋವಿಡ್ 2ನೇ ತೀವ್ರವಾದ ಪರಿಣಾಮ ಬಿಡುಗಡೆ ಪ್ರಕ್ರಿಯೆಯನ್ನು ಮತ್ತೆ ಮುಂದೂಡಿದ Force Motors ಕಂಪನಿಯು ಇದೀಗ ಅಂತಿಮ ಬಿಡುಗಡೆಯ ಯೋಜನೆಯಲ್ಲಿದ್ದು, ಶೀಘ್ರದಲ್ಲೇ ಮಾರಾಟ ಆರಂಭಿಸುವುದಾಗಿ ಭರವಸೆ ನೀಡಿದೆ.

ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ Mahindra Thar ಮಾದರಿಗೆ ಪ್ರಬಲ ಪೈಪೋಟಿಯಾಗಲಿದ್ದು, ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ Force Gurkha ಮಾದರಿಯು ಆಫ್-ರೋಡ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದು, ಹೊಸ ಕಾರು Thar ಮಾದರಿಯಲ್ಲೇ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳಲ್ಲಿ ಬಿಡುಗಡೆಗೊಳ್ಳಬಹುದಾಗಿದೆ.

Force Gurkha ಮಾದರಿಯ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಯು ಹೊಸ ಕಾರಿನ ಬೇಡಿಕೆಯನ್ನು ನಿರ್ಧರಿಸಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ Force Motors ಕಂಪನಿಯಯು 2021ರ Gurkha ಮಾದರಿಯಲ್ಲಿ ಸ್ಟ್ಯಾಂಡರ್ಡ್ 3 ಡೋರ್ ಜೊತೆಗೆ 5 ಡೋರ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡುತ್ತಿದೆ. ಆರಂಭಿಕವಾಗಿ 3 ಡೋರ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿರುವ ಕಂಪನಿಯು ಕೆಲ ತಿಂಗಳ ನಂತರ 5 ಡೋರ್ ಮಾದರಿಯನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








