ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ Ford Ecosport ಫೇಸ್‌ಲಿಫ್ಟ್ ವರ್ಷನ್
Ford India ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ Ecosport ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಮುಂಬರುವ ಅಕ್ಟೋಬರ್ ವೇಳೆಗೆ ಬಿಡುಗಡೆಗೆ ಸಿದ್ದವಾಗಿದೆ.

ವಿವಿಧ ಕಾರು ಸರಣಿಗಳಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿರುವ Ford ಕಂಪನಿಯು ಹೊಸ ಬದಲಾವಣೆಗಳ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, Ecosport ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಭಾರೀ ಬದಲಾವಣೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ವಿವಿಧ ಕಂಪನಿಗಳ ಹೊಸ ಆವೃತ್ತಿಗಳ ಬಿಡುಗಡೆಯ ನಂತರ ಮಾರಾಟದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ Ecosport ಆವೃತ್ತಿಯು ಕಳೆದ ತಿಂಗಳಿನಿಂದ ಕನಿಷ್ಠ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಬದಲಾವಣೆಗಳೊಂದಿಗೆ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಸಬ್ ಫೋರ್ ಮೀಟರ್ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವು ಹೊಸ ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, Ecosport ಕಾರಿಗಿಂತಲೂ ಕಡಿಮೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ.

ಆದರೆ Ecosport ಮಾದರಿಯಲ್ಲಿ 2017ರಿಂದ ಕೆಲವು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಯಾವುದೇ ಪ್ರಮುಖ ಬದಲಾವಣೆ ತರದ Ford ಕಂಪನಿಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ.

ಇದರಿಂದ ಫೇಸ್‌ಲಿಫ್ಟ್ ಮಾದರಿಯ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ Ford ಕಂಪನಿಯು ನ್ಯೂ ಜನರೇಷನ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಹೊಸ ಕಾರನ್ನು ಮುಂಬರುವ ಅಕ್ಟೋಬರ್ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಹೊಸ ಕಾರು ಬಿಡುಗಡೆಗಾಗಿ Ford ಕಂಪನಿಯು ಫೇಸ್‌ಲಿಫ್ಟ್ ಆವೃತ್ತಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಹೊಸ ಕಾರು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಉನ್ನತೀಕರಣಗೊಂಡಿದೆ.

ಹೊಸ ಕಾರು ಈಗಾಗಲೇ Ford ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡುತ್ತಿವುದು ಸಹ ಕಂಡುಬಂದಿದ್ದು, Endeavour ಮಾದರಿಯಲ್ಲಿರುವಂತೆ ಕ್ಲಾಸ್‌ಕ್ಲ್ಯಾಡಿಂಗ್ ಗ್ರಿಲ್, ಬ್ಲ್ಯಾಕ್ ಔಟ್ ಕಲರ್ ಆಯ್ಕೆಯನ್ನು ಹೊಂದಿರಲಿದೆ.

ಜೊತೆಗೆ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಆವೃತ್ತಿಗಾಗಿ ಸೆಲೆಕ್ಟ್ ಶಿಫ್ಟ್ ಟೆಕ್ನಾಲಜಿ ಆಧಾರಿತ ಎಎಂಟಿ ಗೇರ್‌ಬಾಕ್ಸ್ ಜೊತೆಗೆ ಮ್ಯಾನುವಲ್ ಆಗಿ ನಿಯಂತ್ರಣ ಮಾಡಬಹುದಾದ ಸ್ಪೋರ್ಟ್ ಬಟನ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇನ್ನು Ford ಕಂಪನಿಯು Ecosport ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಆಕ್ಟಿವ್ ವರ್ಷನ್ ಅನ್ನು ವಿದೇಶಿ ಮಾರುಕಟ್ಟೆಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, Ecosport ಆಕ್ವಿವಾ ಮಾದರಿಯಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿನ Ecosport ಫೇಸ್‌ಲಿಫ್ಟ್ ಬಿಡುಗಡೆಯಾಗಲಿದೆ.

Ecosport ಆಕ್ಟಿವಾ ಪ್ರೇರಣೆಯ ಫೇಸ್‌ಲಿಫ್ಟ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಗ್ರಾಹಕರ ಬೇಡಿಕೆಯಲ್ಲಿ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವ Ecosport ಮಾದರಿಯು ಬೇಡಿಕೆಯ ಸುಧಾರಣೆಗೆ ಹೊಸ ಬದಲಾವಣೆ ತುರ್ತು ಅವಶ್ಯಕತೆಯಿದೆ.

ಹೊಸ Ecosport ಆಕ್ಟಿವ್ ಕಾರು ಮಾದರಿಯು ಫೋರ್ಡ್ ನಿರ್ಮಾಣದ ಜನಪ್ರಿಯ 1.0-ಲೀಟರ್ ಇಕೋಬೂಸ್ಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದ್ದು, ಆನ್‌ರೋಡ್‌ನಲ್ಲಿ ಮಾತ್ರವಲ್ಲ ಆಫ್ ರೋಡ್ ಚಾಲನೆಯಲ್ಲೂ ಇದು ಅತ್ಯುತ್ತಮ ಪ್ರದರ್ಶನ ಹೊಂದಿದೆ.

Ford ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಮತ್ತು ಕ್ರಾಸ್ ಓವರ್ ಎಸ್‌ಯುವಿ ಮಾದರಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಉನ್ನತೀಕರಿಸುತ್ತಿದ್ದು, Ford ಮತ್ತೊಂದು ಜನಪ್ರಿಯ ಕಾರು ಮಾದರಿಯಾದ Puma ಆವೃತ್ತಿಯಿಂದಲೂ ಕೆಲವು ಫೀಚರ್ಸ್‌ಗಳನ್ನು ಹೊಸ Ecosport ಆಕ್ಟಿವ್ ಮಾದರಿಯಾಗಿ ಎರವಲು ಪಡೆದುಕೊಳ್ಳಬಹುದಾಗಿದೆ.

Ecosport ಆಕ್ಟಿವ್ ಮಾದರಿಯು ಸ್ಟ್ಯಾಂಡರ್ಡ್ Ecosport ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆಗಳನ್ನು ಹೊಂದಿದ್ದು, ಹೊರಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಬದಲಾವಣೆ ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಫ್ಲಕ್ಸ್ ಸ್ಕೀಡ್ ಪ್ಲೇಟ್, ನವೀಕೃತ ರಿಯರ್ ಬಂಪರ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಫ್ರಂಟ್ ಸೀಟ್‌ನಲ್ಲಿ ಆಕ್ಟಿವ್ ಬ್ಯಾಡ್ಜ್ ನೀಡಲಾಗಿದೆ.

ಇದಲ್ಲದೆ Ecosport ಆಕ್ಟಿವಾದಲ್ಲಿ ಮಡಿಕೆ ಮಾಡಬಹುದಾದ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಸ್ಮಾಟ್‌ಫೋನ್ ಇಂಟ್ರಾಕ್ಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಹೊಂದಿರುವ ಸ್ಟೀರಿಂಗ್ ವೀಲ್ಹ್ ಮೌಂಟೆಡ್ ಸೌಲಭ್ಯವಿದೆ.

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಬಿಎಸ್-6 Ecosport ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಆಕ್ಟಿವಾ ಸ್ಪೆಷಲ್ ಎಡಿಷನ್‌ನಲ್ಲಿ ಯುರೋ ಹೊಸ ಎಮಿಷನ್ ಅನುಸಾರವಾಗಿ ಅಭಿವೃದ್ದಿಗೊಂಡ 1.0-ಇಕೋಬೂಸ್ಟ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.


Click it and Unblock the Notifications








