ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಸ್ಕೋಡಾ ಆಟೋ ಕಂಪನಿಯು ಈ ಹೊಸ ಫ್ಯಾಬಿಯಾ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಸ್ಕೊಡಾ ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಫ್ಯಾಬಿಯಾ ಕಾರಿನ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಈ ಹೊಸ ಸ್ಕೋಡಾ ಫ್ಯಾಬಿಯಾ ಕಾರು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕಾರು ವಿಡಬ್ಲ್ಯೂ ಸಮೂಹದ ಎಮ್‌ಕ್ಯೂಬಿ ಎಒ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಪ್ರಸ್ತುತದ ಮಾದರಿಗಿಂತ ಗಾತ್ರಕ್ಕಿಂತ ದೊಡ್ಡದಾಗಿದೆ. ಹೊಸ ಸ್ಕೋಡಾ ಫ್ಯಾಬಿಯಾ ಕಾರು 4,107 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 2,564 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ.

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಹೊಸ ಸ್ಕೋಡಾ ಫ್ಯಾಬಿಯಾ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಕಾರಿನ್ ಮುಂಭಾಗದ ಗ್ರಿಲ್ ಮೊದಲಿಗಿಂತ ದೊಡ್ಡದಾಗಿದೆ, ಮತ್ತು ಹೆಡ್‌ಲೈಟ್‌ಗಳು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ತೀಕ್ಷ್ಣವಾಗಿ ಕಾಣುತ್ತವೆ. ಎಲ್ಇಡಿ ಟೈಲ್‌ಲೈಟ್‌ಗಳು ಸುಂದರವಾಗಿ ಕಾಣುತ್ತವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಇನ್ನು ಹಿಂಭಾಗದ ವಿಂಡ್‌ಸ್ಕ್ರೀನ್ ಕೂಪ್ ತರಹದ ಶೈಲಿಯನ್ನು ಹೊಂದಿದೆ.ಒಳಾಂಗಣ ವಿನ್ಯಾಸವನ್ನು ಇನ್ನೂ ಅನಾವರಣಗೊಳಿಸಲಾಗಿಲ್ಲ, ಆದರೆ ಕಂಪನಿಯು ಕೆಲವು ಫೀಚರ್ ಗಳ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಅದರಂತೆ ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಒಳಭಾಗದಲ್ಲಿ 6.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದನ್ನು 9.2-ಇಂಚಿನ ಯುನಿಟ್ ಆಗಿ ಅಪ್‌ಗ್ರೇಡ್ ಮಾಡಬಹುದಾಗಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಇನ್ನು ಡಿಜಿಟಲ್ ಕಾಕ್‌ಪಿಟ್ ಮತ್ತು ಎಲ್ಲಾ ಪ್ರಯಾಣಿಕರ ಸೀಟುಗಳಲ್ಲಿ ಐಎಸ್‌ಒಫಿಕ್ಸ್ ಮೌಂಟ್ಸ್ ಅನ್ನು ಒಳಗೊಂಡಿರುತ್ತದೆ. ಇನ್ನು ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ ನೀಡಲಾಗಿದೆ. ಇದಕ್ಕಾಗಿ ಇದರಲ್ಲಿ 9 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನಲ್ಲಿ 380 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಹಿಂಭಾಗದ ಸೀಟುಗಳನ್ನು ಮಡಿಚಿದಾಗ 1,190 ಲೀಟರ್ ನಷ್ಟು ಸ್ಪೇಸ್ ಲಭ್ಯವಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

2021ರ ಸ್ಕೋಡಾ ಫ್ಯಾಬಿಯಾ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ 1.0-ಲೀಟರ್, ಇನ್-ಲೈನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಎರಡನೇ ಎಂಜಿನ್ ಆಯ್ಕೆಯು 1.0-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ ಆಗಿದೆ. ಈ ಎಂಜಿನ್ ಅನ್ನು ಕೂಡ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಮೂರನೇ ಎಂಜಿನ್ 1.5 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ,

ಬಹುನಿರೀಕ್ಷಿತ 2021ರ ಸ್ಕೋಡಾ ಫ್ಯಾಬಿಯಾ ಕಾರಿನ ಮಾಹಿತಿ ಬಹಿರಂಗ

ಇನ್ನು ಈ ಹೊಸ ಸ್ಕೋಡಾ ಫ್ಯಾಬಿಯಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಇದರ ಬದಲು ಸ್ಕೋಡಾ ಕಂಪನಿಯು ಭಾರತದಲ್ಲಿ ಕುಶಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಸ್ಕೋಡಾ skoda
English summary
All-New 2021 Skoda Fabia Specs Revealed Ahead Of Debut This Year. Read In Kannada.
Story first published: Thursday, February 25, 2021, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X