ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ತನ್ನ ಬಹುನಿರೀಕ್ಷಿತ ಬಯೋನ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿದೆ, ಈ ಹೊಸ ಹ್ಯುಂಡೈ ಬಯೋನ್ ಮಾದರಿಯನ್ನು ಯುರೋಪ್‌ ಮಾರುಕಟ್ಟೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಬಯೋನ್ ಕಾಂಪ್ಯಾಕ್ಟ್ ಎಸ್‌ಯುವಿಯು ಹೊಸ ಐ20 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಬಯೋನ್ ಹ್ಯುಂಡೈನ ಚಿಕ್ಕ ಎಸ್‍ಯುವಿ ಆಗಿರುತ್ತದೆ. ಇದು ಯುರೋಪಿನ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹ್ಯುಂಡೈ ವೆನ್ಯೂ ಎಸ್‍ಯುವಿ ಮಾರಾಟವಾಗದ ಮಾರುಕಟ್ಟೆಗಳಲ್ಲಿ ಬಯೋನ್ ಮಾರಾಟವಾಗಲಿದೆ. ಈ ಬಯೋನ್ ಎಸ್‍ಯುವಿಯಲ್ಲಿ ಇಂಟಿರಿಯರ್ ನಲ್ಲಿ ಸುರಕ್ಷತಾ ಮತ್ತು ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿರುತ್ತದೆ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಹ್ಯುಂಡೈ ಬಯೋನ್ ಮಾದರಿಯಲ್ಲಿ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್, ಮೂರು-ಭಾಗದ ಮೈಲ್ ಲೈಟ್, ಏರ್ ಇನ್ ಟೆಕ್ ಬ್ಯಾಂಡ್ ಮತ್ತು ಕಡಿಮೆ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಎಲ್ಇಡಿ ಡಿಆರ್ಎಲ್ ಗಳನ್ನು ಮೇಲೆ ಇರಿಸಿದರೆ, ಮೈನ್ ಹೆಡ್ ಲ್ಯಾಂಪ್ ಅನ್ನು ಬಂಪರ್ ಮೇಲೆ ಇರಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಹ್ಯುಂಡೈ ಬಯೋನ್ ಸೈಡ್ ಪ್ರೊಫೈಲ್ ಏರೋ- ಆಕಾರದ ಸಿ-ಪಿಲ್ಲರ್, ಉದ್ದನೆಯ ಬಲವಾದ ಬೈಟ್ ಲೈನ್ ಅನ್ನು ಹೊಂದಿದೆ. ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಬಾಡಿಯ ಸುತ್ತ ಕಾಣಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹಿಂದಿನ ಪ್ರೊಫೈಲ್ ಏರೋ ಆಕಾರದ ಲೈಟ್ ಗಳನ್ನು ಹೊಂದಿವೆ. ಹ್ಯುಂಡೈ ಬಯೋನ್ 15 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 16- ಅಥವಾ 17-ಇಂಚಿನ ಅಲಾಯ್ ವ್ಹೀಲ್ ಆಯ್ಜೆಗಳನ್ನು ಹೊಂದಿವೆ. ಇನ್ನು ಬಯೋನ್ ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮ್ಯಾಂಗ್ರೋವ್ ಗ್ರೀನ್. ಫ್ಯಾಂಟಮ್ ಬ್ಲ್ಯಾಕ್‌ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳ ರೂಫ್ ಕೂಡ ಲಭ್ಯವಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಹ್ಯುಂಡೈ ಬಯೋನ್ ಫುಲ್ ಬ್ಲ್ಯಾಕ್, ಮತ್ತು ಡಾರ್ಕ್ ಗ್ರೇ ಎಂಬ ಎರಡೂ ಬಣ್ಣಗಳಲ್ಲಿ ಇಂಟಿರಿಯರ್ ಕೂಡಿದೆ. ಇನ್ನು ಇಂಟಿರಿಯರ್ ನಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಇನ್ನು ಇದರ ಲೋ ವೆರಿಯೆಂಟ್ ಗಳಲ್ಲಿ 8 ಇಂಚಿನ ಡಿಸ್ಪ್ಲೇ ಆಡಿಯೊ ಸಿಸ್ಟಮ್ ಅನ್ನು ಪಡೆಯುತ್ತವೆ. ಇನ್ನು ಈ ಹ್ಯುಂಡೈ ಬಯೋನ್ ಮಾದರಿಯಲ್ಲಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಇನ್ನು ಈ ಎಸ್‍ಯುವಿ ಮುಂಭಾಗದಲ್ಲಿ ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಮತ್ತು ಹಿಂಭಾಗಕ್ಕೆ ಒಂದನ್ನು ನೀಡಿದೆ. ಈ ಎಸ್‍ಯುವಿ ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಬಯಾನ್ ಹ್ಯುಂಡೈನ ಇತ್ತೀಚಿನ ಬ್ಲೂಲಿಂಕ್ ಸಂಪರ್ಕಿತ ಕಾರು ತಂತ್ರಜ್ಞಾನದೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹ್ಯುಂಡೈ ಬಯೋನ್ ಎಸ್‍ಯುವಿಯು 4,180 ಮಿ.ಮೀ ಉದ್ದ, 1,775 ಮಿ.ಮೀ ಅಗಲ ಮತ್ತು 1,490 ಮಿ.ಮೀ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 2,580 ಮಿ.ಮೀ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು 411-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೇಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಬಯೋನ್ ಕಾಂಪ್ಯಾಕ್ಟ್ ಎಸ್‍ಯುವಿ

ಹ್ಯುಂಡೈ ಬಯೋನ್ ಎಸ್‍ಯುವಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆ 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿಯನ್ನು ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯು ಇಕೋ, ನಾರ್ಮಲ್ ಮತ್ತು ಸ್ಪೋಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ.

Most Read Articles

Kannada
English summary
Hyundai Bayon Compact SUV Unveiled. Read In Kannada.
Story first published: Tuesday, March 2, 2021, 20:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X