ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಇವಿ(ಎಲೆಕ್ಟ್ರಿಕ್ ವೆಹಿಕಲ್) ಪೋರ್ಟ್ಫೋಲಿಯೊವನ್ನು ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ವಿಸ್ತರಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಪಿಟಿಐ ಜೊತೆ ಮಾತನಾಡಿದ ಎಂಜಿ ಮೋಟರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಅವರು ಭವಿಷ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿದ್ದೇವೆ. ನಮ್ಮ ಎರಡನೇ ಇವಿ ಕಾರನ್ನು ರೂ.20 ಲಕ್ಷ ಗಿಂತ ಕಡಿಮೆ ಬೆಲೆಯಲ್ಲಿ ನೋಡಬಹುದು. ಪ್ರಸ್ತುತ ಕರೋನಾ ಮತ್ತು ಉತ್ಪಾದನಾ ಸಾಮಗ್ರಿಗಳ (ವಿಶೇಷವಾಗಿ ಚಿಪ್ಸ್) ಕೊರತೆಯನ್ನು ಗಮನಿಸಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಎರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಉಳಿದಂತೆ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಪ್ರಸ್ತುತ ಎಂಜಿ ಝಡ್ಎಸ್ ಇವಿ ಮಾದರಿಯಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿ. ಇದನ್ನು ಮೂರು-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಇದು ಒಟ್ಟು 142.7 ಬಿಹೆಚ್‍ಪಿ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಹೊಸ ಎಂಜಿ ಕಾರು ಕೂಡ ಉತ್ತಮ ರೇಂಜ್ ಅನ್ನು ಹೊಂದಿರಬಹುದು.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಝಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯ 3,000 ಯೂನಿಟ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿರಬಹುದು.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಅಲ್ಲದೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಕಡಿಮೆ ತೆರಿಗೆಗಳು ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಿದಂತಹ ಹೆಚ್ಚಿನ ಪ್ರಯೋಜನಗಳ ನೀಡುತ್ತಿರುವುದರಿಂದ ಎಂಜಿ ಕಂಪನಿಯು ತನ್ನ ತನ್ನ ಇವಿ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಇದು ಉತ್ತಮ ಸಮಯವಾಗಿದೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರಾಟ ಹೆಚ್ಚಾಗಬೇಕಾದರೆ ಇವಿ ಚಾರ್ಜಿಂಗ್ ಮೂಲಸೌಕರ್ಯ ಇನ್ನೂ ಸಾಕಷ್ಟು ಸುಧಾರಿಸಬೇಕಾಗಿದೆ. ಈ ದಿಕ್ಕಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಯಲ್ಲಿ ಸಾಕಷ್ಟು ಇವಿ ತಯಾರಕರು ಸಹ ಕೈಜೋಡಿಸುತ್ತಿದ್ದಾರೆ

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಭಾರತೀಯ ಮಾರುಕಟ್ಟೆಗೆ ಎಂಜಿ ಮುಂಬರುವ ಇವಿ ಬಗ್ಗೆ ಯಾವುದೇ ವಿವರಗಳು ಇನ್ನೂ ಲಭ್ಯವಿಲ್ಲ. ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಹೊಸ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಈ ಹೊಸ ಝಡ್ಎಸ್ ಎಸ್‍ಯುವಿಯ ಪೆಟ್ರೋಲ್ ಮಾದರಿಯಾಗಿದ್ದು, ಈಗಾಗಲೇ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇನ್ನು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Monday, June 28, 2021, 19:30 [IST]
English summary
New MG Electric Car To Launch In India Within Next Two Years. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+