ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಆಟೋ ಬಿಡಿಭಾಗಗಳ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿದ್ದು, ವಾಹನಗಳ ಬೆಲೆ ಹೆಚ್ಚಳದ ಜೊತೆಗೆ ಇಂಧನಗಳ ಬೆಲೆಯಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಆಟೋ ಉದ್ಯಮವು ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳ ಬೆಲೆ ಏರಿಕೆಯೊಂದಿಗೆ ಇಂಧನಗಳ ಬೆಲೆ ಹೆಚ್ಚಳವು ಸಹ ವಾಹನ ಮಾಲೀಕತ್ವವನ್ನು ಮತ್ತಷ್ಟು ದುಬಾರಿಯಾಗಿಸುತ್ತಿದೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಹೊಸ ವಾಹನಗಳ ಬೆಲೆಯಲ್ಲಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಐಷಾರಾಮಿ ಕಾರುಗಳ ಮಾರಾಟವು ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಸಾಕಷ್ಟು ಇಳಿಕೆ ಕಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಐಷಾರಾಮಿ ಕಾರುಗಳು ಕಳೆದ ಒಂದು ವರ್ಷದಲ್ಲಿ ರೂ. 2 ಲಕ್ಷದಿಂದ ರೂ.5 ಲಕ್ಷದವರೆಗೆ ಬೆಲೆ ಹೆಚ್ಚಳ ಪಡೆದುಕೊಂಡಿರುವುದಕ್ಕೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ದೇಶಾದ್ಯಂತ ಈಗಾಗಲೇ ಇಂಧನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ವಾಹನ ಸವಾರರು ಇಂಧನ ಬೆಲೆ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.100 ದಾಟಿದ್ದು, ಡೀಸೆಲ್ ಬೆಲೆಯು ಕೂಡಾ ವಿವಿಧ ನಗರಗಳಲ್ಲಿ ರೂ.91 ರಿಂದ ರೂ. 93 ಬೆಲೆ ಹೊಂದಿದೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಕೂಡಾ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಕಾಣಲು ಪ್ರಮುಖ ಕಾರಣವಾಗುತ್ತಿದ್ದು, ಇಂಧನ ಬೆಲೆ ಇಳಿಕೆಗಾಗಿ ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಕೋವಿಡ್ ಆತಂಕದಿಂದಲೂ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿರುವ ಬೆನ್ನಲ್ಲೇ ಗ್ರಾಹಕರು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ವಾಹನಗಳ ಮುಖ ಮಾಡುತ್ತಿದ್ದಾರೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ನಿರಂತರ ಲಾಕ್‌ಡೌನ್ ಪರಿಣಾಮ ಪ್ರಮುಖ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಲಾಕ್‌ಡೌನ್ ವಿನಾಯ್ತಿ ನಂತರ ಆಟೋ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದ್ದರೂ ಗ್ರಾಹಕರಿಲ್ಲದೆ ಹಲವು ಕಾರು ಮಾರಾಟ ಕಂಪನಿಗಳು ಕದಮುಚ್ಚುವ ಸ್ಥಿತಿಗೆ ತಲುಪಿವೆ.

ಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳದಿಂದ ನಷ್ಟದ ಸುಳಿಯಲ್ಲಿ ಭಾರತೀಯ ಆಟೋ ಉದ್ಯಮ

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ಕಂಪನಿಗಳ ಕಾರು ಮಾರಾಟದಲ್ಲಿ ಶೇ. 40ರಿಂದ ಶೇ.60ರಷ್ಟು ಕುಸಿತ ಕಂಡುಬಂದಿದೆ.

Article Published On: Thursday, June 24, 2021, 11:07 [IST]
English summary
Vehicles Price And High Fuel Costs Impact To Automotive Industry. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+