'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಸೇವಾ ಖಾತ್ರಿ ನೀಡಲು 'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ್ದು, ಹೊಸ ಅಭಿಯಾನದಲ್ಲಿ ನಿಸ್ಸಾನ್ ಗ್ರಾಹಕರು ಪ್ರಮುಖ ಬಿಡಿಭಾಗಗಳ ಮೇಲೆ ಆಕರ್ಷಕ ಬೆಲೆಯಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನಯು ಈ ತಿಂಗಳ 20ರಿಂದ ಫೆಬ್ರುವರಿ 20ರ ತನಕ ಲಭ್ಯವಿರಲಿದ್ದು, 60 ಟಚ್ ಪಾಯಿಂಟ್‌ಗಳ ಉಚಿತ ಚೆಕ್ ಅಪ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಮ್ಯಾಗ್ನೈಟ್ ಕಾರಿನ ಮೂಲಕ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ನಿಸ್ಸಾನ್ ಕಂಪನಿಯು ದೇಶಾದ್ಯಂತ 12ನೇ ಆವೃತ್ತಿಯ ‘ಹ್ಯಾಪಿ ವಿಥ್ ನಿಸ್ಸಾನ್' ಆಫ್ಟರ್‌ಸೇಲ್ಸ್ ಸೇವಾ ಅಭಿಯಾನವನ್ನು ಒಂದು ತಿಂಗಳ ಕಾಲ ಆಯೋಜಿಸಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

ಆಫ್ಟರ್‌ಸೇಲ್ಸ್ ಸೇವಾ ಅಭಿಯಾನದಲ್ಲಿ ನಿಸ್ಸಾನ್ ಗ್ರಾಹಕರು ಹಲವು ಉಚಿತ ಸೇವೆಗಳ ಜೊತೆಗೆ ಕೆಲವು ಪ್ರಮುಖ ತಾಂತ್ರಿಕ ಅಂಶಗಳ ಸೇವೆಗಳನ್ನು ಅತಿ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

60 ಟಚ್ ಪಾಯಿಂಟ್‌ಗಳ ಜೊತೆಗೆ ಸರ್ವಿಸ್ ಮಾಡಿಕೊಡಲಾದ ಕಾರುಗಳಿಗೆ ಉಚಿತವಾಗಿ ಕಾರ್ ಟಾಪ್ ವಾಶ್, ಎಂಜಿನ್ ಆಯಿಲ್ ಫಿಲ್ಟರ್ ಜೋಡಣೆ ಮಾಡಲಿದ್ದು, ಕಾರ್ಮಿಕರ ಸೇವಾ ಶುಲ್ಕದ ಮೇಲೆ ಶೇ.20 ಮತ್ತು ಆಕ್ಸೆಸರಿಸ್‌ಗಳ ಸೇವೆ ಮೇಲೂ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

ಇನ್ನು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದ್ದು, ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

ಹೊಸ ಕಾರು ಕಳೆದ ವಾರ ಬೆಲೆ ಹೆಚ್ಚಳ ಪಡೆದುಕೊಂಡ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಪಡೆದುಕೊಂಡಿದ್ದು, ಆರಂಭಿಕ ಆವೃತ್ತಿಯು ಮಾತ್ರ ರೂ. 50 ಸಾವಿರ ಬೆಲೆ ಹೆಚ್ಚಳ ಪಡೆದುಕೊಂಡಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

ಮ್ಯಾಗ್ನೈಟ್ ಕಾರಿನ ಆರಂಭಿಕ ಮಾದರಿಯ ಬೆಲೆ ಹೆಚ್ಚಳ ಹೊರತಾಗಿ ಇನ್ನುಳಿದ ಆವೃತ್ತಿಗಳ ಬೆಲೆಯನ್ನು ಮೊದಲಿನಂತೆಯೇ ಮುಂದುವರಿಸಲಾಗಿದ್ದು, ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ರೇಟಿಂಗ್ಸ್ ಪಡೆದುಕೊಂಡ ನಂತರ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ. ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿ ಹೊಂದಿರುವ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

'ಹ್ಯಾಪಿ ವಿಥ್ ನಿಸ್ಸಾನ್' ಸೇವಾ ಅಭಿಯಾನ ಆರಂಭಿಸಿದ ನಿಸ್ಸಾನ್ ಇಂಡಿಯಾ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Most Read Articles

Kannada
English summary
Nissan Service Camp Till 20th February. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X