ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 36 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿವೆ. ಹೀಗಿರುವಾಗ ಹೊಸ ಕಾರಿನ ವಿತರಣೆ ಅವಧಿಯಲ್ಲಿ ಸಾಕಷ್ಟು ಹೆಚ್ಚಳವಿದ್ದು, ಉತ್ಪಾದನೆ ಹೆಚ್ಚಳದ ನಂತರ ಕಾಯುವಿಕೆ ಅವಧಿಯಲ್ಲಿ ಇನ್ನು ಕಡಿಮೆಯಾಗಿಲ್ಲ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ಮ್ಯಾಗ್ನೈಟ್ ಹೊಸ ಕಾರು ಮಾದರಿಯು ಮೊದಲ ತಿಂಗಳು ಪ್ರತಿ ದಿನ ಸರಾಸರಿಯಾಗಿ 1 ಸಾವಿರ ಗ್ರಾಹಕರು ಬುಕ್ಕಿಂಗ್ ಪಡೆದುಕೊಂಡಿತ್ತು. ಹೊಸ ಕಾರಿನೊಂದಿಗೆ ಹಲವು ದಾಖಲೆಗಳಿಗೆ ಕಾರಣವಾಗಿರುವ ನಿಸ್ಸಾನ್ ಕಂಪನಿಯು ಬುಕ್ಕಿಂಗ್ ಪ್ರಕ್ರಿಯೆ ಅನುಗುಣವಾಗಿ ಕಾರು ಉತ್ಪಾದನೆಯನ್ನು ತೀವ್ರಗೊಳಿಸಿದ್ದು, ಹೊಸ ಕಾರು ಖರೀದಿಗೆ ಹೊಸದಾಗಿ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ 2 ತಿಂಗಳಿನಿಂದ ಗರಿಷ್ಠ 6 ತಿಂಗಳು ಕಾಯಲೇಬೇಕಾದ ಅನಿವಾರ್ಯತೆಗಳಿವೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ನಿಸ್ಸಾನ್ ಕಂಪನಿಗೆ ಹೊಸ ಮ್ಯಾಗ್ನೈಟ್ ಕಾರು ಮಾದರಿಯು ಅತ್ಯುತ್ತಮ ಬೇಡಿಕೆ ತಂದುಕೊಡುತ್ತಿದ್ದು, ಹೊಸ ಕಾರು ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವುದೇ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲು ಪ್ರಮುಖ ಕಾರಣವಾಗಿದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಕೇವಲ 720 ಯನಿಟ್ ಮಾತ್ರ ಮಾರಾಟಗೊಳಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾರಿನ ಉತ್ಪಾದನಾ ಪ್ರಮಾಣವನ್ನು ಕಳೆದ ವಾರವೇ ಹೆಚ್ಚಿಸಿದೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಕನಿಷ್ಠ ಮೂರು ಸಾವಿರ ಯುನಿಟ್ ವಿತರಣೆಯ ಗುರಿಹೊಂದಲಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಳವಾಗುವ ಉತ್ಪಾದನೆಯೊಂದಿಗೆ ಕಾಯುವಿಕೆ ಅವಧಿಯು ತಗ್ಗಲಿದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಇನ್ನು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಹೊಸ ಮ್ಯಾಗ್ನೈಟ್ ಕಾರು ಮಾದರಿಯು ಅತ್ಯುತ್ತಮ ಬೇಡಿಕೆ ತಂದುಕೊಡುತ್ತಿದ್ದು, ಹೊಸ ಕಾರು ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವುದೇ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲು ಪ್ರಮುಖ ಕಾರಣವಾಗಿದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದ್ದು, ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಉತ್ತಮ ರೇಟಿಂಗ್ಸ್‌ ಪಡೆದುಕೊಂಡಿರುವುದು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಮ್ಯಾಗ್ನೈಟ್ ಕಾರು ಮಾದರಿಯು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ಆವೃತ್ತಿಗಳನ್ನು ಹೊಂದಿರುವ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಉತ್ಪಾದನೆ ಹೆಚ್ಚಳ ನಂತರವು ತಗ್ಗದ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿತರಣೆ ಅವಧಿ

ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

Most Read Articles

Kannada
English summary
Nissan Magnite Waiting Period Upto 6 Months. Read in Kannada.
Story first published: Thursday, January 28, 2021, 23:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X