ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

2021ರ ನವೆಂಬರ್ ತಿಂಗಳ ವಾಹನ ಮಾರಾಟ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಕಳೆದ ತಿಂಗಳು ವಾಹನಗಳ ಎಲ್ಲಾ ವಿಭಾಗಗಳು ಕುಸಿತವನ್ನು ದಾಖಲಿಸಿವೆ. ಆದರೆ ವಾಹನಗಳ ರಫ್ತಿನಲ್ಲಿ ಹೆಚ್ಚಳ ಕಂಡು ಬಂದಿದೆ. ನವೆಂಬರ್ ತಿಂಗಳಿನಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ 2,15,626 ಯುನಿಟ್‌, ತ್ರಿಚಕ್ರ ವಾಹನ ವಿಭಾಗದಲ್ಲಿ 22,471 ಯುನಿಟ್‌, ದ್ವಿಚಕ್ರ ವಾಹನ ವಿಭಾಗದಲ್ಲಿ 10,50,616 ಯುನಿಟ್‌ಗಳು ಮಾರಾಟವಾಗಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಒಟ್ಟಾರೆಯಾಗಿ ಕಳೆದ ತಿಂಗಳು 12,88,759 ಯುನಿಟ್ ವಾಹನಗಳು ಮಾರಾಟವಾಗಿವೆ. ಪ್ರಯಾಣಿಕ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ, ನವೆಂಬರ್ ತಿಂಗಳಲ್ಲಿ 2,15,626 ಯುನಿಟ್‌ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಈ ಮಾರಾಟ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳಿಗಿಂತ ಕಡಿಮೆಯಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ 2,64,898 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಇನ್ನು ಕಳೆದ ತಿಂಗಳ ರಫ್ತು ಬಗ್ಗೆ ಹೇಳುವುದಾದರೆ ನವೆಂಬರ್‌ನಲ್ಲಿ 44,265 ಯುನಿಟ್‌ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 38,300 ಯುನಿಟ್‌ ವಾಹನಗಳನ್ನು ರಫ್ತು ಮಾಡಲಾಗಿತ್ತು. ನವೆಂಬರ್‌ನಲ್ಲಿ 2,66,552 ಯುನಿಟ್ ವಾಹನಗಳನ್ನು ಉತ್ಪಾದಿಸಲಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ 2,94,596 ಯುನಿಟ್‌ ವಾಹನಗಳನ್ನು ಉತ್ಪಾದಿಸಲಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಚಿಪ್ ಕೊರತೆಯು ಪ್ರಯಾಣಿಕ ವಾಹನಗಳ ಮಾರಾಟದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ವಿಭಾಗದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 1,00,906 ಯುನಿಟ್ ಪ್ರಯಾಣಿಕ ಕಾರುಗಳು, 1,05,091 ಯುನಿಟ್ ಎಸ್‌ಯುವಿಗಳು ಹಾಗೂ 9,629 ಯುನಿಟ್ ವ್ಯಾನ್‌ಗಳು ಮಾರಾಟವಾಗಿವೆ. ಹಬ್ಬದ ಋತುವಿನಲ್ಲಿ ಬಿಡುಗಡೆಯಾದ ಹೊಸ ವಾಹನಗಳಿಂದ ಈ ಸೆಗ್ ಮೆಂಟಿನಲ್ಲಿ ಹೆಚ್ಚು ಪ್ರಯೋಜನವಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಈ ವಾಹನಗಳಿಂದ ಹೆಚ್ಚು ಬುಕ್ಕಿಂಗ್‌ಗಳು ದಾಖಲಾಗಿವೆ. ಆದರೆ ಪ್ರಪಂಚದಾದ್ಯಂತ ಎದುರಾಗಿರುವ ಚಿಪ್ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಸಕಾಲಕ್ಕೆ ವಾಹನಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ತ್ರಿಚಕ್ರ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ, ನವೆಂಬರ್ ತಿಂಗಳಲ್ಲಿ 22,471 ಯುನಿಟ್‌ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 24,071 ಯುನಿಟ್‌ ವಾಹನಗಳು ಮಾರಾಟವಾಗಿದ್ದವು. ಮತ್ತೊಂದೆಡೆ ರಫ್ತು ವಿಷಯದಲ್ಲಿ ಕಳೆದ ತಿಂಗಳು 42,431 ಯುನಿಟ್‌ ತ್ರಿ ಚಕ್ರ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 37,279 ಯುನಿಟ್‌ ತ್ರಿ ಚಕ್ರ ವಾಹನಗಳನ್ನು ರಫ್ತು ಮಾಡಲಾಗಿತ್ತು. ನವೆಂಬರ್‌ನಲ್ಲಿ 61,451 ಯುನಿಟ್ ತ್ರಿ ಚಕ್ರ ವಾಹನಗಳನ್ನು ಉತ್ಪಾದಿಸಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಈ ಪ್ರಮಾಣವು 2020ರ ನವೆಂಬರ್ ತಿಂಗಳಿನಲ್ಲಿ 65,460 ಯುನಿಟ್‌ಗಳಾಗಿತ್ತು. ಕೋವಿಡ್‌ನಿಂದಾಗಿ ಈ ವಿಭಾಗವು ಹೆಚ್ಚು ತತ್ತರಿಸಿದ್ದು, ಮಾರಾಟದಲ್ಲಿ 50% ನಷ್ಟು ಕುಸಿತ ಕಂಡು ಬಂದಿದೆ. ಈ ವಿಭಾಗವು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. ಈಗ ಈ ವಿಭಾಗದ ಮಾರಾಟವು ಸ್ವಲ್ಪ ಸುಧಾರಿಸಿದೆ. ಇನ್ನೂ ಕೋವಿಡ್ ಮುನ್ನ ಇದ್ದ ಮಟ್ಟವನ್ನು ತಲುಪಲು ಸಾಧ್ಯವಾಗದಿದ್ದರೂ ಪರಿಸ್ಥಿತಿಯು ತಕ್ಕ ಮಟ್ಟಿಗೆ ಸುಧಾರಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ದ್ವಿಚಕ್ರ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ, ನವೆಂಬರ್ ತಿಂಗಳಲ್ಲಿ 10,50,616 ಯುನಿಟ್‌ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ನವೆಂಬರ್'ನಲ್ಲಿ ಈ ಪ್ರಮಾಣವು 16,00,379 ಯುನಿಟ್‌ಗಳಾಗಿತ್ತು. ಮತ್ತೊಂದೆಡೆ ರಫ್ತಿನ ವಿಷಯದಲ್ಲಿ ಕಳೆದ ತಿಂಗಳು 3,56,659 ಯುನಿಟ್‌ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಕಳೆದ ವರ್ಷ ನವೆಂಬರ್‌ನಲ್ಲಿ 325,736 ಯುನಿಟ್‌ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿತ್ತು. ನವೆಂಬರ್‌ನಲ್ಲಿ 13,67,701 ಯುನಿಟ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲಾಗಿದ್ದರೆ, ಈ ಪ್ರಮಾಣವು 2020ರ ನವೆಂಬರ್ ತಿಂಗಳಿನಲ್ಲಿ 19,36,793 ಯುನಿಟ್‌ಗಳಾಗಿತ್ತು. ಕ್ವಾಡ್ರಿಸೈಕಲ್ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ ಕಳೆದ ತಿಂಗಳು 46 ಯುನಿಟ್‌ಗಳು ಕ್ವಾಡ್ರಿಸೈಕಲ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಮತ್ತೊಂದೆಡೆ ರಫ್ತು ವಿಷಯದಲ್ಲಿ ಕಳೆದ ತಿಂಗಳು 294 ಯುನಿಟ್‌ ಕ್ವಾಡ್ರಿಸೈಕಲ್ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಈ ಪ್ರಮಾಣವು ಕಳೆದ ವರ್ಷದ ನವೆಂಬರ್‌ನಲ್ಲಿ 228 ಯುನಿಟ್‌ಗಳಾಗಿತ್ತು. ನವೆಂಬರ್‌ನಲ್ಲಿ 308 ಯುನಿಟ್ ಕ್ವಾಡ್ರಿಸೈಕಲ್ ವಾಹನಗಳನ್ನು ಉತ್ಪಾದಿಸಲಾಗಿದೆ. ಈ ಪ್ರಮಾಣವು 2020ರ ನವೆಂಬರ್ ತಿಂಗಳಿನಲ್ಲಿ 330 ಯುನಿಟ್‌ಗಳಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಎಲ್ಲಾ ವಿಭಾಗಗಳಲ್ಲಿನ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ, ನವೆಂಬರ್ ತಿಂಗಳಲ್ಲಿ 12,88,759 ಯುನಿಟ್‌ಗಳು ಮಾರಾಟವಾಗಿವೆ. ಈ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳ 18,89,348 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ. ಮತ್ತೊಂದೆಡೆ ರಫ್ತಿನ ವಿಷಯದಲ್ಲಿ ಕಳೆದ ತಿಂಗಳು 4,43,649 ಯುನಿಟ್‌ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಕಳೆದ ವರ್ಷ ನವೆಂಬರ್‌ನಲ್ಲಿ 4,01,543 ಯುನಿಟ್‌ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿತ್ತು. ನವೆಂಬರ್‌ನಲ್ಲಿ 16,96,012 ಯುನಿಟ್ ವಾಹನಗಳನ್ನು ಉತ್ಪಾದಿಸಲಾಗಿದೆ. ಈ ಪ್ರಮಾಣವು 2020ರ ನವೆಂಬರ್ ತಿಂಗಳಿನಲ್ಲಿ 22,97,179 ಯುನಿಟ್‌ಗಳಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

ಕೋವಿಡ್ ಭೀತಿಯ ನಡುವೆಯೂ ಭಾರತೀಯ ಆಟೋ ಉದ್ಯಮವು ಸಾಕಷ್ಟು ಸುಧಾರಣೆ ಕಂಡಿದ್ದು, ವೈರಸ್ ಪರಿಣಾಮ ಬಿಡುಗಡೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುತ್ತಿವೆ. ಡಿಸೆಂಬರ್ ತಿಂಗಳ ಮಾರಾಟವು ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Passenger vehicle sales declines during november 2021 in domestic market details
Story first published: Friday, December 10, 2021, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X