ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಕಾರಿನ ಇಂಟಿರಿಯರ್ ಡಿಸೈನ್ ಬಹಿರಂಗ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿರುವ ಸಜ್ಜಾಗಿರುವ ಪ್ರವೈಗ್ ಡೈನಾಮಿಕ್ ನಿರ್ಮಾಣದ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಹೊಸ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಫೋಟೋಟೈಪ್ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ಬೆಂಗಳೂರು ಮೂಲದ ಪ್ರವೈಗ್ ಡೈನಾಮಿಕ್ ಕಂಪನಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, ವಿಶೇಷ ಫೀಚರ್ಸ್‌ವುಳ್ಳ ಹೊಸ ಕಾರಿನ ಇಂಟಿರಿಯರ್ ಮಾಹಿತಿಯು ಇದೀಗ ಬಹಿರಂಗವಾಗಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಉತ್ಪಾದನಾ ಕಾರು ಆವೃತ್ತಿಯು ಫೋಟೋಟೈಪ್ ಮಾದರಿಗಿಂತಲೂ ತುಸು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಬ್ಯಾಟರಿ ಪ್ಯಾಕ್ ಸೌಲಭ್ಯಗಳು ಕಾನ್ಸೆಪ್ಟ್ ಮಾದರಿಯಲ್ಲೇ ಮುಂದುವರಿಯಲಿವೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಸದ್ಯಕ್ಕೆ ಟೆಸ್ಟಿಂಗ್ ಮಾದರಿಯಲ್ಲಿನ ಫೀಚರ್ಸ್‌ಗಳು ಉತ್ಪಾದನಾ ಮಾದರಿಯಲ್ಲೂ ಅಳವಡಿಸಬಹುದಾದ ಸಾಧ್ಯತೆಗಳಿದ್ದು, ವಿವಿಧ ಡ್ರೈವಿಂಗ್ ಮೋಡ್, ಆರಾಮದಾಯಕವಾದ ಆಸನ ಸೌಲಭ್ಯ, ದೊಡ್ಡ ಗಾತ್ರದ ಇನ್ಪೋಟೈನ್ ಸಿಸ್ಟಂ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿವೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ವೆಹಿಕಲ್ ಮ್ಯಾನೆಜ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಹೊಸ ಕಾರಿನ ಇಂಟಿರಿಯರ್ ಸೌಲಭ್ಯಗಳು ಐಷಾರಾಮಿ ಕಾರುಗಳಂತೆ ಸಿದ್ದಗೊಳಿಸಲಾಗಿದೆ. ಪ್ರವೈಗ್ ಡೈನಾಮಿಕ್ ಕಂಪನಿಯ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಮಾದರಿಯು ಮೆಲ್ನೋಟಕ್ಕೆ ಟೆಸ್ಲಾ ಕಾರಿನಂತೆ ಕಂಡರೂ ವಿಭಿನ್ನ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಬ್ಯಾಟರಿ ಪ್ಯಾಕ್ ಜೋಡಣೆ ಪಡೆದುಕೊಂಡಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಎಕ್ಸ್ಟಿಷನ್ ಎಂಕೆ1 ಹೈ ಎಂಡ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 504ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸಾಮಾನ್ಯ ಕಾರುಗಳಂತೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಕೂಡಾ ಫರ್ಪಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, 96kWh ಲೀ-ಅಯಾನ್ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 30 ನಿಮಿಷಗಳಲ್ಲಿ ಗರಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಹಾಗೆಯೇ ಹೊಸ ಕಾರಿನಲ್ಲಿ ವಿವಿಧ ಡ್ರೈವ್ ಮೊಡ್‌ಗಳನ್ನು ನೀಡಲಾಗಿದ್ದು, 201.5-ಬಿಎಚ್‌ಪಿ ಉತ್ಪಾದನೆಯೊಂದಿಗೆ ಗಂಟೆಗೆ ಗರಿಷ್ಠ 196 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಇದರೊಂದಿಗೆ ಹೊಸ ಕಾರಿನ ಹೊರಭಾಗದ ವಿನ್ಯಾಸವು ಸಹ ಸೆಡಾನ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾನ್ಸೆಪ್ಟ್ ಮಾದರಿಯನ್ನು ಟೂ ಡೋರ್ ಕೂಪೆ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ. ಆದರೆ ಉತ್ಪಾದನಾ ಆವೃತ್ತಿಯು ಫೋರ್ ಡೋರ್ ಮಾದರಿಯಾಗಿರಲಿದ್ದು, ಭಾರತೀಯ ಕಾರು ಖರೀದಿದಾರರ ಅಭಿರುಚಿಗೆ ತಕ್ಕಂತೆ ಹೊಸ ಕಾರನ್ನು ಸಿದ್ದಪಡಿಸಲಾಗುತ್ತಿದೆ.

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯೊಂದಿಗೆ ಮೈಲೇಜ್ ಮಾಹಿತಿಯ ಹೊರತಾಗಿ ಒಳಭಾಗದ ತಾಂತ್ರಿಕ ಅಂಶಗಳನ್ನು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ವಿನ್ಯಾಸವನ್ನೇ ಉತ್ಪಾದನಾ ಆವೃತ್ತಿಯಲ್ಲೂ ಉಳಿಸಿಕೊಳ್ಳುವ ಸುಳಿವು ನೀಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಇಂಟಿರಿಯಲ್ ಡಿಸೈನ್ ಬಹಿರಂಗ

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಕಾರಿನ ಉತ್ಪಾದನಾ ಮಾದರಿಯನ್ನು ಶೀಘ್ರದಲ್ಲೇ ಅನಾವರಣಗೊಳಿಸುವ ಸಾಧ್ಯತೆಗಳಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

More from DriveSpark

Article Published On: Wednesday, January 13, 2021, 17:00 [IST]
English summary
Pravaig Reveals Extinction EV Interior. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+