ಬೆಂಗಳೂರು ಮೂಲದ ಪ್ರವೈಗ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ: ಸಿಂಗಲ್‌ ಚಾರ್ಜ್‌ನಲ್ಲಿ 500 ಕಿ.ಮೀ ಮೈಲೇಜ್

ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಬೆಂಗಳೂರು ಮೂಲದ ಆಟೋಮೋಟಿವ್ ಸ್ಟಾರ್ಟ್‌ಅಪ್ ಕಂಪನಿ 'ಪ್ರವೈಗ್' ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ 'ಡಿಫೈ' ಅನ್ನು ಬಿಡುಗಡೆ ಮಾಡಿದೆ. ದೇಶೀಯವಾಗಿ ನಿರ್ಮಿತಗೊಂಡಿರುವ ಈ ಎಲೆಕ್ಟ್ರಿಕ್ ಎಸ್‌ಯುವಿಯ ವಿನ್ಯಾಸ, ವೈಶಿಷ್ಟ್ಯಗಳು, ರೇಂಜ್ ಸೇರಿದಂತೆ ಮತ್ತಷ್ಟು ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ 'ಪ್ರವೈಗ್ ಡಿಫೈ' ಬೆಲೆ ರೂ. 39.50 ಲಕ್ಷ (ಎಕ್ಸ್ ಶೋ ರೂಂ)ವಾಗಿದೆ. ಕಂಪನಿಯು ಈ SUV ಗಾಗಿ ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಆದ್ದರಿಂದ ಆಸಕ್ತ ಗ್ರಾಹಕರು ರೂ. 51,000 ನೀಡಿ ಬುಕ್ ಮಾಡಬಹುದು. ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ವಿತರಣೆಗಳು ಏಪ್ರಿಲ್ 2023 ರ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಸುಮಾರು ವರ್ಷಗಳ ಸುದೀರ್ಘ ಪರೀಕ್ಷಾನಂತರ ಈ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಾಗಿದೆ.

ಹೊಸ ಪ್ರವಿಗ್ ಡಿಫೈ ಎಲೆಕ್ಟ್ರಿಕ್ ಎಸ್‌ಯುವಿ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಲೈಟ್‌ಬಾರ್ ಶೈಲಿಯ ಹೆಡ್‌ಲೈಟ್‌ಗಳನ್ನು ಹೊರತುಪಡಿಸಿ ಮುಂಭಾಗದ ತುದಿಯು ಸಂಪೂರ್ಣವಾಗಿ ಸುತ್ತುವರಿದಿದೆ. ಇದಲ್ಲದೆ, ಇದು ಮುಂಭಾಗ ಮತ್ತು ಹಿಂಭಾಗದ ವಿಂಡ್‌ಸ್ಕ್ರೀನ್‌ಗಳನ್ನು ಮತ್ತು ಕೂಪ್ ತರಹದ ನೋಟವನ್ನು ಹೊಂದಿದೆ. ಇದು ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆದಿದೆ. ಉಳಿದಂತೆ ಇದರಲ್ಲಿ ಇಂಟಿಗ್ರೇಟೆಡ್ ರೂಫ್ ಮೌಂಟೆಡ್ ಸ್ಪಾಯ್ಲರ್, ಟೈಲ್‌ಗೇಟ್ ಮತ್ತು ಲೈಟ್‌ಬಾರ್ ಶೈಲಿಯ ಟೈಲ್‌ಲೈಟ್‌ಗಳನ್ನು ಕಾಣಬಹುದು.

ಹೊಸ ಪ್ರವೈಗ್ ಡಿಫೈ ಎಸ್‌ಯುವಿ ಒಳಭಾಗಕ್ಕೆ ಬಂದರೆ ಇದು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಪಡೆದಿದೆ. ಹೊಸ SUV ಫ್ರೆಂಚ್ ಆಡಿಯೊ ಸ್ಪೆಷಲಿಸ್ಟ್ ಬ್ರ್ಯಾಂಡ್ Devialet ನಿಂದ 3D ವಾಯಿಸ್ ಅನ್ನು ಪಡೆದಿದೆ. ಸೀಟುಗಳು ಆರು-ಮಾರ್ಗದ ವಿದ್ಯುತ್ ಹೊಂದಾಣಿಕೆ ಮತ್ತು ವೆಂಟಿಲೇಷನ್ ಅನ್ನು ಪಡೆದಿದೆ. ಇದು 1,050 ಎಂಎಂ ಹೆಡ್‌ರೂಮ್ ಮತ್ತು 1,215 ಎಂಎಂ ಲೆಗ್‌ರೂಮ್ ಅನ್ನು ಹೊಂದಿದ್ದು ಪ್ರಯಾಣಿಕರು ತುಂಬಾ ಆರಾಮದಾಯಕವಾಗಿ ಪ್ರಯಾಣಿಸಬಹುದು.

ವೈಶಿಷ್ಟ್ಯಗಳಿಗೆ ವಿಷಯಕ್ಕೆ ಬಂದರೆ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಪ್ರತ್ಯೇಕ ಕ್ಲೈಮೆಟ್ ಕಂಟ್ರೋಲ್ ಜೋನ್‌ಗಳಿವೆ. ಜೊತೆಗೆ ಸಂಪರ್ಕಿತ ಕಾರ್ ಅಪ್ಲಿಕೇಶನ್ ಮೂಲಕ ಒಳಭಾಗವನ್ನು ಪೂರ್ವ-ನಿಯಂತ್ರಿಸಬಹುದು. ಇದು ಬಹು ವೈರ್‌ಲೆಸ್ ಚಾರ್ಜರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಬಹುದಾದ ಎರಡು ಹೈ-ಪವರ್ USB-C ಪೋರ್ಟ್‌ಗಳೊಂದಿಗೆ ಬರುತ್ತದೆ. ಇದಲ್ಲದೇ ಈ SUV ವಿಶಿಷ್ಟವಾದ ಕೀ ಕಾರ್ಡ್‌ನೊಂದಿಗೆ ಬರುತ್ತದೆ. ಆದ್ದರಿಂದ ಸಂಪರ್ಕಿತ ಕಾರನ್ನು ತಂತ್ರಜ್ಞಾನದ ಮೂಲಕ ಲಾಕ್/ಅನ್ಲಾಕ್ ಮಾಡಬಹುದು.

ಹೊಸ ಪ್ರವೈಗ್ ಡಿಫೈ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾಗಿದ್ದು ಅದು 402 bhp ಮತ್ತು 620 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 4.9 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯುತ್ತದೆ. ಗರಿಷ್ಠ ವೇಗ ಗಂಟೆಗೆ 210 ಕಿ.ಮೀ. ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು ದೊಡ್ಡ 90.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವುದರಿಂದ ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ ಗೂ ಹೆಚ್ಚು ವ್ಯಾಪ್ತಿಯನ್ನು ನೀಡುತ್ತದೆ.

ಚಾರ್ಜಿಂಗ್ ವಿಷಯಕ್ಕೆ ಬಂದರೆ, ವೇಗದ DC ಚಾರ್ಜರ್ ಮೂಲಕ ಕೇವಲ 30 ನಿಮಿಷಗಳಲ್ಲಿ 0 ರಿಂದ ಶೇ 80 ರಷ್ಟು ಚಾರ್ಜ್ ಆಗುತ್ತದೆ. ಆದರೆ ಹೋಮ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುವುದರಿಂದ ಸುಮಾರು ಎಂಟು ಗಂಟೆಗಳಲ್ಲಿ 300 ಕಿ.ಮೀ ವ್ಯಾಪ್ತಿಯನ್ನು ನೀಡುವಷ್ಟು ಚಾರ್ಜಿಂಗ್ ಮಾಡಬಹುದು. ಈ ಹೊಸ ಎಸ್‌ಯುವಿ 4.94 ಮೀಟರ್ ಉದ್ದ, 1.65 ಮೀಟರ್ ಎತ್ತರ ಮತ್ತು 1.94 ಮೀಟರ್ ಅಗಲ, 3.03 ಮೀಟರ್ ವ್ಹೀಲ್ ಬೇಸ್ ಹೊಂದಿದೆ.

ಕಂಪನಿಯು ಡೀಲರ್‌ಶಿಪ್‌ನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ತುರ್ತು ರಸ್ತೆಬದಿಯ ಸಹಾಯದ ಜೊತೆಗೆ ಭಾರತದಾದ್ಯಂತ 34,000 ಪಿನ್ ಕೋಡ್‌ಗಳಲ್ಲಿ ಡಿಫೈ ಎಸ್‌ಯುವಿ ಸೇವೆಯನ್ನು ನೀಡಲಾಗುವುದು ಎಂದು ಹೇಳಿದೆ. ಇದರ ಹೊರತಾಗಿ ಬ್ರ್ಯಾಂಡ್ 1 ವರ್ಷದ ಪೂರಕ ಸೇವೆಯನ್ನು ನೀಡುತ್ತದೆ. ಅದನ್ನು ನಾಲ್ಕು ವರ್ಷಗಳವರೆಗೆ ವಿಸ್ತರಿಸಬಹುದು. ಪ್ರವೈಗ್ ಡಿಫೈ ದೃಢವಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಹಾಗಾಗಿ ಬಳಕೆದಾರು ಸುರಕ್ಷತೆ ಬಗ್ಗೆ ಯಾವುದೇ ಭಯವಿಲ್ಲದೇ ಹೊಸ ಎಸ್‌ಯುವಿಯನ್ನು ಖರೀದಿಸಬಹುದು.

Most Read Articles

Kannada
English summary
Bangalore based pravaig ev suv launched in india
Story first published: Friday, November 25, 2022, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X