ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಲಕ್ನೋದಿಂದ ಗಾಜಿಪುರದವರೆಗಿನ 341 ಕಿ.ಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ರವರು ನಿನ್ನೆ ಮಧ್ಯಾಹ್ನ ಈ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ರೂ. 22,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಘಾಜಿಪುರ ನವದೆಹಲಿಯಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋ ನಡುವಿನ ಪ್ರಯಾಣದ ಸಮಯವನ್ನು ಸುಮಾರು 3.50 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಹಲವಾರು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಗಳ ಇತ್ತೀಚಿನ ಆವೃತ್ತಿಯಾಗಿದ್ದು, ಇದು ಉತ್ತರ ಪ್ರದೇಶದ ಹಲವು ಪ್ರದೇಶಗಳನ್ನು ದೇಶದ ಇತರಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಯಮುನಾ ಎಕ್ಸ್‌ಪ್ರೆಸ್‌ವೇ, ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ವೇ, ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ, ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇ ಹಾಗೂ ಮುಂಬರುವ ಗಂಗಾ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದಲ್ಲಿರುವ ಕೆಲವು ಪ್ರಮುಖ ವೇಗದ ಎಕ್ಸ್‌ಪ್ರೆಸ್‌ವೇಗಳಾಗಿವೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಹ ಆಗ್ರಾ - ಲಖನೌ ಎಕ್ಸ್‌ಪ್ರೆಸ್‌ವೇಯಂತೆ ಭಾರತೀಯ ವಾಯುಪಡೆಯ ವಿಮಾನಗಳಿಗೆ ತುರ್ತು ರನ್‌ವೇ ಆಗಿ ಬಳಸಲ್ಪಡುತ್ತದೆ. ಸುಲ್ತಾನ್‌ಪುರದ ಸಮೀಪವಿರುವ ಈ ಎಕ್ಸ್‌ಪ್ರೆಸ್‌ವೇನಲ್ಲಿ 3.3 ಕಿಮೀ ಉದ್ದದ ಏರ್ ಸ್ಟ್ರಿಪ್ ಅನ್ನು ಸಹ ನಿರ್ಮಿಸಲಾಗಿದೆ. ಇದು ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಏರ್‌ಸ್ಟ್ರಿಪ್ ಆಗಿ ಬಳಸಲು ಅನುವು ಮಾಡಿಕೊಡುತ್ತದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಪ್ರಯಾಣಿಕರು ಆರಂಭದಲ್ಲಿ ಯಾವುದೇ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಎಕ್ಸ್‌ಪ್ರೆಸ್‌ವೇಯಿಂದ ಕೇಂದ್ರ ಸರ್ಕಾರವು ಪ್ರತಿ ವರ್ಷ ರೂ. 202 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಿದೆ. ಪ್ರತಿ ಕಿ.ಮೀಗೆ ಟೋಲ್ ದರ ಹಾಗೂ ಟೋಲ್ ಶುಲ್ಕವನ್ನು ಈ ಎಕ್ಸ್ ಪ್ರೆಸ್ ವೇಯ ಎರಡೂ ಬದಿಗಳಲ್ಲಿ ವಿಧಿಸಲಾಗುತ್ತದೆ. ಈ ಎಕ್ಸ್ ಪ್ರೆಸ್ ವೇಯಲ್ಲಿ ಲಕ್ನೋ - ಆಗ್ರಾ ಎಕ್ಸ್‌ಪ್ರೆಸ್‌ವೇದಷ್ಟೇ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಹೊಸದಾಗಿ ನಿರ್ಮಾಣವಾಗಿರುವ ಈ ಎಕ್ಸ್ ಪ್ರೆಸ್ ವೇ ಮೂಲಕ ಪ್ರತಿ ನಿತ್ಯ 15 ರಿಂದ 20 ಸಾವಿರ ವಾಹನಗಳು ಸಂಚರಿಸಲಿದ್ದು, ಕ್ರಮೇಣ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ. ಪೂರ್ವ ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಬರುವ ಜನರು ದೆಹಲಿ ನೋಯ್ಡಾಕ್ಕೆ ಹೋಗಲು ಈ ಎಕ್ಸ್‌ಪ್ರೆಸ್‌ವೇ ಜೊತೆಗೆ ಲಕ್ನೋ ಆಗ್ರಾ ಎಕ್ಸ್‌ಪ್ರೆಸ್‌ವೇ ಹಾಗೂ ಯಮುನಾ ಎಕ್ಸ್‌ಪ್ರೆಸ್‌ವೇ ಬಳಸಬೇಕು ಎಂಬುದು ಯುಪಿಡಿಎ ಆಶಯ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಇದರಿಂದ ಈ ಎಕ್ಸ್‌ಪ್ರೆಸ್‌ವೇ ಗರಿಷ್ಠವಾಗಿ ಬಳಕೆಯಾಗಲಿದೆ. ಜೊತೆಗೆ ಟೋಲ್‌ನಿಂದ ಯುಪಿಡಿಎ ಆದಾಯವೂ ಹೆಚ್ಚಾಗುತ್ತದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಇವುಗಳಲ್ಲಿ ಲಕ್ನೋ, ಸುಲ್ತಾನಪುರ, ಫೈಜಾಬಾದ್, ಅಂಬೇಡ್ಕರ್ ನಗರ, ಅಜಂಗಢ, ಬಾರಾಬಂಕಿ, ಅಮೇಥಿ, ಮೌ ಹಾಗೂ ಗಾಜಿಪುರಗಳು ಸೇರಿವೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ನಂತರ ಇದನ್ನು ಬಲ್ಲಿಯಾವರೆಗೆ ವಿಸ್ತರಿಸಲಾಗುವುದು. ಈ ಎಕ್ಸ್‌ಪ್ರೆಸ್‌ವೇ ಪ್ರಮುಖ ನಗರಗಳಾದ ವಾರಣಾಸಿ, ಅಯೋಧ್ಯೆ, ಗೋರಖ್‌ಪುರ ಹಾಗೂ ಅಲಹಾಬಾದ್ ಅನ್ನು ಲಿಂಕ್ ರಸ್ತೆಗಳ ಮೂಲಕ ಸಂಪರ್ಕಿಸುತ್ತದೆ. 341 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ ಅಳವಡಿಸಲಾಗಿದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಎಕ್ಸ್ ಪ್ರೆಸ್ ವೇನಲ್ಲಿ ಪ್ರಾಣಿಗಳು ಬರದಂತೆ ತಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಬೇಲಿ ಹಾಕಲಾಗಿದೆ. ಇದಲ್ಲದೇ ಬೀದಿ ಪ್ರಾಣಿಗಳನ್ನು ಹಿಡಿಯಲು ಎಕ್ಸ್‌ಪ್ರೆಸ್‌ನಲ್ಲಿ ಹಲವು ತಂಡಗಳನ್ನು ನಿಯೋಜಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಎಕ್ಸ್‌ಪ್ರೆಸ್‌ವೇಯ ಪ್ರತಿ ಪ್ಯಾಕೇಜ್‌ನಲ್ಲಿ ಜೀವ ರಕ್ಷಕ ವ್ಯವಸ್ಥೆಯನ್ನು ಹೊಂದಿರುವ ತಲಾ ಎರಡು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಸೈನಿಕ ಕಲ್ಯಾಣ ಮಂಡಳಿ ಇಲ್ಲಿ ತನ್ನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಕ್ರ್ಯಾಶ್ ಬ್ಯಾರಿಯರ್‌ಗಳೊಂದಿಗೆ 20 ಗಸ್ತು ವಾಹನಗಳನ್ನು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯೋಜಿಸಲಾಗಿದೆ. ಅಂದ ಹಾಗೆ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಈ ವರ್ಷದ ಫೆಬ್ರವರಿ 15 ರಿಂದ ಭಾರತದಾದ್ಯಂತ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಿಗೂ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್ ಅಳವಡಿಕೆಯಿಂದಾಗಿ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯವು ಗಣನೀಯವಾಗಿ ಕಡಿಮೆಯಾಗಿದ್ದು, ಪಾರದರ್ಶಕತೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಮಾರು 722 ಟೋಲ್ ಪ್ಲಾಜಾಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ 196 ಟೋಲ್ ಪ್ಲಾಜಾಗಳು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ವಿಧಿಸುತ್ತವೆ. ಒಟ್ಟು ಟೋಲ್ ಶುಲ್ಕದಲ್ಲಿ 82% ನಷ್ಟು ಶುಲ್ಕವು ಕಮರ್ಷಿಯಲ್ ವಾಹನಗಳಿಂದ ಬರುತ್ತಿದೆ. ಒಟ್ಟು ಟೋಲ್ ಶುಲ್ಕ ಸಂಗ್ರಹದಲ್ಲಿ ಕಾರುಗಳು 18% ನಷ್ಟು ಕೊಡುಗೆ ನೀಡುತ್ತವೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಫಾಸ್ಟ್‌ಟ್ಯಾಗ್ ಜಾರಿಯಾದ ನಂತರ ಟೋಲ್ ಪ್ಲಾಜಾಗಳ ಆದಾಯ ಸಂಗ್ರಹವು ಗಣನೀಯವಾಗಿ ಹೆಚ್ಚಿದೆ. ವಾಹನಗಳ ವಿಂಡ್ ಶೀಲ್ಡ್ ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತದೆ. ಈ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳು ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ಗೆ ಲಿಂಕ್ ಮಾಡಲಾದ ಚಿಪ್ ಅನ್ನು ಒಳಗೊಂಡಿರುತ್ತವೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಅಲ್ಲಿರುವ ಸಿಸ್ಟಂ ರೇಡಿಯೊ ಸಿಗ್ನಲ್ ಮೂಲಕ ಚಿಪ್ ಅನ್ನು ಪತ್ತೆ ಮಾಡಿ, ನಿಗದಿತ ಟೋಲ್ ಶುಲ್ಕವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ನಿಂದ ಕಡಿತಗೊಳಿಸುತ್ತದೆ. ಫಾಸ್ಟ್‌ಟ್ಯಾಗ್ ವಿವಿಧ ವಲಯಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಡಿಜಿಟಲೀಕರಣದ ಭಾಗವಾಗಿದೆ.

ನವದೆಹಲಿ ಲಕ್ನೋ ನಡುವಿನ ಪ್ರಯಾಣದ ಅವಧಿಯನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಈ ಎಕ್ಸ್‌ಪ್ರೆಸ್‌ವೇ

ಫಾಸ್ಟ್‌ಟ್ಯಾಗ್‌ಗಳನ್ನು ವಿವಿಧ ಬ್ಯಾಂಕ್‌ಗಳು ಹಾಗೂ ಡಿಜಿಟಲ್ ವ್ಯಾಲೆಟ್ ಕಂಪನಿಗಳು ನೀಡುತ್ತವೆ. ಫಾಸ್ಟ್‌ಟ್ಯಾಗ್ ಖರೀದಿಸಲು ವಾಹನದ ನೋಂದಣಿ ದಾಖಲೆ ಹಾಗೂ ಗ್ರಾಹಕರ ಐಡಿ ಅಗತ್ಯವಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Purvanchal expressway reduces travelling time between delhi and gazipur details
Story first published: Wednesday, November 17, 2021, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X