Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

By Manoj Bk

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಹೈ ಎಂಡ್ ಕಾರುಗಳಲ್ಲಿ ಎಲೆಕ್ಟ್ರಿಕ್ ಸನ್ ರೂಫ್ ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಕ್ಯಾಬಿನ್ ಅನ್ನು ಹೆಚ್ಚು ವಿಶಾಲವಾಗಿಸಲು ಹಾಗೂ ಪ್ರೀಮಿಯಂ ಆಗಿಸಲು ಸನ್ ರೂಫ್ ಗಳನ್ನು ನೀಡುತ್ತಿವೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಸನ್ ರೂಫ್ ನೀಡಲಾಗುತ್ತಿದೆ. ಸನ್ ರೂಫ್ ಹೊಂದಿರುವ ಕಾರುಗಳ ಬೆಲೆ ರೂ. 10 ಲಕ್ಷದಿಂದ ರೂ. 12 ಲಕ್ಷಗಳಾಗಿರುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡುವ Hyundai, Tata Motors, Mahindra, Kia Motors, Honda ಸೇರಿದಂತೆ ಹಲವು ಕಂಪನಿಗಳು ತಮ್ಮ ಕಾರುಗಳಲ್ಲಿ ಎಲೆಕ್ಟ್ರಿಕ್ ಸನ್ ರೂಫ್ ಗಳನ್ನು ನೀಡುತ್ತಿವೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಆದರೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ Maruti Suzuki ತನ್ನ ಯಾವುದೇ ಕಾರುಗಳಲ್ಲಿ ಸನ್‌ರೂಫ್ ಫೀಚರ್ ಅನ್ನು ಇನ್ನೂ ನೀಡಿಲ್ಲ ಎಂಬುದು ಗಮನಾರ್ಹ. ಯಾವ ಕಾರಣಕ್ಕೆ Maruti Suzuki ಕಂಪನಿಯು ತನ್ನ ಕಾರುಗಳಲ್ಲಿ ಸನ್ ರೂಫ್'ಗಳನ್ನು ನೀಡುತ್ತಿಲ್ಲ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಬೇಸಿಗೆಯಲ್ಲಿ ಸೀಮಿತ ಬಳಕೆ

Maruti Suzuki ಕಾರುಗಳಲ್ಲಿ ಸನ್ ರೂಫ್ ನೀಡದಿರುವುದಕ್ಕೆ ಪ್ರಮುಖ ಕಾರಣವೆಂದರೆ ಬದಲಾಗುವ ಹವಾಮಾನ. ಭಾರತದ ಹವಾಮಾನ ಸ್ಥಿತಿಯನ್ನು ಗಮನಿಸಿದರೆ ಇಲ್ಲಿನ ತಾಪಮಾನವು ಬೇಸಿಗೆಯಲ್ಲಿ 50 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇಸಿಗೆಯಲ್ಲಿ ಸನ್ ರೂಫ್ ಬಳಕೆ ತುಂಬಾ ಕಡಿಮೆ ಎಂದೇ ಹೇಳಬಹುದು.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಕೂಲಿಂಗ್ ಸಿಸ್ಟಂ ಮೇಲೆ ಒತ್ತಡ

ಭಾರತದಲ್ಲಿರುವ ಕಾರುಗಳಲ್ಲಿ ಸನ್ ರೂಫ್ ಫೀಚರ್ ಬಳಕೆ ಸೀಮಿತ ಎಂದು Maruti Suzuki ಕಂಪನಿ ಹೇಳುತ್ತದೆ. ಇದರ ಜೊತೆಗೆ ಸನ್ ರೂಫ್ ಕಾರುಗಳಲ್ಲಿರುವ ಏರ್ ಕೂಲಿಂಗ್ ಸಿಸ್ಟಂ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತದೆ. ಸನ್ ರೂಫ್ ತೆರೆದಿರುವಾಗ, ಕೂಲಿಂಗ್ ಸಿಸ್ಟಂ ಕ್ಯಾಬಿನ್ ಅನ್ನು ತಣ್ಣಗಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದರ ಪರಿಣಾಮವಾಗಿ ಹೆಚ್ಚು ಇಂಧನ ಬಳಕೆಯಾಗುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಸುರಕ್ಷತೆ ಹಾಗೂ ನಿರ್ವಹಣೆ

Maruti Suzuki ಕಂಪನಿಯು ತನ್ನ ಕಾರುಗಳಲ್ಲಿ ಸನ್‌ರೂಫ್ ಅನ್ನು ಸುರಕ್ಷತಾ ಕಾರಣಗಳಿಗಾಗಿ ನೀಡುವುದಿಲ್ಲ. ಮಕ್ಕಳು ತಮ್ಮ ತಲೆಯನ್ನು ಸನ್ ರೂಫ್ ನಿಂದಹೊರ ಹಾಕುವ ಸಾಧ್ಯತೆಗಳಿರುತ್ತವೆ. ಇದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ Maruti Suzuki ಕಂಪನಿಯು ತನ್ನ ಕಾರುಗಳಲ್ಲಿ ಸನ್ ರೂಫ್ಫೀಚರ್ ನೀಡುವುದಿಲ್ಲ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

Maruti Suzuki ತನ್ನ ಕಾರುಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತದೆ. ಸನ್‌ರೂಫ್ ಫೀಚರ್ ನೀಡುವುದರಿಂದ ಕಾರುಗಳ ಬೆಲೆ ಏರಿಕೆಯಾಗುತ್ತದೆ. ಸನ್‌ರೂಫ್‌ನಲ್ಲಿರುವ ರಬ್ಬರ್ ಹಾಗೂ ಸೀಲ್‌ಗಳನ್ನು ನಿಯಮಿತವಾಗಿ ನಿರ್ವಹಿಸ ಬೇಕಾಗುತ್ತದೆ. ಇದರಿಂದ ಸರ್ವೀಸ್ ಚಾರ್ಜ್ ಸಹ ಹೆಚ್ಚುತ್ತದೆ. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಕ್ಯಾಬಿನ್‌ನಲ್ಲಿ ಸೋರಿಕೆಗೆ ಕಾರಣವಾಗಿ, ಅನೇಕ ಸಮಸ್ಯೆಗಳಿಗೆ ಮೂಲವಾಗಬಹುದು.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಭವಿಷ್ಯದಲ್ಲಿ Maruti Suzuki ಸನ್ ರೂಫ್ ತರಬಹುದೇ?

Maruti Suzuki ಭವಿಷ್ಯದಲ್ಲಿ ತನ್ನ ಕಾರುಗಳಲ್ಲಿ ಸನ್ ರೂಫ್ ವೈಶಿಷ್ಟ್ಯಗಳನ್ನು ನೀಡದಿರುವುದನ್ನು ತಳ್ಳಿ ಹಾಕುವಂತಿಲ್ಲ. ಸನ್ ರೂಫ್ ಗಳಿಗೆ ಬೇಡಿಕೆ ಹೆಚ್ಚಾದರೆMaruti Suzuki ಕಂಪನಿಯು ಭವಿಷ್ಯದಲ್ಲಿ ಅವುಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಭವಿಷ್ಯದಲ್ಲಿ Maruti Suzuki ಕಾರುಗಳು ಸನ್ ರೂಫ್ ಹೊಂದ ಬಹುದು. ಇತರ ಕಂಪನಿಗಳ ಸ್ಪರ್ಧೆಯನ್ನು ಪರಿಗಣಿಸಿ Maruti Suzuki ಕಂಪನಿಯು ಶೀಘ್ರದಲ್ಲೇ ಈ ಫೀಚರ್ ಅನ್ನು ಕೆಲವು ಮಾದರಿಗಳಲ್ಲಿ ನೀಡಬಹುದು.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಸನ್ ರೂಫ್ ಸಹ ಹಲವಾರು ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿದೆ. ಸನ್ ರೂಫ್ ನಿಂದಾಗುವ ಅನುಕೂಲಗಳೇನು ಎಂಬುದನ್ನು ನೋಡುವುದಾದರೆ, ಸನ್ ರೂಫ್ ಕಾರಿಗೆ ತನ್ನದೇ ಆದ ಶೈಲಿಯನ್ನು ನೀಡುತ್ತದೆ. ಸನ್‌ರೂಫ್ ತೆರೆದು ಚಾಲನೆ ಮಾಡುವಾಗ ಕ್ಯಾಬಿನ್‌ನಲ್ಲಿ ತಾಜಾ ಗಾಳಿ ಬರುತ್ತದೆ. ಸನ್ ರೂಫ್ ಒಂದು ರೀತಿಯ ಹಿತಕರ ಅನುಭವವನ್ನು ನೀಡುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಕಾರಿನ ವಿಂಡೋಗಳನ್ನು ತೆರೆದರೆ ಬೀಸುವ ಗಾಳಿ ಹೆಚ್ಚು ಶಬ್ದವನ್ನುಂಟು ಮಾಡುತ್ತದೆ. ಇದರಿಂದ ಸಹ ಪ್ರಯಾಣಿಕರೊಂದಿಗೆ ಮಾತನಾಡಲು ಗದ್ದಲದ ವಾತಾವರಣ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸನ್ ರೂಫ್ ಗಳು ನೆರವಿಗೆ ಬರುತ್ತವೆ. ಇದರಿಂದ ಹೊರಗಿನಿಂದ ಬರುವ ಶಬ್ದವನ್ನು ಕಡಿಮೆ ಮಾಡಬಹುದು.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಮಳೆಗಾಲದಲ್ಲಿ ಸನ್ ರೂಫ್ ಮೇಲೆ ಬೀಳುವ ಮಳೆ ಹನಿಗಳ ನೋಟವು ಮನಸ್ಸಿಗೆ ಮುದ ನೀಡುತ್ತದೆ. ಹಗಲು ವೇಳೆಯಲ್ಲಿ ಸನ್ ರೂಫ್ ಕ್ಯಾಬಿನ್ ನಲ್ಲಿ ಹೆಚ್ಚು ಬೆಳಕು ಬರುವಂತೆ ಮಾಡುತ್ತದೆ. ಜೊತೆಗೆ ಚಾಲನೆ ಮಾಡುವಾಗ ಆಹ್ಲಾದಕರವಾದ ಅನುಭವ ಉಂಟಾಗುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಇನ್ನು ಸನ್ ರೂಫ್ ನಿಂದಾಗುವ ಅನಾನುಕೂಲಗಳ ಬಗ್ಗೆ ನೋಡುವುದಾದರೆ, ಸನ್‌ರೂಫ್‌ ಹೊಂದಿರುವ ಹೊಸ ಕಾರನ್ನು ಖರೀದಿಸಿದಾಗ ಅದನ್ನು ಒಂದು ಅಥವಾ ಎರಡು ಬಾರಿ ಪ್ರಯತ್ನಿಸಬಹುದು, ಆದರೆ ಒಂದು ವಾರದ ನಂತರ ಅದು ಅಲ್ಲಿಯೇ ಇದೆ ಎಂಬುದು ಮರೆತು ಹೋಗುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ವಿಶೇಷವಾಗಿ ಹೆಚ್ಚು ತಾಪಮಾನವಿರುವ ನಗರಗಳಲ್ಲಿ ಇದರ ಬಳಕೆ ಕಡಿಮೆ. ತೆರೆದ ಸನ್‌ರೂಫ್‌ನೊಂದಿಗೆ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದು ಕಾರಿನ ವಾಯುಬಲ ವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಲ್ಯಾಮಿನಾರ್ ಗಾಳಿಯ ಹರಿವು ಹೆಚ್ಚುವರಿ ಡ್ರ್ಯಾಗ್‌ನ ಪ್ರಕ್ಷುಬ್ಧ ಮೇಲ್ಭಾಗವಾಗುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಸನ್ ರೂಫ್ ಗಾಜು ಹಾನಿಗೊಳಗಾದರೆ ಅದನ್ನು ಸರಿ ಪಡಿಸಲು ದುಬಾರಿ ವೆಚ್ಚವಾಗುತ್ತದೆ. ಸಂಶೋಧನೆಯ ಪ್ರಕಾರ ಸನ್ ರೂಫ್ ಗಳು ಕಾರಿನ ಮೈಲೇಜ್ ಮೇಲೆ ಪರಿಣಾಮ ಬೀರುತ್ತವೆ. ಸ್ಟಾಂಡರ್ಡ್ ಸನ್ ರೂಫ್ ಅಸೆಂಬ್ಲಿಗಳು ಸುಮಾರು 25 - 35 ಕೆ.ಜಿ ತೂಕವನ್ನು ಹೊಂದಿದ್ದರೆ ಪನೋರಾಮಿಕ್ ಸನ್ ರೂಫ್ 90 ಕೆ.ಜಿ ತೂಕವನ್ನು ಹೊಂದಿರುತ್ತದೆ.

Maruti Suzuki ಕಂಪನಿ ತನ್ನ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಕಾರಣಗಳಿವು

ಸನ್‌ರೂಫ್‌ಗಳು ಹೆಡ್‌ರೂಂ ಅನ್ನು ಹೆಚ್ಚು ಬಳಸುತ್ತವೆ. ಕಾರು ಹಳೆಯದಾದಾಗ, ಸನ್ ರೂಫ್ ಹೆಚ್ಚಾಗಿ ಸೋರಿಕೆಯಾಗುತ್ತದೆ. ಇದರಿಂದ ಕಾರಿನೊಳಗಿರುವವರಿಗೆಅನಗತ್ಯ ಕಿರಿ ಕಿರಿ ಉಂಟಾಗುತ್ತದೆ.

Most Read Articles

Kannada
English summary
Reasons for maruti suzuki company not providing sunroof in its cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X