ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಜೊಯ್ ಎಲೆಕ್ಟ್ರಿಕ್ ಕಾರಿನ ವೆಂಚರ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಯುರೋಪಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಲ್ಲಿ ಜೊಯ್ ಮಾದರಿಯು ಕೂಡ ಒಂದಾಗಿದೆ.

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಈ ಹೊಸ ರೆನಾಲ್ಟ್ ಜೊಯ್ ವೆಂಚರ್ ಎಡಿಷನ್ 394 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೊಸ ರೆನಾಲ್ಟ್ ಜೊಯ್ ವೆಂಚರ್ ಎಡಿಷನ್ ನಲ್ಲಿ ಆರ್110 ಮೋಟರ್ ಅನ್ನು ಅಳವಡಿಸಲಾಗಿದ್ದು, ಇದು 50 ಕಿ.ವ್ಯಾಟ್ ಡಿಸಿ ಚಾರ್ಜಿಂಗ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಇದರ 52 ಕಿಲೋವ್ಯಾಟ್ ಬ್ಯಾಟರಿಯನ್ನು ಕೇವಲ ಒಂದು ಗಂಟೆ ಹತ್ತು ನಿಮಿಷಗಳಲ್ಲಿ ಶೇ.80 ಕ್ಕೆ ಚಾರ್ಜ್ ಮಾಡಬಹುದು.

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಜೊಯ್ ವೆಂಚರ್ ಎಡಿಷನ್ ನಲ್ಲಿ 10-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಈಸಿ ಲಿಂಕ್ ಸಿಸ್ಟಂನೊಂದಿಗೆ ಲಿಂಕ್ ಮಾಡಲಾದ ಏಳು ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನಂತಹ ಕನೆಕ್ಟಿವಿಟಿ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಈ ವೆಂಚರ್ ಎಡಿಷನ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟಿಂಗ್ ನೊಂದಿಗೆ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಇನ್ನು ಸ್ಟ್ಯಾಂಡರ್ಡ್ ರೆನಾಲ್ಟ್ ಜೊಯ್ ಮಾದರಿಗೆ ಹೋಲಿಸಿದರೆ ಹೊಸ ವೆಂಚರ್ ಎಡಿಷನ್ ಹೆಚ್ಚುವರಿಯಾಗಿ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ ಮತ್ತು ಹಿಂಭಾಗ ಎಲೆಕ್ಟ್ರಿಕ್ ವಿಂಡೋಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಜೊಯ್ ವೆಂಚರ್ ಎಡಿಷನ್ ನಲ್ಲಿ ಸುರಕ್ಷತೆಗಾಗಿ, ಲೇನ್-ಕೀಪ್ ಅಸಿಸ್ಟ್, ಲೇನ್-ಡಿಪರ್ಚರ್ ವಾರ್ನಿಂಗ್, ಹೈ-ಬೀಮ್ ಅಸಿಸ್ಟ್ ಮತ್ತು ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಮ್ (ಎಇಬಿಎಸ್) ಸೇರಿವೆ. ಇನ್ನು ಇದರೊಂದಿಗೆ ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒಳಗೊಂಡಿವೆ.

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಜೊಯ್ ವೆಂಚರ್ ಎಡಿಷನ್ ಹೀಟಡ್ ಸೀಟುಗಳು ಮತ್ತು ಸ್ಟೀಯರಿಂಗ್ ವ್ಹೀಲ್ ಜೊತೆಗೆ ಫಾಸ್ಟ್ ಚಾರ್ಜಿಂಗ್ 50 ಕಿ.ವ್ಯಾಟ್ ಡಿಸಿ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡುತ್ತದೆ. ಕೇವಲ 30 ನಿಮಿಷಗಳಲ್ಲಿ 144 ಕಿ.ಮೀ ಚಲಿಸುವಷ್ಟು ಚಾರ್ಜ ಆಗುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ರನಾಲ್ಟ್ ತನ್ನ ಜೊಯ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು ಹಲವು ಬಾರಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಫ್ರೆಂಚ್ ಆಟೋ ತಯಾರಕರಾದ ರೆನಾಲ್ಟ್ ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಜೊಯ್ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿದ್ದರು.

ಅಧಿಕ ಮೈಲೇಜ್ ನೀಡುವ ಜೊಯ್ ಎಲೆಕ್ಟ್ರಿಕ್ ಕಾರಿನ ಹೊಸ ಎಡಿಷನ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಜೊಯ್ ವೆಂಚರ್ ಇವಿ ಎಡಿಷನ್ ಒಟ್ಟು ಎಂಟು ಬಣ್ಣಗಳ ಆಯ್ಕೆಯಲ್ಲಿ ಯುರೋಪಿನ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ. ಇನ್ನು ರೆನಾಲ್ಟ್ ಕಂಪನಿಯು ಜೊಯ್ ವೆಂಚರ್ ಇವಿ ಎಡಿಷನ್ ಮಾದರಿಗೆ ಐದು ವರ್ಷಗಳ ವಾರಂಟಿಯನ್ನು ಅನ್ನು ನೀಡಿದೆ.

Most Read Articles

Kannada
English summary
Renault introduces new feature-loaded variant of its best-selling EV. Read In Kannada.
Story first published: Friday, January 1, 2021, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X