ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ವಿಧಿಸಿದ್ದು, ಲಾಕ್‌ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ.

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಸಹ ಇದೀಗ ವಿಸ್ತರಿತ ಲಾಕ್‌ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಕೋವಿಡ್ ಹೆಚ್ಚಳವಾದ ನಂತರ ದೇಶದ ಪ್ರಮುಖ ಆಟೋ ಕಂಪನಿಗಳು ಕಳೆದ 15 ದಿನದಿಂದಲೇ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದು, ಕೋವಿಡ್ ತುಸು ತಗ್ಗಿರುವುದರಿಂದ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಸುರಕ್ಷಾ ಕ್ರಮಗಳೊಂದಿಗೆ ಉತ್ಪಾದನೆ ಹಂತ-ಹಂತವಾಗಿ ಹೆಚ್ಚಳಕ್ಕೆ ಸಿದ್ದತೆ ನಡೆಸುತ್ತಿವೆ.

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಯು ಸಹ ಕೋವಿಡ್ ಪರಿಣಾಮ ಕಳೆದ ವಾರ ಮಧ್ಯಂತರದಲ್ಲಿ ಐದು ದಿನಗಳ ಕಾಲ ಕಾರು ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ನಂಜು ನಿರೋಧಕ ರಾಸಾಯನಿಕಗಳಿಂದ ಸಂಪೂರ್ಣವಾಗಿ ಸ್ಯಾನಿಟಜ್ ಮಾಡಿದೆ.

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ಪೂರ್ವನಿಗದಿಯಂತೆ ಐದು ದಿನಗಳ ಕಾಲ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ರೆನಾಲ್ಟ್ ಮತ್ತು ನಿಸ್ಸಾನ್ ಕಾರು ಕಂಪನಿಗಳು 31ರಿಂದಲೇ ಕಾರು ಉತ್ಪಾದನೆ ಪುನಾರಂಭಿಸುವ ಸಿದ್ದತೆಯಲ್ಲಿತ್ತು. ಆದರೆ ಸೂಕ್ತ ಸುರಕ್ಷಾ ಕ್ರಮ ಮತ್ತು ಕಾರ್ಮಿಕ ಜೀವನ ಭದ್ರತೆ ಕ್ರಮಗಳನ್ನು ಪ್ರಕಟಿಸುವಂತೆ ಪಟ್ಟುಹಿಡಿರುವ ಕಾರ್ಮಿಕ ಸಂಘಟನೆಯು ಉದ್ಯೋಗಿಗ ಬೇಡಿಕೆ ಈಡೇರಿಸುವ ತನಕ ಕಾರು ಉತ್ಪಾದನೆಗೆ ಹಾಜರಾಗುವುದಿಲ್ಲ ಎಂದು ಪಟ್ಟುಹಿಡಿದಿದೆ.

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ಕಾರು ಉತ್ಪಾದನಾ ಘಟಕದಲ್ಲಿ ಉದ್ಯೋಗಿಗಳ ಸುರಕ್ಷತೆ ಇಲ್ಲದಿರುವ ಬಗ್ಗೆ ಅಳಲು ತೊಡಿಕೊಂಡಿರುವ ಕಾರ್ಮಿಕ ಸಂಘಟನೆಯು ಕೋವಿಡ್ ಸೋಂಕಿತ ಉದ್ಯೋಗಿಗಳಿಗೆ ಮತ್ತು ಕೋವಿಡ್‌ಗೆ ಬಲಿಯಾದವರಿಗೆ ಗರಿಷ್ಠ ಪರಿಹಾರ ಕ್ರಮಗಳನ್ನ ಪ್ರಕಟಿಸುವಂತೆ ಬೇಡಿಕೆ ಸಲ್ಲಿಸಿವೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ವಾಹನ ಉತ್ಪಾದನೆ ವೇಳೆ ಸಾಮಾಜಿಕ ಸಾಧ್ಯವಿಲ್ಲ ಕಾರಣ ನಿಸ್ಸಾನ್ ಮತ್ತು ರೆನಲ್ಟ್ ಘಟಕದಲ್ಲೇ ಇದುವರೆಗೆ ಸುಮಾರು 200ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೋವಿಡ್ ಒಕ್ಕರಿಸಿಕೊಂಡಿದ್ದು, ಸುಮಾರು ಕಾರ್ಮಿಕರು ಚೇತರಿಸಿಕೊಂಡಿದ್ದರೂ ಕೂಡಾ 10ಕ್ಕೂ ಕಾರ್ಮಿಕರು ಜೀವಕಳೆದುಕೊಂಡಿದ್ದಾರೆ.

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ಸೋಂಕಿತರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಮೃತ ಕಾರ್ಮಿಕರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಆಡಳಿತಗೆ ಪಟ್ಟುಹಿಡಿರುವ ಕಾರ್ಮಿಕ ಸಂಘಟನೆಯು ಪರಿಹಾರ ಕ್ರಮಗಳನ್ನು ಪ್ರಕಟಿಸುವ ತನಕವು ಯಾವುದೇ ರೀತಿಯ ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗಿಯಾಗದಿರಲು ನಿರ್ಧಿಸಿವೆ.

MOST READ: ತಾಯಿಯ ಸಾವಿನ ಸುದ್ದಿ ಕೇಳಿಯೂ ಕರ್ತವ್ಯ ಮುಂದುವರೆಸಿದ ಆಂಬ್ಯುಲೆನ್ಸ್ ಚಾಲಕ

ಸುರಕ್ಷತೆಯ ಕೊರತೆ: ಕಾರು ಉತ್ಪಾದನೆಗೆ ಮರಳದ ನಿಸ್ಸಾನ್-ರೆನಾಲ್ಟ್ ಉದ್ಯೋಗಿಗಳು

ಆದರೆ ಸತತ ಕಾರು ಮಾರಾಟದಲ್ಲಿ ಕುಸಿತ, ಉತ್ಪಾದನೆಯಲ್ಲಿ ಕುಸಿತ, ಮಾರುಕಟ್ಟೆಯಲ್ಲಿ ಸ್ಪರ್ಧೆ ನಡುವೆ ಕಾರ್ಮಿಕರ ಪ್ರತಿಭಟನೆಯು ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ತೀವ್ರಗೊಂಡಿರುವ ಕಾರ್ಮಿಕರ ಪ್ರತಿಭಟನೆಗೆ ಕಂಪನಿಯು ಶೀಘ್ರದಲ್ಲೇ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಲಿದೆ.

Most Read Articles

Kannada
English summary
Renault Nissan Workers To Refuse Work Till Covid-19 Measures Are taken. Read in Kannada.
Story first published: Monday, May 31, 2021, 23:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X