ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಾರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು. ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು.

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವಾಗಿತ್ತು. 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. 2019ರ ಜುಲೈ ತಿಂಗಳಿನಲ್ಲಿ ಡಸ್ಟರ್‌ಗೆ ಜಾಗತಿಕ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಹೆಚ್ಚು ಅಗತ್ಯವಿರುವ ಫೇಸ್‌ಲಿಫ್ಟ್ ನೀಡಿತು.

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಎರಡನೇ ತಲೆಮಾರಿನ ಡಸ್ಟರ್‌ನ ವಿನ್ಯಾಸವು ಭಾರತದಲ್ಲಿ ಪೇಟೆಂಟ್ ಪಡೆದಿದೆ. ಈ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವು ಜನಪ್ರಿಯತೆ ಹೆಚ್ಚಾಗುತ್ತಿರುವುದರಿಂದ, ಡಸ್ಟರ್ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಮಾದರಿಗಳಿಗೆ ಹೆಚ್ಚಿನ ಪೈಪೋಟಿ ನೀಡಲು ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ರೆನಾಲ್ಟ್ ಮುಂದಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಡಸ್ಟರ್ ಅನ್ನು ಯುರೋಪಿನ ಡೇಸಿಯಾ ಬ್ಯಾಡ್ಜ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಳ್ಳಬಹುದು. ನ್ಯೂ ಜನರೇಷನ್ ಡಸ್ಟರ್ ಸಿಎಮ್‌ಎಫ್-ಎ ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಡೇಸಿಯಾ ಬಿಗ್‌ಸ್ಟರ್ ಕಾನ್ಸೆಪ್ಟ್ ಅನ್ನು ಆಧರಿಸಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಅಭಿವೃದ್ಧಿ ಪಡಿಸಬಹುದು ಎಂದು ಹೇಳಲಾಗುತ್ತಿದೆ. ಹೊಸ ಪ್ಲಾಟ್‌ಫಾರ್ಮ್ ಜೊತೆಗೆ ಡಸ್ಟರ್ ಅದರ ಕೆಲವು ವಿನ್ಯಾಸ ಬಿಟ್‌ಗಳನ್ನು ಡೇಸಿಯಾ ಬಿಗ್‌ಸ್ಟರ್ ಕಾನ್ಸೆಪ್ಟ್ ಮಾದರಿಯೊಂದಿಗೆ ಹಂಚಿಕೊಳ್ಳಬಹುದು.

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಅನನ್ಯವಾಗಿ ವಿನ್ಯಾಸಗೊಳಿಸಲಾದ ವೈ-ಆಕಾರದ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಲೈಟಿಂಗ್ ಸಿಸ್ಟಂ ಪಡೆಯುತ್ತದೆ. ಇನ್ನು ಫ್ಲಾಟ್ ರೂಫ್ ಲೈನ್, ಪ್ರಮುಖ ವೀಲ್ ಆರ್ಚರ್ ಮತ್ತು ಮಸ್ಕಲರ್ ಹಾಂಚ್‌ಗಳನ್ನು ಹೊಂದಿದೆ. ಇನ್ನು ನ್ಯೂ ಜನರೇಷನ್ ಡಸ್ಟರ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಫ್ರೆಂಚ್ ಕಾರ್ ತಯಾರಕರಾದ ರೆನಾಲ್ಟ್ 2025ರ ವೇಳೆಗೆ 14 ಹೊಸ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಇದಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿಕೆಯನ್ನು ಮಾಡಲಿದೆ.

ಭಾರತದಲ್ಲಿ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯ ಪೇಟೆಂಟ್ ನೋಂದಾಯಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಕಂಪನಿಯು ಹೊಸ ನವೀಕರಣಗಳೊಂದಿಗೆ ಟ್ರೈಬರ್ ಟರ್ಬೊ ಮಾದರಿಯನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಆದರೆ ನ್ಯೂ ಜನರೇಷನ್ ಡಸ್ಟರ್ ಡಸ್ಟರ್ ಎಸ್‍ಯುವಿಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಮುಖ ಬದಲಾವಣೆಗಳನ್ನು ನಡೆಸಿ ನ್ಯೂ ಜನರೇಷನ್ ಡಸ್ಟರ್ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New-Gen Renault Duster Design Patented In India. Read In Kannada.
Story first published: Monday, May 17, 2021, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X