Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಖ್ಯಾತ ಕಾರು ತಯಾರಕ ಕಂಪನಿಯಾದ ಸ್ಕೋಡಾ (Skoda) ಆಟೋ ಇಂಡಿಯಾ ತನ್ನ ಮಧ್ಯಮ ಗಾತ್ರದ ಕುಶಾಕ್‌ ಎಸ್‌ಯುವಿಯ ಮೂಲ ಮಾದರಿಯಾದ ಆಕ್ಟಿವ್ ಬೆಲೆಯನ್ನು ರೂ. 30,000 ಗಳಷ್ಟು ಏರಿಕೆ ಮಾಡಿದೆ. ಈ ಬೆಲೆ ಏರಿಕೆಯ ನಂತರ ಆಕ್ಟಿವ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10.79 ಲಕ್ಷಗಳಾಗಿದೆ. ಇನ್ನು ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 18 ಲಕ್ಷಗಳಾಗಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಸ್ಕೋಡಾ ಕಂಪನಿಯು ಜೂನ್ ತಿಂಗಳಲ್ಲಿ ಕುಶಾಕ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಈ ಎಸ್‌ಯುವಿಯು ಮಾರಾಟದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಕಂಪನಿಯು ಕೇವಲ ನಾಲ್ಕು ತಿಂಗಳಲ್ಲಿ ಈ ಎಸ್‌ಯುವಿಗಾಗಿ 15,000 ಬುಕಿಂಗ್‌ಗಳನ್ನು ಸ್ವೀಕರಿಸಿದ್ದು, ಅದರ ಮಾರಾಟ ಪ್ರಮಾಣವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಸ್ಕೋಡಾ ಕುಶಾಕ್‌ ಎಸ್‌ಯುವಿಯು 15,000 ಕ್ಕೂ ಹೆಚ್ಚು ಯುನಿಟ್‌ ಬುಕಿಂಗ್ ಗಳನ್ನು ಪಡೆದಿರುವುದು ಕಂಪನಿಯ ದೊಡ್ಡ ಸಾಧನೆಯಾಗಿದೆ. ಸ್ಕೋಡಾ ಕುಶಾಕ್ ಅನ್ನು ಕಂಪನಿಯು MQB-A0-IN ಪ್ಲಾಟ್ ಫಾರಂ ಬಳಸಿಕೊಂಡು ಸಿದ್ಧಪಡಿಸಿದೆ. ಈ ಎಸ್‌ಯುವಿಯಲ್ಲಿ ಕಂಪನಿಯು 95% ನಷ್ಟು ಸ್ಥಳೀಕರಣವನ್ನು ಬಳಸಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಕಂಪನಿಯು ಭವಿಷ್ಯದಲ್ಲಿ ಈ ಎಸ್‌ಯುವಿಯ ಎಲ್ಲಾ ಯುನಿಟ್ ಗಳನ್ನು ಭಾರತದಲ್ಲಿಯೇ ಉತ್ಪಾದಿಸಲಿದೆ. ಸ್ಕೋಡಾ ಕುಶಾಕ್‌ ಎಸ್‌ಯುವಿಯಲ್ಲಿ ಸ್ಕೋಡಾ ಕಂಪನಿಯ ಐಕಾನಿಕ್ ಫ್ರಂಟ್ ಗ್ರಿಲ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್ ಹಾಗೂ ಎಲ್‌ಇಡಿ ಟೈಲ್ ಲೈಟ್‌ಗಳನ್ನು ನೀಡಲಾಗಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಕಾರಿನ ಮುಂಭಾಗವು ದೊಡ್ಡ ಏರ್ ಡ್ಯಾಮ್ ಹೊಂದಿದ್ದರೆ, ಕೆಳ ಭಾಗದಲ್ಲಿ ನೇರವಾದ ಬಾನೆಟ್ ನೀಡಲಾಗಿದೆ. ಇನ್ನು ಈ ಎಸ್‌ಯುವಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌, ಇಎಸ್‌ಸಿ, ಹಿಲ್ ಹೋಲ್ಡ್ ಕಂಟ್ರೋಲ್, ರೇನ್ ಹಾಗೂ ಲೈಟ್ ಸೆನ್ಸಾರ್, ಕ್ರೂಸ್ ಕಂಟ್ರೋಲ್ ಹಾಗೂ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಫೀಚರ್ ಗಳನ್ನು ನೀಡಲಾಗಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಕಂಪನಿಯು ಈ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. ಈ ಎಸ್‌ಯುವಿಯಲ್ಲಿರುವ 1.5 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುಯಲ್ ಹಾಗೂ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ನೀಡಲಾಗುವುದು. ಈ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಇನ್ನು ಸ್ಕೋಡಾ ಕುಶಾಕ್ ಎಸ್‌ಯುವಿಯಲ್ಲಿ 1.0 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಎಂಜಿನ್ ಸಹ ಅಳವಡಿಸಲಾಗಿದೆ. ಈ ಎಂಜಿನ್ 115 ಬಿ‌ಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುಯಲ್ ಹಾಗೂ 7 ಸ್ಪೀಡ್ ಡಿಸಿಟಿ (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಸ್ಕೋಡಾ ಆಟೋ ಕಂಪನಿಯು ತನ್ನ ಮಧ್ಯಮ ಗಾತ್ರದ ಸೆಡಾನ್ ಸ್ಲಾವಿಯಾ ಕಾರಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಸ್ಕೋಡಾ ಆಟೋ ಇಂಡಿಯಾ ತನ್ನ ಟ್ವಿಟರ್ ಖಾತೆ ಮೂಲಕ ಈ ಮಾಹಿತಿ ನೀಡಿದೆ. ಈ ಮಾಹಿತಿಯನ್ವಯ ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರ್ ಅನ್ನು ನವೆಂಬರ್ 18 ರಂದು ಮಧ್ಯಾಹ್ನ 2 ಗಂಟೆಗೆ ವಿಶ್ವ ಪ್ರೀಮಿಯರ್‌ನಲ್ಲಿ ಪ್ರಸ್ತುತಪಡಿಸಲಾಗುವುದು.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಹೊಸ ಕಾರುಗಳ ಮಾರಾಟದಲ್ಲಿ ಸ್ಕೋಡಾ ಕಂಪನಿಯು ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ತನ್ನ ಪ್ರಮುಖ ಕಾರು ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಕಂಪನಿಯು ಭಾರತದಲ್ಲೂ ವಿವಿಧ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೂಡಿ ಸ್ಕೋಡಾ ಕಂಪನಿಯು ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಸಹಭಾಗಿತ್ವದಡಿಯಲ್ಲಿ ಸ್ಕೋಡಾ ಕಂಪನಿಯು ಹಲವಾರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಕಾರುಗಳ ಜೊತೆಗೆ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳು ಸಹ ಸೇರಿವೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ವಾಯು ಮಾಲಿನ್ಯವನ್ನು ತಡೆಯಲು ವಿಶ್ವದ ವಿವಿಧ ರಾಷ್ಟ್ರಗಳು 2030ರಿಂದಲೇ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಇದರಿಂದ ಯುರೋಪ್'ನ ಹಲವು ದೇಶಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳ ಮಾರಾಟ ಪ್ರಮಾಣವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬರುತ್ತಿದೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಕಳೆದ ವರ್ಷ ಅಂದರೆ 2020ರಲ್ಲೇ ಯುರೋಪಿನ ಹಲವು ರಾಷ್ಟ್ರಗಳಲ್ಲಿ ವಿವಿಧ ವಾಹನ ತಯಾರಕ ಕಂಪನಿಗಳು ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿವೆ. ಈ ಪ್ರಮಾಣವು 2021ರಲ್ಲಿ ಈ ಪ್ರಮಾಣವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

Kushaq ಎಸ್‌ಯುವಿ ಮೂಲ ಮಾದರಿಯ ಬೆಲೆ ಏರಿಕೆ ಮಾಡಿದ Skoda

ಜೆಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ಈಗಾಗಲೇ ವಿವಿಧ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಜ್ಜುಗೊಂಡಿದೆ. ಕಂಪನಿಯು 2025ರ ವೇಳೆಗೆ 30% ನಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಲು ನಿರ್ಧರಿಸಿದೆ. ಸ್ಕೋಡಾ ಕಂಪನಿಯು ಭಾರತದಲ್ಲೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda increases price of kushaq base variant details
Story first published: Wednesday, November 17, 2021, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X