ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್‌ ಕಾರು ಮಾದರಿಯಲ್ಲಿ ಹೊಸದಾಗಿ ಪೆಟ್ರೋಲ್ ಟರ್ಬೋ ಆವೃತ್ತಿಯನ್ನು ಬಿಡುಗಡೆ ಮಾಡಲು ಅಂತಿಮ ಸಿದ್ದತೆ ನಡೆಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ಟಿವಿ ಜಾಹೀರಾತು ಚಿತ್ರೀಕರಣ ನಡೆಸುತ್ತಿರುವುದು ಕಂಡುಬಂದಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಆಲ್‌ಟ್ರೊಜ್ ಪೆಟ್ರೋಲ್ ಟರ್ಬೊ ಮಾದರಿಯನ್ನು ಇದೇ ತಿಂಗಳು 13ರಂದು ಬಿಡುಗಡೆ ಮಾಡಲು ಮುಂದಾಗಿರುವ ಟಾಟಾ ಕಂಪನಿಯು ಈಗಾಗಲೇ ಹೊಸ ಕಾರಿನ ಟೀಸರ್‌ ಚಿತ್ರವನ್ನು ಅನಾವರಣಗೊಳಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಆಲ್‌ಟ್ರೊಜ್ ಟರ್ಬೋ ವರ್ಷನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಯಾದ ಹ್ಯುಂಡೈ ಐ20 ಟರ್ಬೋ ಮತ್ತು ಮಾರುತಿ ಸುಜುಕಿ ಬಲೆನೊ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಹೊಸ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್ ಮತ್ತು ವಿವಿಧ ಹೊಸ ತಾಂತ್ರಿಕ ಅಂಶಗಳನ್ನು ಹೊಂದಿರಲಿದ್ದು, ಹೊಸ ಆವೃತ್ತಿಯು ಸಾಮಾನ್ಯ ಕಾರು ಮಾದರಿಗಿಂತಲೂ ಉತ್ತಮ ಮಟ್ಟದ ಎಂಜಿನ್ ಆಯ್ಕೆ ಮತ್ತು ಸುಧಾರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಲಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಆಲ್‌ಟ್ರೊಜ್ ಕಾರಿನಲ್ಲಿ ಸದ್ಯ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೊಸ ಟಾಟಾ ಆಲ್‌‌ಟ್ರೊಜ್ ಟರ್ಬೊ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಹೊಸ ಎಂಜಿನ್ ಮಾದರಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 110-ಬಿಹೆಚ್‍ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಟರ್ಬೋ ಪೆಟ್ರೋಲ್ ಆವೃತ್ತಿಯು ಟಾಪ್ ಎಂಡ್‌ನಲ್ಲಿ ಪ್ರಮುಖ ಎರಡು ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಐ20 ಟರ್ಬೋ ಮಾದರಿಗೆ ಭರ್ಜರಿ ಪೈಪೋಟಿ ನೀಡಿಲಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಟಾಪ್ ಎಂಡ್ ಪೆಟ್ರೋಲ್ ಕಾರು ಮಾದರಿಗಳು ಎಕ್ಸ್‌ಶೋರೂಂ ದರದಂತೆ ರೂ.7.38 ಲಕ್ಷ ದಿಂದ ರೂ. 7.89 ಲಕ್ಷ ಅಂತರದಲ್ಲಿ ಬೆಲೆ ಹೊಂದಿದ್ದು, ಟರ್ಬೋ ಪೆಟ್ರೋಲ್ ಮಾದರಿಯ ಸಾಮಾನ್ಯ ಮಾದರಿಗಳಿಂತ ತುಸು ದುಬಾರಿಯಾಗಿರಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಆದರೆ ಹ್ಯುಂಡೈ ಐ20 ಟರ್ಬೋ ಪೆಟ್ರೋಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 8.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.17 ಲಕ್ಷ ಬೆಲೆ ಹೊಂದಿದ್ದು, ಒಂದೇ ಮಾದರಿಯ ಎಂಜಿನ್ ಪಡೆದುಕೊಳ್ಳುತ್ತಿರುವ ಆಲ್‌ಟ್ರೊಜ್ ಟರ್ಬೋ ಮಾದರಿಯು ಈ ವಿಚಾರದಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಇನ್ನು ಟಾಟಾ ಆಲ್‌‌ಟ್ರೊಜ್ ಟರ್ಬೊ ಪೆಟ್ರೋಲ್ ಆವೃತ್ತಿಯು ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಲಭ್ಯವಿರಲಿದ್ದು, ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಟರ್ಬೋ ಮಾದರಿಯು ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯ ಪಡೆದುಕೊಳ್ಳಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಟಾಟಾ ಆಲ್‌ಟ್ರೊಜ್ ಟರ್ಬೊ ವರ್ಷನ್

ಆಲ್‌ಟ್ರೊಜ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.5.44 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.09 ಲಕ್ಷ ಬೆಲೆ ಹೊಂದಿದ್ದು, ಟರ್ಬೋ ಪೆಟ್ರೋಲ್ ಮಾದರಿಯ ನಂತರ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Source: Aditya Tendulkar/YouTube

Most Read Articles

Kannada
English summary
Tata Altroz Turbo Spied During Its TVC Shoot Ahead Of Launch. Read in Kannada.
Story first published: Monday, January 4, 2021, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X