ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ಹೊಸ ಮೈಕ್ರೊ-ಎಸ್‌ಯುವಿಯಾಗಿದ್ದು, ಸದ್ಯಕ್ಕೆ ಈ ಮಾದರಿಗೆ ಹೆಚ್‌ಬಿಎಕ್ಸ್ ಎಂಬ ಕೋಡ್‌ನೇಮ್‌ ಅನ್ನು ನೀಡಿದ್ದಾರೆ. ಈ ಹೊಸ ಮೈಕ್ರೊ-ಎಸ್‌ಯುವಿಯು ಬಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಹೊಸ ಟಾಟಾ ಮೈಕ್ರೊ-ಎಸ್‌ಯುವಿಯ ಉತ್ಪಾದನೆಗೆ ಸಿದ್ದಗೊಂಡಿರುವ ರೂಪದಲ್ಲಿರುವ ಎರಡು ಮಾದರಿಗಳು ಉತ್ಪಾದನಾ ಘಟಕದಲ್ಲಿ ಬಳಿ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರದಲ್ಲಿ ಉತ್ಪಾದನೆಗೆ ಸಿದ್ಧವಾದ ಹೆಚ್‌ಬಿಎಕ್ಸ್ ಮೈಕ್ರೋ-ಎಸ್‌ಯುವಿಯ ಕೆಲವು ವೈಶಿಷ್ಟ್ಯಗಳ ಮಾಹಿತಿಗಳು ಬಹಿರಂಗವಾಗಿವೆ. ಈಗಾಗಲೇ ಈ ಹೊಸ ಮೈಕ್ರೊ ಎಸ್‌ಯುವಿ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಗಳನ್ನು ನಡೆಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಈ ಹೊಸ ಟಾಟಾ ಮೈಕ್ರೊ-ಎಸ್‌ಯುವಿಯ ಎರಡು ಮಾದರಿಗಳು ವಿಭಿನ್ನ ಬಣ್ಣಗಳನ್ನು ಹೊಂದಿದೆ, ಒಂದು ಮಾದರಿಯ ಬಾಡಿಯು ನೀಲಿ ಬಣ್ಣ ಮತ್ತು ರೂಫ್ ಬಿಳಿ ಬಣ್ಣದೊಂದಿಗೆ ಡ್ಯೂಯಲ್ ಟೋನ್ ಬಣ್ಣವನ್ನು ಹೊಂದಿದೆ. ಇನ್ನೊಂದು ಮಾದರಿಯ ಬಾಡಿಯು ಬಿಳಿ ಬಣ್ಣದಲ್ಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್‌ನಿಂದ ಮುಂಬರುವ ಎಸ್‍ಯುವಿ ಬ್ರ್ಯಾಂಡ್‌ನ ಆಲ್ಫಾ ಆರ್ಕಿಟೆಕ್ಚರ್ ಮತ್ತು ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಹೊಂದಿರುತ್ತದೆ. ಇನ್ನು ಹೆಚ್‌ಬಿಎಕ್ಸ್ ಸಹ ರೂಮಿ ಕ್ಯಾಬಿನ್ ಅನ್ನು ಹೊಂದಿದಿದ್ದು, ಐದು ಪ್ರಯಾಣಿಕರನ್ನು ಆರಾಮವಾಗಿ ಪ್ರಯಾಣಿಸಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಸ್ಪೈ ಚಿತ್ರಗಳಲ್ಲಿ ಹೆಚ್‌ಬಿಎಕ್ಸ್‌ನ ಸ್ಪ್ಲಿಟ್-ಸ್ಟೈಲ್ ಹೆಡ್‌ಲ್ಯಾಂಪ್‌ಗಳನ್ನು ಡಿಆರ್‌ಎಲ್‌ಗಳನ್ನು ಮೇಲೆ ಇರಿಸಲಾಗಿದೆ ಮತ್ತು ಮೈನ್ ಲೈಟ್ ಕೆಳಗೆ ಇರಿಸಲಾಗಿದೆ. ಫಾಗ್ ಲ್ಯಾಂಪ್ ಬ್ಲ್ಯಾಕ್ ಔಟ್ ಬಂಪರ್,ಡ್ಯುಯಲ್-ಟೋನ್ ಡೈಮಂಡ್-ಕಟ್ ಅಲಾಯ್ ವೀಲ್ಸ್, ಮತ್ತು ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಸ್ಪೈ ಚಿತ್ರದಲ್ಲಿ ಮೈಕ್ರೊ ಎಸ್‌ಯುವಿಯ ಒಳಭಾಗದ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಮಾದರಿಯಲ್ಲಿ ಫ್ಲೋಟಿಂಗ್ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ, ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಇನ್ನು ಇದರಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಸ್ಟರ್, ಕ್ಲೈಮೇಟ್ ಕಂಟ್ರೋಲ್, ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್, ರಿಯರ್ ಎಸಿ ವೆಂಟ್ಸ್, ಸ್ಟಾರ್ಟ್ ಬಟನ್, ಕ್ರೂಸ್ ಕಂಟ್ರೋಲ್ ಮತ್ತು ಇನ್ನು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿರಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಪ್ರಸ್ತುತ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ನೀಡುವ ಅದೇ ಅದೇ ಪೆಟ್ರೋಲ್ ಎಂಜಿನ್ ಅನ್ನು ಹೆಚ್‌ಬಿಎಕ್ಸ್ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 85 ಬಿಹೆಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಇದರಒಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಟಾಟಾ ಮೈಕ್ರೊ ಎಸ್‌ಯುವಿ

ಟಾಟಾ ಹೆಚ್‌ಬಿಎಕ್ಸ್ ಬಜೆಟ್ ಆಧಾರಿತ ಎಂಟ್ರಿ ಲೆವೆಲ್ ಮಾದರಿಯಾಗಿರಲಿದೆ. ಈ ಹೊಸ ಹೆಚ್‌ಬಿಎಕ್ಸ್ ಮಾದರಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಇದು ಬಿಡುಗಡೆಯಾದ ಬಳಿಕ ಮಹೀಂದ್ರಾ ಎಕ್ಸ್‌ಯುವಿ 100, ಮಾರುತಿ ಸುಜುಕಿ ಇಗ್ನಿಸ್ ಮತ್ತು ಫೋರ್ಡ್ ಫ್ರೀಸ್ಟೈಲ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata HBX Production-Ready Models Spied Inside Prodcution Plant. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X