Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಹ್ಯಾರಿಯರ್(Harrier) ಕಾರು ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಅಡ್ವೆಂಚರ್ ಕಾರು ಪ್ರಿಯರಿಗಾಗಿ ಬಿಡುಗಡೆಗೊಳಿಸಲಾಗಿದ್ದ ಹ್ಯಾರಿಯರ್ ಕ್ಯಾಮೊ ಎಡಿಷನ್(Camo Edition) ಮಾದರಿಯನ್ನು ಸ್ಥಗಿತಗೊಳಿಸಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಹೊಸ ಕಾರು ಮಾದರಿಗಳ ಮಾರಾಟದಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಗ್ರಾಹಕರ ಬೇಡಿಕೆಯೆಂತೆ ನವೀಕೃತ ಮಾದರಿಗಳನ್ನು ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯಾರಿಯರ್ ಕಾರಿನ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದ ಕ್ಯಾಮೊ ಎಡಿಷನ್ ಮಾದರಿಯನ್ನು ಗ್ರಾಹಕರ ಬೇಡಿಕೆ ಆಧರಿಸಿ ಸ್ಥಗಿತಗೊಳಿಸಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಹೀಗಾಗಿ ಕ್ಯಾಮೊ ಎಡಿಷನ್ ಸ್ಥಗಿತಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಮತ್ತು ಡಾರ್ಕ್ ಎಡಿಷನ್‌ಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಕ್ಯಾಮೊ ಎಡಿಷನ್ ಮಾದರಿಯು ಸ್ಟಾಕ್ ಮುಕ್ತಾಯದ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಸ್ಟಾಕ್ ಮುಕ್ತಾಯದ ನಂತರ ಹೊಸ ಕಾರಿನ ಮಾಹಿತಿಯನ್ನು ಅಧಿಕೃತ ವೆಬ್‌ತಾಣದಿಂದ ತೆಗೆದುಹಾಕಲಿದ್ದು, ಕ್ಯಾಮೊ ಎಡಿಷನ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.24 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.79 ಲಕ್ಷ ಬೆಲೆ ಹೊಂದಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಕ್ಯಾಮೊ ಎಡಿಷನ್ ಮಾದರಿಯ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚುವರಿಯಾಗಿ ರೂ. 30 ಸಾವಿರದಷ್ಟು ದುಬಾರಿಯಾಗಿದ್ದು, ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಂತೆ ಫೀಚರ್ಸ್ ಹೊಂದಿದ್ದರೂ ಕ್ಯಾಮೊ ಎಡಿಷನ್‌ನಲ್ಲಿ ವಿಶೇಷವಾದ ಹಸಿರು ಬಣ್ಣದ ಆಯ್ಕೆ ಹೊಂದಿತ್ತು.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಹ್ಯಾರಿಯರ್ ಕ್ಯಾಮೊ ಎಡಿಷನ್ ಮಾದರಿಯು ಎಕ್ಸ್‌ಟಿ , ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್ ಹೊಂದಿದ್ದು, ಬ್ಲ್ಯಾಕ್ ಕ್ರೋಮ್‌ಗಳು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಹೆಡ್‌ಲೈಟ್, ಸೈಡ್ ಸ್ಕರ್ಟ್, ಬಂಪರ್‌ಗೆ ಹೊಂದಿಕೊಂಡಿರುವ ಗ್ಲಾಸ್ ಹೌಸ್ ಮತ್ತು ಟೈಲ್‌ಗೇಟ್ ಸುತ್ತಲು ಕಪ್ಪು ಬಣ್ಣದ ಕ್ರೋಮ್ ನೀಡಲಾಗಿದ್ದು, ಹೊಸ ಕಾರಿನಲ್ಲಿ ಹೆಚ್ಚುವರಿ ಪ್ಯಾಕೇಜ್‌ ಪಡೆಯುವ ಗ್ರಾಹಕರಿಗಾಗಿ ಬ್ಯಾನೆಟ್‌ನಲ್ಲಿ ಹ್ಯಾರಿಯರ್ ಲೊಗೊ, ಸೈಡ್ ಸ್ಟೆಪ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ರೂಫ್, ಹುಡ್ ಮತ್ತು ಡೋರ್‌ಗಳ ಮೇಲೆ ಕ್ಯಾಮೊ ಡಿಕಾಲ್ಸ್ ನೀಡಲಾಗುತ್ತದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಕ್ಯಾಮೊ ಎಡಿಷನ್ ಕಾರಿನ ಒಳಭಾಗದಲ್ಲೂ ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಡಾರ್ಕ್ ಎಡಿಷನ್ ಮಾದರಿಯಲ್ಲಿ ಆಲ್ ಬ್ಲ್ಯಾಕ್ ಥೀಮ್, ಗ್ರಿನ್ ಸ್ಟ್ಪೀಚಿಂಗ್, ಬ್ಲ್ಯಾಕ್‌ಸ್ಟೋನ್ ಮ್ಯಾಟ್ರಿಕ್ಸ್, ಫ್ಲಕ್ಸ್ ವುಡ್, 3ಡಿ ಮೊಲ್ಡೆಡ್ ಮ್ಯಾಟ್ಸ್, ಸ್ಕಫ್ಲ್ ಪ್ಲೇಟ್ ಮತ್ತು ಸೀಟ್ ಹಿಂಭಾಗದಲ್ಲಿ ಕ್ಯಾಮೊ ಫಾರೆಸ್ಟ್ ಅರ್ಗನೈಸರ್ ಪ್ಯಾಕೇಜ್ ಜೋಡಣೆ ಮಾಡಲಾಗಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಇನ್ನುಳಿದಂತೆ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಆಟೋಮ್ಯಾಟಿಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, 17-ಇಂಚಿನ ಅಲಾಯ್ ವೀಲ್ಹ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, 6-ಸ್ಪೀಕರ್ಸ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ್ ಡಿಜಿಟಲ್ ಡಿಸ್‌ಪ್ಲೇ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 60:40 ಅನುಪಾತದ ಹಿಂಭಾಗದ ಸೀಟ್‌ಗಳ ಸೌಲಭ್ಯವಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಕ್ಯಾಮೊ ಎಡಿಷನ್ ಖರೀದಿಸುವ ಗ್ರಾಹಕರು ಹೊಸ ಕಾರಿನಲ್ಲಿರುವ ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗಾಗಿ ಕ್ಯಾಮೊ ಸ್ಟೆಲ್ತ್ ಮತ್ತು ಕ್ಯಾಮೋ ಸ್ಟೆಲ್ತ್ ಪ್ಲಸ್ ಎನ್ನುವ ಎರಡು ಆಕ್ಸೆಸರಿಸ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷ ಆಕ್ಸೆಸರಿಸ್ ಪ್ಯಾಕೇಜ್‌ಗಳು ಕ್ರಮವಾಗಿ ರೂ.27 ಸಾವಿರ ಮತ್ತು ರೂ. 50 ಸಾವಿರ ದರ ಹೊಂದಿವೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಇನ್ನು ಈ ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ 2.-0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ನೀಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19..89 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 23 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

Harrier Camo Edition ಮಾರಾಟವನ್ನು ಸ್ಥಗಿತಗೊಳಿಸಿದ Tata Motors

ಕ್ಯಾಮೊ ಎಡಿಷನ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮತ್ತು ಡಾರ್ಕ್ ಎಡಿಷನ್‌ಗಳು ಉತ್ತಮ ಬೇಡಿಕೆ ಹೊಂದಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಮುಂಬರುವ ದಿನಗಳಲ್ಲಿ ಕಂಪನಿಯು ಹ್ಯಾರಿಯರ್ ಕಾರಿನಲ್ಲಿ ಮತ್ತಷ್ಟು ಹೊಸ ಮಾದರಿಯ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಲಿದೆ. ಸ್ಪೆಷಲ್ ಎಡಿಷನ್‌ಗಳು ಗ್ರಾಹಕರ ಬೇಡಿಕೆ ಆಧರಿಸಿ ಮುಂದುವರಿಯಲಿದ್ದು, ಸ್ಟ್ಯಾಂಡರ್ಡ್ ಮಾದರಿಗಳ ಮಾರಾಟದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುತ್ತಿಲ್ಲ.

Most Read Articles

Kannada
English summary
Tata motors discontinued harrier camo edition from indian market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X