75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷ ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಂಪನಿಯು ಟಿಯಾಗೊ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್ ಹಾಗೂ ಹ್ಯಾರಿಯರ್ ಕಾರುಗಳ ಸ್ಥಾಪಕರ (ಫೌಂಡರ್ಸ್) ಆವೃತ್ತಿಯನ್ನು ಬಿಡುಗಡೆ ಮಾಡಿದೆ.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದುದ್ದಕ್ಕೂ ಹಲವು ಹೊಸ ಅಪ್ ಡೇಟ್'ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಈ ಆವೃತ್ತಿಯ ಕಾರುಗಳುಟಾಟಾ ಮೋಟಾರ್ಸ್ ಉದ್ಯೋಗಿಗಳಿಗೆ ಮಾತ್ರ ಲಭ್ಯವಿರಲಿವೆ. ಫೌಂಡರ್ಸ್ ಆವೃತ್ತಿಯು ಜೆಆರ್‌ಡಿ ಟಾಟಾರವರ ಸಹಿ ಹಾಗೂ ನೀಲಿ ಹಿನ್ನೆಲೆ ಹೊಂದಿರುವ ವಿಶೇಷ ಟಾಟಾ ಲೋಗೊವನ್ನು ಹೊಂದಿದೆ.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಮಾದರಿಗಳು ಸಾಮಾನ್ಯ ಮಾದರಿ ಕಾರುಗಳು ಹೊಂದಿರುವ ಎಲ್ಲಾ ಫೀಚರ್ ಹಾಗೂ ಉಪಕರಣಗಳನ್ನು ಹೊಂದಿವೆ. ಆದರೆ ಈ ಮಾದರಿಗಳನ್ನು ವಿಭಿನ್ನವಾಗಿಡಲು ಜೆಆರ್‌ಡಿ ಟಾಟಾರವರ ಸಹಿ ಹಾಗೂ ವಿಶೇಷ ಲೋಗೊವನ್ನು ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಜೆಆರ್‌ಡಿ ಟಾಟಾರವರನ್ನು ಭಾರತದ ವಾಹನ ಮಾರುಕಟ್ಟೆಯ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಜೆಆರ್‌ಡಿ ಟಾಟಾರವರು ದೇಶಾದ್ಯಂತ ಜನಪ್ರಿಯತೆಯನ್ನು ಹೊಂದಿದ್ದಾರೆ.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಅವರಿಗೆ ಗೌರವ ಸಲ್ಲಿಸುವ ಕಾರಣಕ್ಕೆ ಅವರ ಹೆಸರಿನಲ್ಲಿ ಫೌಂಡರ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರ ಜೊತೆಗೆ ಫೌಂಡರ್ಸ್ ಎಡಿಷನ್ ಪೋಸ್ಟ್‌ಕಾರ್ಡ್ ಅನ್ನು ಸಹ ಕಂಪನಿಯ ಪರವಾಗಿ ನೀಡಲಾಗುವುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಜೆಆರ್‌ಡಿ ಟಾಟಾರವರ ಸಹಿಯನ್ನು ಕ್ಯಾಬಿನ್‌ನ ಫ್ರಂಟ್ ಫೆಂಡರ್ ಕ್ರೀಸ್, ರೇರ್ ಪಿಲ್ಲರ್ ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿರಿಸಲಾಗಿದೆ. ಟಾಟಾ ಗ್ರೂಪ್ ಉದ್ಯೋಗಿಗಳು ಈ ವಿಶೇಷ ಮಾದರಿಗಳನ್ನು ಖರೀದಿಸಲು ಬಯಸಿದರೆ ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಬಹುದು.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಟಾಟಾ ಗುಂಪಿನ ಭಾಗವಾಗಿದೆ. ಈ ಕಂಪನಿಯನ್ನು 1945ರಲ್ಲಿ ಸ್ಥಾಪಿಸಲಾಯಿತು. ಟಾಟಾ ಸಮೂಹವನ್ನು ಜೆಮ್ ಷೆಡ್ ಜಿ ಟಾಟಾ ಸ್ಥಾಪಿಸಿದರು. ಟಾಟಾ ಎಂಜಿನಿಯರಿಂಗ್ ಹಾಗೂ ಲೋಕೋಮೋಟಿವ್ ಕಂಪನಿಯನ್ನು (ಈಗ ಟಾಟಾ ಮೋಟಾರ್ಸ್) ಟಾಟಾರವರ ನಾಯಕತ್ವದಲ್ಲಿ ಸ್ಥಾಪಿಸಲಾಯಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ನಂತರ ಈ ಕಂಪನಿಯು ಟೆಲ್ಕೊ ಎಂದು ಕರೆಯಲ್ಪಟಿತು. ಹೆಸರೇ ಸೂಚಿಸುವಂತೆ ಕಂಪನಿಯು ವಾಹನಗಳನ್ನು ಉತ್ಪಾದಿಸುತ್ತದೆ. ಆದರೆ ಕಂಪನಿಯು ಸುಮಾರು 10 ವರ್ಷಗಳ ಕಾಲ ಯಾವುದೇ ವಾಹನಗಳನ್ನು ಉತ್ಪಾದಿಸಲಿಲ್ಲ.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ 1954ರಲ್ಲಿ ಜರ್ಮನಿ ಕಂಪನಿ ಡೈಮ್ಲರ್-ಬೆಂಝ್ ಜೊತೆ ಕೈಜೋಡಿಸಿ ಟ್ರಕ್ ಉತ್ಪಾದಿಸಿತು. ಕಂಪನಿಯು 1977ರಲ್ಲಿ ಕಮರ್ಷಿಯಲ್ ವಾಹನ ಉತ್ಪಾದನೆಯನ್ನು ಆರಂಭಿಸಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ವಿಭಾಗವನ್ನು ವರ್ಷಗಳ ಕಾಲ ಆಳಿದ ನಂತರ ಕಂಪನಿಯು 1991ರಲ್ಲಿ ಪ್ರಯಾಣಿಕರ ವಾಹನ ವಿಭಾಗವನ್ನು ಪ್ರವೇಶಿಸಲು ನಿರ್ಧರಿಸಿತು. ಟಾಟಾ ತನ್ನ ಮೊದಲ ಕಾರ್ ಆಗಿ ಟಾಟಾ ಸಿಯೆರಾವನ್ನು 1991ರಲ್ಲಿ ಬಿಡುಗಡೆಗೊಳಿಸಿತು.

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಕಾರು ಭಾರತದಲ್ಲಿ ವಿನ್ಯಾಸಗೊಂಡ ಹಾಗೂ ಉತ್ಪಾದನೆಯಾದ ಮೊದಲ ಕಾರು. 1997ರಲ್ಲಿ ಕಂಪನಿಯು ರೂ.10,000 ಕೋಟಿಗಳ ಮಾರಾಟವನ್ನು ತಲುಪಿದ ಭಾರತದ ಮೊದಲ ಖಾಸಗಿ ಕಂಪನಿಯಾಯಿತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

75ನೇ ವಾರ್ಷಿಕೋತ್ಸವ ಹಿನ್ನೆಲೆ, ಫೌಂಡರ್ಸ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಒಂದು ವರ್ಷದ ನಂತರ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಇಂಡಿಕಾ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ಭಾರತದ ಮೊದಲ ಪ್ರಯಾಣಿಕ ಕಾರು ಎಂದು ಕರೆಯಲಾಗುತ್ತದೆ.

Most Read Articles

Kannada
English summary
Tata Motors launches Founders Edition cars on the eve of 75th anniversary. Read in Kannada.
Story first published: Tuesday, February 2, 2021, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X