ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಕೋವಿಡ್ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಹೊಸ ವಾಹನ ಮಾರಾಟವು ನಿಧಾನವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಪ್ರಯಾಣಿಕ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಬ್ಯಾಂಕ್ ಆಫ್ ಇಂಡಿಯಾ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಅಸ್ಥಿರತೆ ಸಂದರ್ಭದಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಇದೀಗ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಪ್ರಮುಖ ಕಾರುಗಳಿಗೆ ಸರಳ ಸಾಲ ಸೌಲಭ್ಯಗಳೊಂದಿಗೆ ಅತಿ ಕಡಿಮೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಬ್ಯಾಂಕ್ ಆಫ್ ಇಂಡಿಯಾ ಮೂಲಕ ಗರಿಷ್ಠ 7 ವರ್ಷಗಳ ಅವಧಿಗೆ ಶೇ.90 ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಲೋನ್ ಆಫರ್ ನೀಡುತ್ತಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಬ್ಯಾಂಕ್ ಆಫ್ ಇಂಡಿಯಾ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಪ್ರತಿ ಲಕ್ಷಕ್ಕೆ ಶೇ. 6.85 ದರದಲ್ಲಿ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಿದ್ದು, ಆರಂಭಿಕ ಕಾರು ಮಾದರಿಯ ಖರೀದಿಯ ಮೇಲೆ ರೂ. 1,502(ಪ್ರತಿ ತಿಂಗಳು) ಇಎಂಐ ಆರಂಭವಾಗಲಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಮಾರ್ಚ್ 31ರ ತನಕ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದಿರುವ ಬ್ಯಾಂಕ್ ಆಫ್ ಇಂಡಿಯಾ ಹೊಸ ಆಫರ್‌ಗಳು ಎಲ್ಲಾ ಮಾದರಿಯ ಕಾರುಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯಿಸಲಿದೆ ಎಂದಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ವಾಹನಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕ ವಾಹನಗಳ ಜೊತೆಗೆ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲೂ ಹಲವಾರು ಹೊಸತನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಪರಿಣಾಮ ಹೊಸ ಕಾರುಗಳ ಮಾರಾಟದಲ್ಲಿ ತುಸು ಕುಸಿತ ಕಂಡರೂ ಇದೀಗ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸಹ ಹೊಸ ಕಾರುಗಳ ಮಾರಾಟದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ವರ್ಷದ ಕಾರು ಮಾರಾಟ ಪ್ರಮಾಣಕ್ಕಿಂತಲೂ ಇದೀಗ ಮೂರು ಪಟ್ಟು ಹೆಚ್ಚಳವಾಗಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಹೀಗಾಗಿ ಗ್ರಾಹಕರ ಬೇಡಿಕೆ ಪೂರೈಕೆ ಸಹಕಾರಿಯಾಗುವಂತೆ ಮಾರಾಟ ಮಳಿಗೆಗಳು ಮತ್ತು ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಇತ್ತೀಚೆಗೆ ಕಂಪನಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ವಿವಿಧ ನಗರಗಳಲ್ಲಿ ಸುಮಾರು 70 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸದಾಗಿ ಚಾಲನೆ ಪಡೆದುಕೊಂಡ 70 ಶೋರೂಂಗಳಲ್ಲಿ ಅರ್ಧಕ್ಕೂ ಹೆಚ್ಚು ಶೋರೂಂಗಳು ಮಾರಾಟ ಸೌಲಭ್ಯದ ಜೊತೆಗೆ ಗ್ರಾಹಕರ ಸೇವಾ ಕೇಂದ್ರಗಳನ್ನು ಸಹ ಒಂದೇ ಸೂರಿನಡಿನಲ್ಲಿ ತೆರೆದಿದ್ದು, ಟಾಟಾ ಕಂಪನಿಯು ಹೊಸದಾಗಿ 53 ಶೋರೂಂಗಳನ್ನು ಪ್ರಥಮ ಬಾರಿಗೆ ಟೈರ್ 2 ನಗರಗಳಲ್ಲಿ ಆರಂಭಿಸಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಇನ್ನುಳಿದ 32 ಶೋರೂಂಗಳ ಪೈಕಿ ನಮ್ಮ ಬೆಂಗಳೂರಿನಲ್ಲಿ(7), ಚೆನ್ನೈನಲ್ಲಿ(5) , ಹೈದ್ರಾಬಾದ್‌ನಲ್ಲಿ(4) ಮತ್ತು ಕೊಚ್ಚಿಯಲ್ಲಿ(4) ಶೋರೂಂಗಳಿಗೆ ಚಾಲನೆ ನೀಡಲಾಗಿದ್ದು, ಹೊಸ ಶೋರೂಂಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಒಟ್ಟು 980 ಮಾರಾಟ ಮಳಿಗೆಗಳನ್ನು ಹೊಂದಿಂತಾಗಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ದೇಶಾದ್ಯಂತ ಹರಡಿಕೊಂಡಿರುವ 980 ಟಾಟಾ ಶೋರೂಂಗಳಲ್ಲಿ 272 ಶೋರೂಂಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯ ಕಾರು ಮಾರಾಟದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದಲೇ ಶೇ. 28ರಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್

ಕಾರುಗಳ ಮಾರಾಟದಲ್ಲಿನ ವಾರ್ಷಿಕ ಬೆಳವಣಿಗೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 9 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಮಾದರಿಗಳು ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡುತ್ತಿವೆ.

Most Read Articles

Kannada
English summary
Tata partners with bank of india introduces attractive financing and low emi schemes
Story first published: Tuesday, November 9, 2021, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X