ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಕಳೆದ ವರ್ಷದಿಂದ ಟಾಟಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಟಾಟಾ ಕಾರುಗಳು ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ ವಿದೇಶಗಳಿಲ್ಲಿಯು ಕೂಡ ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಪಂಚ್(Punch) ಮೈಕ್ರೊ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಾಟಾ ಮೋಟಾರ್ಸ್ ಈ ಪಂಚ್ ಮೈಕ್ರೊ ಎಸ್‍ಯುವಿಯ ಈಗಾಗಲೇ ಹಲವು ಟೀಸರ್ ಗಳನ್ನು ಬಿಡುಗಡೆಗೊಳಿಸಿದೆ,.ಟಾಟಾ ಪಂಚ್ ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ ಎಂದು ಹೊಸ ಟೀಸರ್ ವೀಡಿಯೊ ಬಹಿರಂಗಪಡಿಸಿದೆ, ಟೀಸರ್ ನಲ್ಲಿ ಪಂಚ್ ಮೈಕ್ರೊ ಎಸ್‌ಯುವಿಯು ಕಲ್ಲಿನ ಭೂಪ್ರದೇಶದ ಮೇಲೆ ಕಾಣಬಹುದು, ‘ಮಲ್ಟಿಪಲ್ ಮೋಡ್ಸ್ ಮತ್ತು ‘ಮಲ್ಟಿಪಲ್ ಟೇರನ್ಸ್' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಡ್ರೈವ್ ಮೋಡ್‌ಗಳ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ, ಆದರೆ ಇದು ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿರುವ ಡ್ರೈವ್ ಮೋಡ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಟಾಟಾ ನೆಕ್ಸಾನ್ 3 ಸ್ಪೋರ್ಟ್, ಸಿಟಿ ಮತ್ತು ಇಕೋ.ಎಂಬ ಡ್ರೈವ್ ಮೋಡ್‌ಗಳನ್ನು ನೀಡುತ್ತದೆ. ಇನ್ನು ಥ್ರೊಟಲ್ ರೆಸ್ಪಾನ್ಸ್ ಅನ್ನು ಸರಿಹೊಂದಿಸುವುದರಿಂದ 'ಇಕೋ' ಡ್ರೈವ್ ಮೋಡ್ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

'ಸ್ಪೋರ್ಟ್' ಡ್ರೈವ್ ಮೋಡ್ ಸ್ಪೋರ್ಟಿ ಡ್ರೈವ್ ಪರ್ಫಾಮೆನ್ಸ್ ಅನ್ನು ನೀಡುತ್ತದೆ, ಏಕೆಂದರೆ ಇದು ಥ್ರೊಟಲ್ ರೆಸ್ಫಾನ್ಸ್ ಸಂಪೂರ್ಣ ಸಾಮರ್ಥ್ಯವನ್ನು ಬಳಸುತ್ತದೆ. ಇನ್ನು 'ಸಿಟಿ' ಡ್ರೈವ್ ಮೋಡ್ ಉತ್ತಮ ದಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ನೀಡುತ್ತದೆ. ಟಾಟಾ ಟಿಯಾಗೋ ಮತ್ತಿ ಟಿಗೊರ್ BS4 ಆವೃತ್ತಿಗಳು ಕೂಡ ಈ ಡ್ರೈವ್ ಮೋಡ್‌ಗಳನ್ನು ಹೊಂದಿತ್ತು.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಆದರೆ BSVI ಕಂಪ್ಲೈಂಟ್ ಆವೃತ್ತಿಗಳೊಂದಿಗೆ ಟಾಟಾ ಈ ಡ್ರೈವ್ ಮೋಡ್‌ಗಳನ್ನು ತೆಗೆದುಹಾಕಿತು. ಹಿಂದಿನ ಟೀಸರ್ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ 'ಸಂಪೂರ್ಣ ಸುರಕ್ಷತೆ' ನೀಡುತ್ತದೆ ಎಂದು ತಿಳಿಸುತ್ತದೆ. ಈ ಹೊಸ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯು ಹೊಸ ಆಲ್ಫಾ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಆಲ್ಟ್ರೋಜ್‌ಗೆ ಆಧಾರವಾಗಿದೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಜಾಗತಿಕ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಆಲ್ಟ್ರೋಜ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ, ಪಂಚ್ ಮೈಕ್ರೋ ಎಸ್‌ಯುವಿಗೆ ಅದೇ ಸುರಕ್ಷತಾ ಮಾನದಂಡಗಳನ್ನು ನೀಡುವ ನಿರೀಕ್ಷೆಯಿದೆ. ಹೊಸ ಮಾದರಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿಯೊಂದಿಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನಿರೀಕ್ಷಿಸಸುತ್ತೇವೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಟಾಪ್-ಸ್ಪೆಕ್ ಗಳು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಪಡೆಯುತ್ತವೆ. ವಾಹನವು ಹಿಲ್ ಡಿಸರ್ಟ್ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು. ಇನ್ನು ರಾಕ್, ಮಡ್, ಸ್ಯಾಂಡ್ ಮತ್ತು ಸ್ನೋನಂತಹ ಟ್ರ್ಯಾಕ್ಷನ್ ಮೋಡ್ ಗಳನ್ನು ಪಡೆಯಬಹುದು. ಆದರೆ ಇದರ ಬಗ್ಗೆ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಹೊಸ ಟಾಟಾ ಪಂಚ್ ವಿನ್ಯಾಸವು ಅದರ ಕಾನ್ಸೆಪ್ಟ್ ನಂತೆ ಟೀಸರ್ ಖಚಿತಪಡಿಸುತ್ತದೆ. ಮುಂಭಾಗದ ವಿನ್ಯಾಸವು ಟಾಟಾ ಹ್ಯಾರಿಯರ್‌ನಿಂದ ಹೆಚ್ಚು ಸ್ಫೂರ್ತಿ ಪಡೆದಿದೆ, ಏಕೆಂದರೆ ಇದು ಟಾಟಾ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ವಿಶಾಲವಾದ ಏರ್ ಟೆಕ್ ಮತ್ತು ವೃತ್ತ ಆಕಾರದ ಫಾಗ್ ಲ್ಯಾಂಪ್ ಗಳನ್ನು ಹೊಂದಿರುವ ದೊಡ್ಡ ಬಂಪರ್ ಅನ್ನು ಪಡೆಯುತ್ತದೆ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಇದು ಸುತ್ತುವ ಟೇಲ್ ಲ್ಯಾಂಪ್ ಗಳು, ಕಪ್ಪಾದ ಪಿಲ್ಲರ್ಸ್ ಮತ್ತು ಹಿಂಭಾಗದ ಡೋರ್ ಹ್ಯಾಂಡಲ್ ಅನ್ನು ವಿಶಾಲವಾದ ಕಪ್ಪು-ಸಿ-ಪಿಲ್ಲರ್‌ನಲ್ಲಿ ಸಂಯೋಜಿಸಲಾಗಿದೆ.ಈ ಹೊಸ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯ ಇಂಟಿರಿಯರ್ ಮಾಹಿತಿಗಳು ಬಹಿರಂಗವಾಗಿಲ್ಲ.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಆದರೆ ಇದರಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುವ ಇದೇ ರೀತಿಯ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಇದು HBX ಕಾನ್ಸೆಪ್ಟ್ ಮಾದರಿಯಂತೆ ಉಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನು -ಬಾಟಮ್, ತ್ರೀ-ಸ್ಪೋಕ್ ಸ್ಟೀರಿಂಗ್ ವೀಲ್, ಡಿಜಿಟಲ್ ಟಾಕೋಮೀಟರ್ ಮತ್ತು ಅನಲಾಗ್ ಸ್ಪೀಡೋಮೀಟರ್, ಎಚ್‌ವಿಎಸಿ ಕಂಟ್ರೋಲ್ ಗಳು ಮತ್ತು ಹೆಚ್ಚಿನವುಗಳೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಿಂದ ಕೆಲವು ಫೀಚರ್ಸ್ ಗಳನ್ನು ಎರವಲು ಪಡೆಯಬಹುದು.

ಟಾಟಾ ಪಂಚ್ ಮೈಕ್ರೊ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಬರುವ ಸಾಧ್ಯತೆಯಿದೆ ಇದು 1.2-ಲೀಟರ್ 3-ಸಿಲಿಂಡರ್ ನ್ಯೆಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿರಬಹುದು. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು AMT ಯುನಿಟ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮೈಕ್ರೊ ಎಸ್‌ಯುವಿ ಡ್ರೈವ್ ಮೋಡ್‌ಗಳನ್ನು ಸಹ ಪಡೆಯಬಹುದು.

ಇತರ ಮೈಕ್ರೊ ಎಸ್‍ಯುವಿಗಳಿಗೆ ಪಂಚ್ ಕೊಡಲು ಬರುತ್ತಿದೆ Tata Punch

ಇನ್ನು ಟಾಟಾ ನೆಕ್ಸಾನ್ ಅತಿ ಹೆಚ್ಚು ಮಾರಾಟವಾಗುವ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇನ್ನು ಟಾಟಾ ಕಳೆದ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 10,006 ಯುನಿಟ್‌ಗಳ ಮಾರಾಟ ಮಾಡಿದೆ, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 5,179 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,93.20 ರಷ್ಟು ಬೃಹತ್ ಬೆಳವಣಿಗೆಯನ್ನು ಸಾಧಿಸಿದೆ. ಇದೇ ರೀತಿ ಟಾಟಾ ಕಾರುಗಳು ಬಾರತದಲ್ಲಿ ಉತ್ತಮ ಬೇಡಿಕೆಯನ್ನು ಪಡೆಯುತ್ತದೆ. ಈ ಹೊಸ ಟಾಟಾ ಪಂಚ್ ಮೈಕ್ರೊ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಕಂಪನಿಗೆ ಮರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ,

Most Read Articles

Kannada
English summary
Tata punch come with multiple drive modes new teaser video out details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X