ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಗಣರಾಜ್ಯೋತ್ಸವ ಸಂಭ್ರಮದಲ್ಲೇ ಹೊಸ ಸಫಾರಿ ಎಸ್‌ಯುವಿ ಕಾರು ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲು ಸಜ್ಜಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಟೀಸರ್ ಬಹಿರಂಗಪಡಿಸಿದ್ದು, ಹೊಸ ಎಸ್‌ಯುವಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಗ್ರಾವಿಟಾಸ್ ಎಸ್‌ಯುವಿ ಮಾದರಿಯನ್ನೇ ಇದೀಗ ಸಫಾರಿ ಹೆಸರಿನೊಂದಿಗೆ ರೀ ಬ್ರಾಂಡ್ ಮಾದರಿಯಾಗಿ ರಸ್ತೆಗಿಳಿಸುತ್ತಿದ್ದು, ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿದ್ದ ಸಫಾರಿ ಕಾರು ಮಾದರಿಯನ್ನೇ ಇದೀಗ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಯೊಂದಿಗೆ ಪರಿಚಯಿಸಲಾಗುತ್ತಿದೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ 2.0 ಯೋಜನೆ ಅಡಿ ಹೊಸ ಕಾರುಗಳತ್ತ ಗಮನಹರಿಸಿದ್ದು, ಹೊಸ ಯೋಜನೆ ಅಡಿಯಲ್ಲೇ 2020ರ ದೆಹಲಿ ಎಕ್ಸ್‌ಪೋದಲ್ಲಿ ಗ್ರಾವಿಟಾಸ್ 7 ಸೀಟರ್ ಎಸ್‌ಯುವಿ ಅನಾವರಣಗೊಳಿಸಿತ್ತು.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

2020ರ ಕೊನೆಯ ತನಕವೂ ಹೊಸ ಎಸ್‌ಯುವಿ ಕಾರು ಮಾದರಿಯನ್ನು ಗ್ರಾವಿಟಾಸ್ ಹೆಸರಿನಲ್ಲೇ ರೋಡ್ ಟೆಸ್ಟಿಂಗ್ ನಡೆಸಿದ್ದ ಟಾಟಾ ಕಂಪನಿಯು ಇದೀಗ ಹೊಸ ಕಾರನ್ನು ಈ ಹಿಂದಿನ ಜನಪ್ರಿಯ ಸಫಾರಿ ಮಾದರಿಯ ರೀ ಬ್ರಾಂಡ್ ಮಾದರಿಯಾಗಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಸಫಾರಿ ಮಾದರಿಯು ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, ಹ್ಯಾರಿಯರ್ ಮುಂದುವರಿದ ಭಾಗವಾಗಿರುವ ಸಫಾರಿ ಕಾರು ಮೂರನೇ ಸಾಲಿನ ಆಸದೊಂದಿಗೆ ಫುಲ್ ಸೈಜ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ. OMEGA ಕಾರು ಉತ್ಪಾದನಾ ತಂತ್ರಜ್ಞಾನದ ಮೂಲಕ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಟಾಟಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳಯುತ್ತಿವೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿ ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದ್ದು, ಪ್ರೀಮಿಯಂ ಫೀಚರ್ಸ್‌ನಲ್ಲೂ ಗಮನಸೆಳೆಯಲಿದೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹಾಗೆಯೇ ಹೊಸ ಕಾರಿನಲ್ಲಿ ಸ್ಪೋರ್ಟಿ ಮಾದರಿಯ ಆಸನಗಳೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮೌಂಟೆಡ್, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ವಿವಿಧ ಡ್ರೈವ್ ಮೋಡ್, ಪನೊರಮಿಕ್ ಸನ್‌ರೂಫ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಈ ಮೂಲಕ ಹೊಸ ಕಾರು ಆವೃತ್ತಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಟ್ಯೂಸಾನ್, ಮಹೀಂದ್ರಾ ಅಲ್ಟುರಾಸ್ ಜಿ4, ಫೋರ್ಡ್ ಎಂಡೀವರ್ ಜೊತೆಗೆ ಟೊಯೊಟಾ ಫಾರ್ಚೂನರ್‌ ಕಾರಿಗೂ ಪೈಪೋಟಿ ನೀಡಲಿದ್ದು, ಉತ್ತಮ ಸ್ಥಳಾವಕಾಶದೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಸಫಾರಿ ಕಾರಿನಲ್ಲಿ ಹ್ಯಾರಿಯರ್ ಮಾದರಿಯಲ್ಲೇ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸಫಾರಿ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿರುವ ಹೊಸ ಸಫಾರಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

Article Published On: Wednesday, January 13, 2021, 14:18 [IST]
English summary
Tata Safari New Teaser Released. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+