ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟಾಟಾ ನೆಕ್ಸಾನ್

ಕೋವಿಡ್ ಪರಿಣಾಮ ಹೊಸ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಕುಸಿತ ದಾಖಲಾಗಿದ್ದು, ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಕಳೆದ ತಿಂಗಳು ಎಪ್ರಿಲ್‌ ಅವಧಿಯ ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಕೋವಿಡ್ ಪರಿಣಾಮ 2020ರ ಅವಧಿಯಲ್ಲೂ ಸಾಕಷ್ಟು ನಷ್ಟ ಅನುಭವಿಸಿದ್ದ ಕಾರು ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಕಳೆದ ವರ್ಷ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಆದರೆ ಏಪ್ರಿಲ್ ಆರಂಭದಲ್ಲಿ ಹೆಚ್ಚಳವಾದ ಕೋವಿಡ್ 2ನೇ ಅಲೆಯು ಆಟೋ ಉದ್ಯಮಕ್ಕೆ ಮತ್ತೆ ಹೊಡೆತ ನೀಡುತ್ತಿದ್ದು, ಟಾಟಾ ಮೋಟಾರ್ಸ್ ಸೇರಿದಂತೆ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ತೀವ್ರ ಕುಸಿತ ಕಾಣುತ್ತಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಕೋವಿಡ್ 2ನೇ ಅಲೆಯ ಅಬ್ಬರದ ನಡುವೆಯೂ ಕಳೆದ ತಿಂಗಳ ಮೊದಲ ಎರಡು ವಾರಗಳ ಕಾಲ ಹೆಚ್ಚಿನ ಮಟ್ಟದ ವಾಹನ ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ನೆಕ್ಸಾನ್ ಮಾರಾಟದಲ್ಲಿ ಮಾತ್ರ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಟಾಟಾ ಕಂಪನಿಯು ಹೊಸ ಕಾರುಗಳನ್ನು OMEGA ಕಾರು ಉತ್ಪಾದನಾ ತಂತ್ರಜ್ಞಾನದಡಿಯಲ್ಲಿ ಕಾರು ಅಭಿವೃದ್ದಿ ಮಾಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿನ ನೆಕ್ಸಾನ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಎಪ್ರಿಲ್ ಅವಧಿಯಲ್ಲಿ ಒಟ್ಟು 6,938 ಯುನಿಟ್ ಮಾರಾಟದೊಂದಿಗೆ ನೆಕ್ಸಾನ್ ಕಾರು ಮಾದತರಿಯು ಟಾಟಾ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರ್ಚ್ ಅವಧಿಗೆ ಹೋಲಿಕೆ ಮಾಡಿದ್ದಲ್ಲಿ ತುಸು ಕಡಿಮೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದರೂ ಕೋವಿಡ್‌ನಿಂದಾಗಿ ಆರ್ಥಿಕ ಹಿಂಜರಿತದಲ್ಲೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ ಎನ್ನಬಹುದು.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಕೋವಿಡ್ ಬಿಕ್ಕಟ್ಟಿನ ನಡುವೆಯೂ ಹೊಸ ಮಾರ್ಗಸೂಚಿಯೊಂದಿಗೆ ಉದ್ಯಮ ಪ್ರಕ್ರಿಯೆಗಳನ್ನು ಕೈಗೊಂಡಿದ್ದು,ನೆಕ್ಸಾನ್ ಕಾರು ಮಾದರಿಯ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸಾಕಷ್ಟು ಮುಂಚೂಣಿ ಸಾಧಿಸುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

2020ರ ಆರಂಭದಲ್ಲಿ ಪ್ರತಿ ತಿಂಗಳಿಗೆ 2500ರಿಂದ 3 ಸಾವಿರ ಯುನಿಟ್ ಮಾತ್ರ ಮಾರಾಟವಾಗಿದ್ದ ನೆಕ್ಸಾನ್ ಕಾರು ಮಾದರಿಯು ಇದೀಗ ಪ್ರತಿ ತಿಂಗಳು 6 ಸಾವಿರ 7 ಸಾವಿರ ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ ಪಡೆದ ನಂತರ ಕಾರು ಮಾರಾಟವು ನಿರಂತವಾಗಿ ಏರಿಕೆಯಾಗುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಕಾರಣವಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ಇನ್ನು ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬರೋಬ್ಬರಿ 36 ವೆರಿಯೆಂಟ್ಸ್ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಸೌಲಭ್ಯವನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ನೆಕ್ಸಾನ್

1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 118-ಬಿಹೆಚ್‍ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 108-ಬಿಹೆಚ್‍ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Thursday, May 6, 2021, 11:17 [IST]
English summary
Tata Sells Over 6,938 Nexon Units In April. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+