Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಾಸ್ಟ್‌ಟ್ಯಾಗ್ ಎಫೆಕ್ಟ್: 104 ಕೋಟಿ ರೂಪಾಯಿಗಳಿಗೇರಿದ ಪ್ರತಿದಿನದ ಟೋಲ್ ಶುಲ್ಕ ಸಂಗ್ರಹ
ಫೆಬ್ರವರಿ 15ರಿಂದ ದೇಶಾದ್ಯಂತ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ವರದಿಗಳ ಪ್ರಕಾರ, ಈಗ ದೇಶದಲ್ಲಿ ಪ್ರತಿ ದಿನ ರೂ.104 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಹೆಚ್‌ಎಐ) ವರದಿಯ ಫೆಬ್ರವರಿ 16ರವರೆಗೆ ಪ್ರತಿ ದಿನ ರೂ.100 ಕೋಟಿಗಳಷ್ಟಿದ್ದ ಟೋಲ್ ಶುಲ್ಕ ಸಂಗ್ರಹವು ಈಗ ರೂ.104 ಕೋಟಿಗಳಿಗೆ ಏರಿಕೆಯಾಗಿದೆ.

ಪ್ರತಿದಿನ ಸುಮಾರು 65 ಲಕ್ಷಗಳಷ್ಟು ಟೋಲ್ ವಹಿವಾಟು ನಡೆಯುತ್ತಿದೆ ಎಂದು ಎನ್‌ಹೆಚ್‌ಎಐ ಹೇಳಿದೆ. ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು 27%ನಷ್ಟು ಹೆಚ್ಚಾಗಿದೆ. ಕಳೆದ 14 ದಿನಗಳಲ್ಲಿ 2 ಮಿಲಿಯನ್ ಹೊಸ ಫಾಸ್ಟ್‌ಟ್ಯಾಗ್'ಗಳನ್ನು ಮಾರಾಟ ಮಾಡಲಾಗಿದೆ. ಇದೇ ವೇಳೆ ದೇಶದ ಒಟ್ಟು ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆ 2.8 ಕೋಟಿಗಳಿಗೆ ಏರಿಕೆಯಾಗಿದೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದ ನಂತರ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಿದೆ. ಡಿಜಿಟಲ್ ವಹಿವಾಟುಗಳು ಟೋಲ್ ಪ್ಲಾಜಾ ಆಪರೇಟರ್‌ಗಳ ಟೋಲ್ ಸಂಗ್ರಹವನ್ನು ಸರಳ ಹಾಗೂ ವೇಗಗೊಳಿಸಿವೆ. ಫಾಸ್ಟ್‌ಟ್ಯಾಗ್'ಗಳು ಟೋಲ್ ಶುಲ್ಕ ಸಂಗ್ರಹವನ್ನು ಹೆಚ್ಚು ಪಾರದರ್ಶಕವಾಗಿಸಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫೆಬ್ರವರಿ 15ರ ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್'ಗಳನ್ನು ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್ ಎಂಬುದು ವಾಹನಗಳ ಮುಂಭಾಗದ ಗಾಜಿನ ಮೇಲೆ ಅಳವಡಿಸುವ ಡಿಜಿಟಲ್ ಸ್ಟಿಕ್ಕರ್ ಆಗಿದೆ. ಫಾಸ್ಟ್‌ಟ್ಯಾಗ್'ಗಳು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್ಐಡಿ) ಟೆಕ್ನಾಲಜಿ ಮೂಲಕ ಕಾರ್ಯನಿರ್ವಹಿಸುತ್ತವೆ.

ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಸಂಬಂಧಪಟ್ಟ ಟೋಲ್ ಶುಲ್ಕವು ಫಾಸ್ಟ್‌ಟ್ಯಾಗ್ ಪ್ರಿಪೇಯ್ಡ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇದರಿಂದಾಗಿ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಂತು ಟೋಲ್ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಇದರಿಂದ ವಾಹನ ಸವಾರರ ಸಮಯ ಉಳಿಯುತ್ತದೆ. ಜೊತೆಗೆ ಮಾಲಿನ್ಯ ಉಂಟಾಗುವುದು ತಪ್ಪುತ್ತದೆ.

ಎಲ್ಲಾ ನಾಲ್ಕು ಚಕ್ರ ವಾಹನಗಳು, ಬಸ್ಸುಗಳು, ಟ್ರಕ್‌ಗಳು, ಲಾರಿ ಹಾಗೂ ಕಮರ್ಷಿಯಲ್ ವಾಹನಗಳು ಫಾಸ್ಟ್‌ಟ್ಯಾಗ್'ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ದ್ವಿಚಕ್ರ ವಾಹನಗಳು ಫಾಸ್ಟ್‌ಟ್ಯಾಗ್'ಗಳನ್ನು ಹೊಂದಿರುವುದು ಅವಶ್ಯಕವಲ್ಲ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟೋಲ್ ಪ್ಲಾಜಾದ ಮೂಲಕ ಹಾದುಹೋಗುವ ವಾಹನಗಳು ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೆ, ಅಂತಹ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುವುದು ಎಂದು ಫಾಸ್ಟ್‌ಟ್ಯಾಗ್ ಅನುಷ್ಠಾನ ಪ್ರಾಧಿಕಾರವಾದ ಎನ್‌ಹೆಚ್‌ಎಐ ಹೇಳಿದೆ.

2017ರ ಡಿಸೆಂಬರ್ 1ರಿಂದ ಹೊಸ ನಾಲ್ಕು ಚಕ್ರಗಳ ನೋಂದಣಿಗೆ ಫಾಸ್ಟ್‌ಟ್ಯಾಗ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್ ವಿತರಣೆಯನ್ನು ಬ್ಯಾಂಕ್ ಹಾಗೂ ಪಾಯಿಂಟ್-ಆಫ್-ಸೇಲ್ ಕೇಂದ್ರಗಳಿಗೆ ವಹಿಸಲಾಗಿದೆ. ಸಾರಿಗೆ ಕಚೇರಿಗಳಿಂದಲೂ ಫಾಸ್ಟ್‌ಟ್ಯಾಗ್'ಗಳನ್ನು ಖರೀದಿಸಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್ ಖರೀದಿಸಲು ಕೆವೈಸಿ ಹಾಗೂ ವಾಹನ ನೋಂದಣಿ ಪ್ರಮಾಣಪತ್ರದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ. ಅಮೆಜಾನ್ ಹಾಗೂ ಪೇಟಿಎಂನಂತಹ ಆನ್‌ಲೈನ್ ಪ್ಲಾಟ್‌ಫಾರಂಗಳ ಮೂಲಕವೂ ಫಾಸ್ಟ್‌ಟ್ಯಾಗ್'ಗಳನ್ನು ಖರೀದಿಸಬಹುದು. ಫಾಸ್ಟ್‌ಟ್ಯಾಗ್'ಗಳಿಗಾಗಿ ಮೈ ಫಾಸ್ಟ್‌ಟ್ಯಾಗ್ ಮೊಬೈಲ್ ಆ್ಯಪ್ ಸಹ ಬಿಡುಗಡೆಗೊಳಿಸಲಾಗಿದೆ.