ವಾರದ ಸುದ್ದಿ: ಬಿಎಚ್​ ಸರಣಿ ನೋಂದಣಿಗೆ ಚಾಲನೆ, ಹೈಲೋಡ್ ಇವಿ ಬಿಡುಗಡೆ, ಅಗ್ಗದ ಬೆಲೆಗೆ ರಿವೋಸ್ ಚಾರ್ಜರ್..

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಇವಿ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ವಾರದ ಸುದ್ದಿ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಗ್ರಾಹಕರ ಬೇಡಿಕೆ ಇವಿ ಬಳಕೆಗೆ ಪೂರಕವಾಗಿ ಇವಿ ವಾಹನಗಳ ಬಿಡುಗಡೆಯಲ್ಲಿ ಹೆಚ್ಚಳವಾಗುವುದರ ಜೊತೆಗೆ ಇವಿ ವಾಹನಗಳಿಗೆ ಪೂರಕವಾದ ಯೋಜನೆಗಳು ಜಾರಿಗೆ ಬರುತ್ತಿವೆ. ಇದರ ಜೊತೆಗೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಬಿಎಚ್ ಸರಣಿ ನೋಂದಣಿ ಪ್ರಕ್ರಿಯೆ ಹಾಗೂ ವಿವಿಧ ವಾಹನಗಳ ಬಿಡುಗಡೆ ಮತ್ತು ಅನಾವರಣದ ಕುರಿತು ತಿಳಿಯೋಣ.

ವಾರದ ಸುದ್ದಿ

ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆ

ಬಿಎಚ್ ಸೀರಿಸ್ ನೋಂದಣಿ ಸಂಖ್ಯೆಯ ಮೂಲಕ ವಾಹನ ಮಾಲೀಕರು ಒಂದೇ ಬಾರಿಗೆ ರಸ್ತೆ ತೆರಿಗೆ ಪಾವತಿಸುವ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಂಚರಿಸಬಹುದಾಗಿದ್ದು, ಬಿಎಚ್ ಸೀರಿಸ್ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ತಡೆರಹಿತವಾಗಿ ಸಂಚರಿಸಬಹುದಾಗಿದೆ.

ವಾರದ ಸುದ್ದಿ

ಹೊಸ ನೋಂದಣಿ ಪ್ರಕ್ರಿಯೆ ಮತ್ತು ವಿತರಣೆಯು ಮಹಾರಾಷ್ಟ್ರದಲ್ಲಿ ಮೊದಲ ಹಂತವಾಗಿ ಆರಂಭಗೊಂಡಿದ್ದು, BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ರೂ.10 ಲಕ್ಷದೊಳಗಿನ ವಾಹನಗಳಿಗೆ ಶೇ. 8 ರಷ್ಟು ತೆರಿಗೆ, ರೂ.10 ಲಕ್ಷದಿಂದ ರೂ.20 ಲಕ್ಷದ ಒಳಗಿನ ವಾಹನಗಳಿಗೆ ಶೇ. 10 ರಷ್ಟ ತೆರಿಗೆ ಮತ್ತು ರೂ. 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.

ವಾರದ ಸುದ್ದಿ

ಬಿಎಚ್ ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ತೆರಿಗೆ ದರಕ್ಕಿಂತ ಶೇ. 2 ರಷ್ಟು ಕಡಿಮೆ ತೆರಿಗೆ ವಿಧಿಸಲು ನಿರ್ಧರಿಸಿದ್ದು, ಇವಿ ವಾಹನಗಳ ತೆರಿಗೆ ಸ್ತರವು ಬ್ಯಾಟರಿ ಪ್ಯಾಕ್ ಅವಲಂಬಿಸಿ ತೆರಿಗೆ ದರ ನಿರ್ಧಾರವಾಗುತ್ತದೆ. ಮೊದಲ ಹಂತದಲ್ಲಿ ರಕ್ಷಣಾ ಸಿಬ್ಬಂದಿ ವಾಹನಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಪರಿಚಯಿಸಲಾಗಿದೆ.

ವಾರದ ಸುದ್ದಿ

ರಿವೋಸ್ ಬೋಲ್ಟ್ ಚಾರ್ಜಿಂಗ್ ಪಾಯಿಂಟ್ ಪಡೆಯಲು ಕೇವಲ ರೂ. 1 ಪಾವತಿಸಿ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ ವಿನೂತನ ಮಾದರಿಯ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವನ್ನು ಆರಂಭಿಸಲಾಗಿದ್ದು, ರಿವೋಸ್(REVOS)ಇಂಡಿಯಾ ಕಂಪನಿಯ ಅಭಿವೃದ್ದಿಪಡಿಸಿರುವ ಹೊಸ ಬೋಲ್ಟ್ ಇವಿ ಚಾರ್ಜರ್ ಸೌಲಭ್ಯವು ಭಾರತದ ಮೊದಲ ಮತ್ತು ಅತಿ ದೊಡ್ಡ ಪೀರ್-ಟು-ಪೀರ್ ಚಾರ್ಜಿಂಗ್ ನೆಟ್‌ವರ್ಕ್ ಸೌಲಭ್ಯವಾಗಿದೆ.

ವಾರದ ಸುದ್ದಿ

ಹೊಸ ಚಾರ್ಜಿಂಗ್ ಸೌಲಭ್ಯವನ್ನು ಜನಪ್ರಿಯಗೊಳಿಸಲು ಮುಂದಾಗಿರುವ ರಿವೋಸ್ ಕಂಪನಿಯು ಈ ವರ್ಷದ ಡಿಸೆಂಬರ್ ಒಳಗಾಗಿ ಬೋಲ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿಕೊಳ್ಳುವ ಬಳಕೆದಾರರಿಂದ ಕೇವಲ ರೂ. 1 ರೂಪಾಯಿ ಪಡೆದು ಹೊಸ ಚಾರ್ಜಿಂಗ್ ಸೌಲಭ್ಯವನ್ನು ಅಳವಡಿಸಲಿದೆ.ಬೋಲ್ಟ್ ಇವಿ ಚಾರ್ಜರ್ ಸೌಲಭ್ಯವು ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರ ಚಾರ್ಜಿಂಗ್ ಸೌಲಭ್ಯಗಳಿಂತಲೂ ವಿಭಿನ್ನ ಪರಿಕಲ್ಪನೆಯೊಂದಿಗೆ ಆರಂಭಗೊಂಡಿದ್ದು, ರಿವೋಸ್ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಪಡೆದುಕೊಳ್ಳಲು ಅತಿ ಸುಲಭ ಪ್ರಕ್ರಿಯೆ ಒಳಗೊಂಡಿದೆ.

ವಾರದ ಸುದ್ದಿ

ಹೈಲೋಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ದೆಹಲಿ ಮೂಲದ ಯೂಲರ್ ಮೋಟಾರ್ಸ್ ಸಹ ಹಲವು ಪ್ರಯತ್ನಗಳ ನಂತರ ಅಂತಿಮವಾಗಿ ಹೈಲೋಡ್ ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷದೊಂದಿಗೆ ಹೊಸ ಇವಿ ವಾಹನವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಮತ್ತು ಎಕ್ಸ್ಆರ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಿದೆ,

ವಾರದ ಸುದ್ದಿ

ಎಕ್ಸ್ ವೆರಿಯೆಂಟ್ 680 ಕೆಜಿ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 129 ಕಿ.ಮೀ ಮೈಲೇಜ್ ನೀಡಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆಗಳನ್ನು ನೀಡಲಾಗಿದೆ.

ವಾರದ ಸುದ್ದಿ

ಇವಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದಲ್ಲಿ ಟಾಟಾ ಪವರ್ ಹೊಸ ಮೈಲಿಗಲ್ಲು

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವಿವಿಧ ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ತ್ವರಿತಗೊಳಿದ್ದು, ಟಾಟಾ ಪವರ್ ಕಂಪನಿಯು ಸಹ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳ ಜೊತೆಗೂಡಿ ಇದುವರೆಗೆ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಮೂಲಕ ಅತಿ ಹೆಚ್ಚು ಇವಿ ಚಾರ್ಜಿಂಗ್ ನಿಲ್ದಾಣಗಳೊಂದಿಗೆ ಅಗ್ರಸ್ಥಾನಕೇರಿದೆ.

ವಾರದ ಸುದ್ದಿ

ಇವಿ ಬೇಡಿಕೆ ಹೆಚ್ಚುತ್ತಿದ್ದಂತೆ ಕಳೆದ ವರ್ಷದಿಂದ ಅಗತ್ಯಕ್ಕೆ ಅನುಗುಣವಾಗಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಿರುವ ಟಾಟಾ ಪವರ್ ಕಂಪನಿಯು ಇದುವರೆಗೆ 1 ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿಹೊಂದಿದೆ.

ವಾರದ ಸುದ್ದಿ

2021ರ ಜಾಗ್ವಾರ್ ಎಕ್ಸ್ಎಫ್ ಐಷಾರಾಮಿ ಕಾರು ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಕ್ಸ್ಎಫ್ ಐಷಾರಾಮಿ ಸೆಡಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜಾಗ್ವಾರ್ ಎಕ್ಸ್ಎಫ್ (Jaguar XF) ಐಷಾರಾಮಿ ಸೆಡಾನ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.71.60 ಲಕ್ಷಗಳಾಗಿದೆ.

ವಾರದ ಸುದ್ದಿ

ಹೊಸ ಜಾಗ್ವಾರ್ ಎಕ್ಸ್ಎಫ್ ಸೆಡಾನ್‌ನ ಫೇಸ್‌ಲಿಫ್ಟ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಆರ್-ಡೈನಾಮಿಕ್ ಮತ್ತು ಎಸ್ ಎಂದು ಕರೆಯಲ್ಪಡುವ ಎರಡು ರೂಪಂತರಗಳಲ್ಲಿ ಲಭ್ಯವಿರಲಿದೆ. ಈ ಜಾಗ್ವಾರ್ ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ವಾರದ ಸುದ್ದಿ

ಅನಾವರಣಗೊಂಡ 2022ರ Range Rover ಐಷಾರಾಮಿ ಎಸ್‍ಯುವಿ

ಲ್ಯಾಂಡ್ ರೋವರ್ ತನ್ನ ಐದನೇ ತಲೆಮಾರಿನ ರೇಂಜ್ ರೋವರ್ ಐಷಾರಾಮಿ ಎಸ್‍ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ 2022ರ ರೇಂಜ್ ರೋವರ್ ಎಸ್‍ಯುವಿಯು ಇತ್ತೀಚಿನ ತಂತ್ರಜ್ಞಾನಗಳು ಮತ್ತು ಹಾರ್ಡ್‌ವೇರ್‌ಗಳನ್ನು ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ವಾರದ ಸುದ್ದಿ

ರೇಂಜ್ ರೋವರ್ ಹೊಸ ಕಾರು ಮಾದರಿಯನ್ನು ಕಂಪನಿಯ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣಗೊಳಿಸಲಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಲಾಂಗ್-ವೀಲ್‌ಬೇಸ್ ಆವೃತ್ತಿಗಳಲ್ಲೂ ನೀಡಲಾಗುತ್ತಿದೆ. ಹೊಸ ಕಾರಿನಲ್ಲಿ ಮೊದಲ ಬಾರಿಗೆ ಏಳು ಸೀಟುಗಳ ಆಯ್ಕೆಯನ್ನು ಸಹ ನೀಡಲಾಗುತ್ತಿದ್ದು, 200 ಎಂಎಂ ಉದ್ದದ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

ವಾರದ ಸುದ್ದಿ

ಪ್ಯಾರಾ ಒಲಿಂಪಿಕ್ಸ್ ಹೀರೋ ಸುಮಿತ್‌ಗೆ ಎಕ್ಸ್‌ಯುವಿ700 ಗೋಲ್ಡ್ ಎಡಿಷನ್

ಒಲಿಂಪಿಕ್ಸ್ ವಿಜೇತರಿಗಾಗಿ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ ಹೊಸ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ವಿತರಣೆ ಆರಂಭಿಸಿದ್ದು, ಕಂಪನಿಯು ಇತ್ತೀಚೆಗೆ ಪ್ಯಾರಾ ಒಲಿಂಪಿಕ್ಸ್ ಹೀರೋ ಸುಮಿತ್‌ ಅಂಟಿಲ್ ಕೂಡಾ ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡಿದ್ದಾರೆ.

ವಾರದ ಸುದ್ದಿ

ಪ್ಯಾರಾ ಒಲಿಂಪಿಕ್ಸ್‌ನ ಜಾವಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಸುಮಿತ್‌ ಅಂಟಿಲ್ ಅವರಿಗೆ ಹೊಸ ಎಕ್ಸ್‌ಯುವಿ700 ಕಾರಿನ ಗೋಲ್ಡ್ ಎಡಿಷನ್ ವಿತರಣೆ ಮಾಡಿದ್ದು, ಹರಿಯಾಣದ ಕರ್ನಲ್‌ನಲ್ಲಿರುವ ಪಿಪಿ ಆಟೋಮೋಟಿವ್ ಶೋರೂಂನಲ್ಲಿ ಹೊಸ ಕಾರನ್ನು ಸುಮಿತ್ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು.

ವಾರದ ಸುದ್ದಿ

ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ ಕಾರಿಗೆ ಭರ್ಜರಿ ಬೇಡಿಕೆ

ಹೊಸ ಫೋಕ್ಸ್‌ವ್ಯಾಗನ್ ಟೈಗುನ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯ ನಂತರ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ಇದುವರೆಗೆ 18 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.

ವಾರದ ಸುದ್ದಿ

ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬುಕ್ಕಿಂಗ್ ಈ ವರ್ಷದ ಕೊನೆಯ ತನಕವು ಪೂರ್ಣಗೊಂಡಿದೆ. ಕಂಪನಿಯು ಸದ್ಯ ಬುಕ್ಕಿಂಗ್ ಆಧರಿಸಿ ಹೊಸ ಕಾರಿನ ವಿತರಣೆ ಆರಂಭಿಸಿದ್ದು, ಪ್ರತಿ ತಿಂಗಳು ಕಂಪನಿಯು ಮೂರರಿಂದ ನಾಲ್ಕು ಸಾವಿರ ಯುನಿಟ್ ವಿತರಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Top auto news of the week bh series rolling out revos bolt ev charging point hiload ev launched more
Story first published: Sunday, October 31, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X