ವಾರದ ಪ್ರಮುಖ ಆಟೋ ಸುದ್ದಿ:ಲಾಕ್‌ಡೌನ್ ಹೊಡೆತ, ಮಾರಾಟದಲ್ಲಿ ಕುಸಿತ, ಸಂಕಷ್ಟದಲ್ಲೂ ಸಹಕಾರ ನೀಡಿದ ಆಟೋ ಕಂಪನಿಗಳು!

ಕೋವಿಡ್ ಪರಿಣಾಮ ದೇಶಿಯ ಆಟೋ ಉದ್ಯಮವು ಈ ಹಿಂದಿನ ಲಾಕ್‌ಡೌನ್‌ಗಿಂತಲೂ ಈ ಬಾರಿ ಹೆಚ್ಚಿನ ಮಟ್ಟದ ನಷ್ಟ ಅನುಭವಿಸುತ್ತಿದ್ದು, ವಾಹನ ಉತ್ಪಾದನೆ ಸ್ಥಗಿತದ ಜೊತೆಗೆ ವಾಹನ ಮಾರಾಟಕ್ಕೂ ಅವಕಾಶ ಇಲ್ಲದಿರುವುದು ಆಟೋ ಕಂಪನಿಗಳಿಗೆ ಉದ್ಯಮ ಚಟುವಟಿಕೆಯನ್ನು ಮುನ್ನಡೆಸುವುದು ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಳೆದ ವರ್ಷದ ಕೋವಿಡ್ ಅಬ್ಬರ ತಗ್ಗಿದ ನಂತರ ವಾಹನ ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ಕೋವಿಡ್ ಎರಡನೇ ಅಲೆಯು ಭಾರೀ ಪ್ರಮಾಣದ ನಷ್ಟ ಭೀತಿ ಉಂಟು ಮಾಡುತ್ತಿದ್ದು, ಉತ್ಪಾದನೆ ಮತ್ತು ಮಾರಾಟ ಎರಡರ ಮೇಲೂ ಹೊಡೆತ ನೀಡುತ್ತಿದೆ. ಜೊತೆಗೆ ಮೇ ಮತ್ತು ಜೂನ್ ಅವಧಿಯಲ್ಲಿ ಬಿಡುಗಡೆಯಾಗಬೇಕಿದ್ದ ಹಲವಾರು ಹೊಸ ವಾಹನಗಳ ಬಿಡುಗಡೆಯೂ ಮುಂದಿನ ಕೆಲ ತಿಂಗಳಿಗೆ ಮುಂದೂಡಿಕೆ ಮಾಡಲಾಗಿದ್ದು, ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್‌ ಇಲ್ಲಿ ತಿಳಿಯೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ವಾಹನಗಳ ಉತ್ಪಾದನೆ ಸ್ಥಗಿತ, ಮಾರಾಟದಲ್ಲೂ ಕುಸಿತ

2020 ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿನ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತಷ್ಟು ಸಂಕಷ್ಟಕರ ಪರಿಸ್ಥಿತಿಗೆ ಸಿಲುಕಿದೆ. ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ. ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಆರ್ಥಿಕ ಅಭದ್ರತೆಯಿಂದಾಗಿ ಗ್ರಾಹಕರು ಸಹ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ವೈದ್ಯಕೀಯ ಸೇವೆಗಳಿಗೆ ಕೈಜೋಡಿಸಿದ ಆಟೋ ಉತ್ಪಾದನಾ ಕಂಪನಿಗಳು

ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಬೇಡಿಕೆ ಪೂರೈಸಲು ಸಾಧ್ಯವಾಗದ ಪರಿಣಾಮ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಪ್ರಮುಖ ಕಾರು ಕಂಪನಿಗಳು ಮೆಡಿಕಲ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಇನ್ನು ಕೆಲವು ಆಟೋ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ನೀಡಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು 200 ಬೆಡ್‌ಗಳ ಜೊತೆ ಕಾರ್ ಆಂಬ್ಯುಲೆನ್ಸ್ ನಿಯೋಜನೆಯೊಂದಿಗೆ ತನ್ನ ಗ್ರಾಹಕರ ಆರೋಗ್ಯ ಕಾಳಜಿಗಾಗಿ 24x7 ಹೆಲ್ತ್‌ಲೈನ್ ಆರಂಭಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಜಾರಿಯಾಗಲಿದೆ ಹೊಸ ಸಾರಿಗೆ ನಿಯಮ

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ಹೊಸ ನಿಯಮಗಳೊಂದಿಗೆ ವಾಹನಗಳ ಮಾಲಿನ್ಯ ತಗ್ಗಿಸುವಲ್ಲಿ ಸಾಕಷ್ಟು ಬದಲಾವಣೆಗಳೊಳಿಸಿದ್ದು, ಹೊಸ ಎಮಿಷನ್ ಜಾರಿ ನಂತರ ಇದೀಗ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸಲಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹೊಸ ಕಾರುಗಳಲ್ಲಿ ಕಡ್ಡಾಯವಾಗಿ ಡ್ಯುಯಲ್ ಏರ್‌ಬ್ಯಾಗ್ ನಿಯಮ ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು ಇದೀಗ ವಾಹನಗಳ ಟೈರ್ ಬಳಕೆಗೆ ಕೆಲವು ಮಾನದಂಡಗಳನ್ನು ಕಡ್ಡಾಯಗೊಳಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕರ್ನಾಟಕಕ್ಕೆ ಟಿವಿಎಸ್ ರೂ.4 ಕೋಟಿ ನೆರವು

ವಾಹನ ಉತ್ಪಾದನೆ ಸ್ಥಗಿತವಾಗಿರುವುದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಸಹ ವೈರಸ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ರೂ.40 ಕೋಟಿ ಮಾತ್ರವಲ್ಲ ಕರ್ನಾಟಕ ಸರ್ಕಾರಕ್ಕೂ ಸಹ ಪ್ರತ್ಯೇಕವಾಗಿ ರೂ. 4 ಕೋಟಿ ದೇಣಿಗೆ ಸಲ್ಲಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಕೋವಿಡ್ ವಿರುದ್ದ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಮುಂದೆಯೂ ಅಗತ್ಯ ಸಹಕಾರ ನೀಡುವುದಾಗಿ ಹೇಳಿಕೊಂಡಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ನ್ಯೂ ಜನರೇಷನ್ ಸ್ಕಾರ್ಪಿಯೋ ಮುಂದೂಡಿಕೆ

ಪೂರ್ವ ನಿಗದಿಯಂತೆ ಈ ವರ್ಷ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಬೇಕಿದ್ದ ನ್ಯೂ ಜನರೇಷನ್ ಸ್ಕಾರ್ಪಿಯೋ ಮಾದರಿಯನ್ನು ಮಹೀಂದ್ರಾ ಕಂಪನಿಯು ಮುಂಬರುವ 2022ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೋವಿಡ್ ತಗ್ಗಿದ ನಂತರ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಂಡಿದ್ದ ಹಲವು ಹೊಸ ವಾಹನ ಮಾದರಿಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳ ಮಾರಾಟ ಮೇಲೆ ಮಾತ್ರ ಗಮನಹರಿಸಲು ನಿರ್ಧರಿಸಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸದ್ಯಕ್ಕಿಲ್ಲ ಹ್ಯುಂಡೈ ಅಲ್ಕಾಜರ್ ಬಿಡುಗಡೆ

ಕೋವಿಡ್ ಪರಿಣಾಮ ತೀವ್ರ ನಷ್ಟ ಅನುಭವಿಸುತ್ತಿರುವ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಬಿಡುಗಡೆ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿಯನ್ನು ಸದ್ಯಕ್ಕೆ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ವಾಹನ ಮಾದರಿಗಳ ಮಾರಾಟವನ್ನು ಸುಧಾರಿಸುವತ್ತ ಗಮನಹರಿಸಿರುವ ಆಟೋ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯ ಯೋಜನೆಯಿಂದಾಗಬಹುದಾದ ನಷ್ಟದ ಬಗ್ಗೆ ಎಚ್ಚರವಹಿಸುತ್ತಿವೆ.

Most Read Articles

Kannada
English summary
Top Auto News Of The Week. Read in Kannada.
Story first published: Sunday, May 23, 2021, 1:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X