ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಹೊಸ ವರ್ಷದಲ್ಲಿ ಕಾರು ತಯಾರಕ ಕಂಪನಿಗಳು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿವೆ. ಕೆಲವು ಕಂಪನಿಗಳು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದ್ದರೆ, ಇನ್ನೂ ಕೆಲವು ಕಂಪನಿಗಳು ಹೊಸ ಮಾದರಿಗಳನ್ನು ಅನಾವರಣಗೊಳಿಸಿವೆ. ಕಳೆದ ವಾರ ದೇಶಿಯ ಕಾರು ಮಾರುಕಟ್ಟೆಯಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ಈ ಲೇಖನದಲ್ಲಿ ನೋಡೋಣ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

1. ಹೊಸ ಸ್ಕೋಡಾ ಸೂಪರ್ಬ್ ಬಿಡುಗಡೆ

ಸ್ಕೋಡಾ ಕಂಪನಿಯು ತನ್ನ ಹೊಸ ಸೂಪರ್ಬ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.31.99 ಲಕ್ಷಗಳಾಗಿದೆ. ಈ ಕಾರ್ ಅನ್ನು ಸ್ಪೋರ್ಟ್ ಲೈನ್ ಹಾಗೂ ಎಲ್ ಅಂಡ್ ಕೆ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ಸೂಪರ್ಬ್ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಹೊಸ ಕಾರು ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ ಹಾಗೂ ಎಕ್ವಿಪ್ ಮೆಂಟ್'ಗಳನ್ನು ಹೊಂದಿದೆ. ಹೊಸ ಸೂಪರ್ಬ್ ಕಾರು ಹೊಸ ಸ್ಟೀಯರಿಂಗ್ ವ್ಹೀಲ್, ಹೊಸ ​​ಬ್ಯಾಡ್ಜಿಂಗ್, ಎರಡು ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಹಾಗೂ ವರ್ಚುವಲ್ ಕಾಕ್ ಪಿಟ್'ಗಳನ್ನು ಹೊಂದಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಈ ಎರಡೂ ಮಾದರಿಗಳಲ್ಲಿ ಯುಎಸ್‌ಬಿ-ಸಿ ಪೋರ್ಟ್ ಅಪ್ ಫ್ರಂಟ್, ಎಂಐಬಿ 3 ಎಂಟು ಇಂಚಿನ ಟಚ್‌ಸ್ಕ್ರೀನ್, ಅಪ್ ಡೇಟ್ ಮಾಡಲಾದ ಹೊಸ ಇಂಟರ್ ಫೇಸ್'ಗಳನ್ನು ಅಳವಡಿಸಲಾಗಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

2. ಜೀಪ್ ಕಂಪಾಸ್ ಫೇಸ್‌ಲಿಫ್ಟ್

ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಫೇಸ್‌ಲಿಫ್ಟ್ ಆವೃತ್ತಿಯ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಅನಾವರಣದ ಜೊತೆಗೆ ಈ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆ ದಿನಾಂಕವನ್ನು ಸಹ ಬಹಿರಂಗಪಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಜನವರಿ 27ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ ಜೀಪ್ ಕಂಪಾಸ್ ಆವೃತ್ತಿಯ ವಿನ್ಯಾಸ, ಫೀಚರ್ ಹಾಗೂ ಎಂಜಿನ್ ಆಯ್ಕೆಗಳನ್ನು ಬಹಿರಂಗಪಡಿಸಲಾಗಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

3. ಟಾಟಾ ಸಫಾರಿ ಉತ್ಪಾದನೆ

ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಕಾರ್ ಅನ್ನು ಮತ್ತೆ ಬಿಡುಗಡೆಗೊಳಿಸಲಿದೆ. ಜನವರಿಯಲ್ಲಿ ಡೀಲರ್'ಗಳಿಗೆ ತಲುಪಿಸುವ ಮೊದಲು ಈ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಲಾಗುತ್ತದೆ. ಹೊಸ ಸಫಾರಿಯ ವಿನ್ಯಾಸದ ಬಗೆಗಿನ ಮಾಹಿತಿಯನ್ನು ಜನವರಿ 26ರಂದು ಬಹಿರಂಗಪಡಿಸಲಾಗುವುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಹೊಸ ಟಾಟಾ ಸಫಾರಿ ಎಸ್‌ಯುವಿಯನ್ನು ಇಂಪ್ಯಾಕ್ಟ್ 2.0 ವಿನ್ಯಾಸ ಭಾಷೆಯಲ್ಲಿ ಸಿದ್ಧಪಡಿಸಲಾಗುವುದು ಎಂದು ಕಂಪನಿ ಹೇಳಿದೆ. ಹೊಸ ಸಫಾರಿ ಎಸ್‌ಯುವಿಯನ್ನು ಹ್ಯಾರಿಯರ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

4. ಭಾರತಕ್ಕೆ ಕಾಲಿಟ್ಟ ಟೆಸ್ಲಾ

ಟೆಸ್ಲಾ ಭಾರತದಲ್ಲಿ ತನ್ನ ಕಂಪನಿಯನ್ನು ನೋಂದಣಿ ಮಾಡಿದೆ. ಕಂಪನಿಯನ್ನು ಟೆಸ್ಲಾ ಮೋಟಾರ್ಸ್ ಇಂಡಿಯಾ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಕಂಪನಿಯು ಮೂವರು ಹೂಡಿಕೆದಾರರನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

5. ಟಾಟಾ ಆಲ್ಟ್ರೋಜ್ ಐಟರ್ಬೊ ಅನಾವರಣ

ಹೊಸ ಟಾಟಾ ಆಲ್ಟ್ರೋಜ್ ಐಟರ್ಬೊ ಕಾರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಒಂದು ವರ್ಷದ ಹಿಂದೆ ಆಲ್ಟ್ರೋಜ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಆಲ್ಟ್ರೋಜ್ ಕಾರಿನ ಟರ್ಬೊ ಮಾದರಿಯನ್ನು ಅನಾವರಣಗೊಳಿಸಲಾಗಿದೆ. ಈ ಮಾದರಿಯು ಹೊಸ ಫೀಚರ್ ಹಾಗೂ ಎಕ್ವಿಪ್ ಮೆಂಟ್'ಗಳನ್ನು ಹೊಂದಿದೆ.

ದೇಶಿಯ ಕಾರು ಮಾರುಕಟ್ಟೆಯಲ್ಲಿ ಕಳೆದ ವಾರ ನಡೆದ ಪ್ರಮುಖ ಘಟನೆಗಳಿವು

ಆಲ್ಟ್ರೋಜ್ ಐಟರ್ಬೊದ ಬುಕ್ಕಿಂಗ್'ಗಳನ್ನು ಜನವರಿ 14ರಿಂದ ದೇಶಾದ್ಯಂತ ಆರಂಭಿಸಲಾಗಿದೆ. ಗ್ರಾಹಕರು ಈ ಕಾರಿನ ಟೆಸ್ಟ್ ರೈಡ್ ಪಡೆಯಬಹುದು. ಹೊಸ ಟಾಟಾ ಆಲ್ಟ್ರೋಜ್ ಐಟರ್ಬೊ ಕಾರು ಜನವರಿ 22ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಅದೇ ದಿನ ಕಾರಿನ ಬೆಲೆಯನ್ನು ಬಹಿರಂಗಪಡಿಸಲಾಗುತ್ತದೆ.

Most Read Articles

Kannada
English summary
Top car news of domestic car market. Read in Kannada.
Story first published: Monday, January 18, 2021, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X