ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಭಾರತವು ಹ್ಯಾಚ್‌ಬ್ಯಾಕ್ ಕಾರುಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಹೆಚ್ಚು ಮೈಲೇಜ್ ಹಾಗೂ ಕಡಿಮೆ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಈ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ಕಂಪನಿಗಳು ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತವೆ. ಆದರೆ ಭಾರತದಲ್ಲಿರುವ ಹಲವು ಕಾರು ಮಾದರಿಗಳು ಜಾಗತಿಕ ಕಾರು ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ. ಇತ್ತೀಚಿಗೆ ಕಾರು ಖರೀದಿಸುವ ಗ್ರಾಹಕರು ಸುರಕ್ಷತಾ ಫೀಚರ್'ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ಪರಿಸ್ಥಿತಿಯಲ್ಲಿ ಕಾರು ತಯಾರಕ ಕಂಪನಿಗಳು ಕಂಪನಿಗಳು ತಾವು ಮಾರಾಟ ಮಾಡುವ ಕಾರುಗಳಲ್ಲಿ ಅಗತ್ಯವಾದ ಸುರಕ್ಷತಾ ಫೀಚರ್'ಗಳನ್ನು ಹೊಂದಿರುವ ಅಗತ್ಯವಿದೆ. ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

1. ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್ ಕಳೆದ ಕೆಲವು ವರ್ಷಗಳಿಂದ ತನ್ನ ಕಾರುಗಳ ಗುಣಮಟ್ಟ ಹಾಗೂ ಪರ್ಫಾಮೆನ್ಸ್'ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಟಾಟಾ ಮೋಟಾರ್ಸ್ ತನ್ನ ಎಲ್ಲಾ ಹೊಸ ಕಾರುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಉತ್ಪಾದಿಸುತ್ತಿದೆ. ಇತ್ತೀಚಿನ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾ ಆಲ್ಟ್ರೋಜ್ ಕಾರು 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ರೇಟಿಂಗ್‌ ಮೂಲಕ ಆಲ್ಟ್ರೋಜ್ ಭಾರತದ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಹಾಗೂ ಹ್ಯಾರಿಯರ್ ಕಾರುಗಳು ಸಹ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿವೆ. ಟಾಟಾ ಆಲ್ಟ್ರೋಜ್ ಕಾರಿನಲ್ಲಿ 1.2 ಲೀಟರ್ ಎಂಜಿನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಕಾರನ್ನು ಟರ್ಬೊ ಪೆಟ್ರೋಲ್ ಎಂಜಿನ್‌ನಲ್ಲಿಯೂ ಮಾರಾಟ ಮಾಡಲಾಗುತ್ತದೆ. ಟಾಟಾ ಆಲ್ಟ್ರೋಜ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.7 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

2. ಟಾಟಾ ಟಿಯಾಗೊ

ಟಿಯಾಗೊ ಸುರಕ್ಷತಾ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯ ಎರಡನೇ ಕಾರು. ಜಾಗತಿಕ ಎನ್‌ಸಿಎಪಿ ಕ್ರಾಶ್ ಟೆಸ್ಟ್‌ನಲ್ಲಿ ಈ ಕಾರು4-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಈ ಕಾರು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್-ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.4.8 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

3. ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್‌ನ ಕಾರುಗಳು ವಿಶ್ವಾದ್ಯಂತ ತಮ್ಮ ಪರ್ಫಾಮೆನ್ಸ್'ಗಾಗಿ ಜನಪ್ರಿಯವಾಗಿವೆ. ಫೋಕ್ಸ್‌ವ್ಯಾಗನ್‌ನ ಕಾರುಗಳ ನಿರ್ಮಾಣ ಗುಣಮಟ್ಟವೂ ಅತ್ಯುತ್ತಮವಾಗಿದೆ. ಫೋಕ್ಸ್‌ವ್ಯಾಗನ್ ಪೊಲೊ ಭಾರತದಲ್ಲಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಫೋಕ್ಸ್‌ವ್ಯಾಗನ್ ಪೊಲೊಗೆ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಪಡೆದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್-ಇಬಿಡಿ, ಪಾರ್ಕಿಂಗ್ ಸೆನ್ಸಾರ್‌ಗಳಂತಹ ಹಲವು ಫೀಚರ್'ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಭಾರತದಲ್ಲಿ ಈ ಕಾರು 1.0 ಲೀಟರ್ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.6 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

4. ಫೋರ್ಡ್ ಫಿಗೊ

ಅಮೆರಿಕಾದ ಫೋರ್ಡ್ ಕಂಪನಿಯು ಕಾರುಗಳ ಸುರಕ್ಷತೆಯಲ್ಲಿ ಬಹಳ ಮುಂದಿದೆ. ಫೋರ್ಡ್ ಕಂಪನಿಯು ಭಾರತದಲ್ಲಿ ಎಸ್‌ಯುವಿ, ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುತ್ತದೆ. ಫಿಗೊ, ಫೋರ್ಡ್ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರ್ ಆಗಿದ್ದು, ಹೆಚ್ಚು ಸುಧಾರಿತ ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಫೋರ್ಡ್ ಫಿಗೊ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್‌ನಲ್ಲಿ 3 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಎಬಿಎಸ್-ಇಬಿಡಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಮೂರು ಪಾಯಿಂಟ್ ಸೀಟ್ ಬೆಲ್ಟ್'ಗಳನ್ನು ಹೊಂದಿದೆ. ಫೋರ್ಡ್ ಫಿಗೊದ ಟಾಪ್ ಎಂಡ್ ಮಾದರಿಯಲ್ಲಿ 6 ಏರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.64 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು

ಮಾರುತಿ ಸುಜುಕಿ ಆಲ್ಟೊ, ಸ್ವಿಫ್ಟ್, ವ್ಯಾಗನ್ಆರ್ ಹಾಗೂ ಹ್ಯುಂಡೈ ಐ 10ನಂತಹ ಹೆಚ್ಚು ಮಾರಾಟವಾಗುವ ಭಾರತದ ಅನೇಕ ಜನಪ್ರಿಯ ಹ್ಯಾಚ್‌ಬ್ಯಾಕ್ಕಾರುಗಳು 2 ಅಥವಾ ಅದಕ್ಕಿಂತ ಕಡಿಮೆ ಸುರಕ್ಷತಾ ರೇಟಿಂಗ್ ಪಡೆದಿವೆ.

Most Read Articles

Kannada
English summary
Top hatchback cars with five star safety rating in Indian market. Read in Kannada.
Story first published: Monday, February 15, 2021, 20:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X