ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota

ಟೊಯೊಟಾ ಕಿರ್ಲೊಸ್ಕರ್ ಮೋಟಾರ್(Toyota Kirloskar Motor) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿನ ತನ್ನ ಕಾರು ಮಾರಾಟ ಯೋಜನೆಯಲ್ಲಿ ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಸ ಯೋಜನೆಯ ಅನುಷ್ಠಾನಕ್ಕಾಗಿ ಯಾರಿಸ್(Yaris) ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಭಾರತದಲ್ಲಿ ಹೊಸ ಎಮಿಷನ್ ಜಾರಿ ನಂತರ ಇಟಿಯಾಸ್, ಇಟಿಯಾಸ್ ಕ್ರಾಸ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದ ಟೊಯೊಟಾ ಕಂಪನಿಯು ಗ್ರಾಹಕರ ಆಯ್ಕೆ ಸತತ ಹಿನ್ನಡೆ ಅನುಭವಿಸುತ್ತಿರುವ ಯಾರಿಸ್ ಸೆಡಾನ್ ಮಾದರಿಯ ಮಾರಾಟವನ್ನು ಸಹ ಸ್ಥಗಿತಗೊಳಿಸಿ ಹೊಸ ಯೋಜನೆಯ ಅನುಷ್ಠಾನ ಸಿದ್ದತೆ ನಡೆಸಿದೆ.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

2018ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಯಾರಿಸ್ ಸೆಡಾನ್ ಕಾರು ಮಾದರಿಯು ಇದುವರೆಗೆ ಸುಮಾರು 19,784 ಯನಿಟ್ ಮಾರಾಟಗೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳ ಅಬ್ಬರದ ನಡುವೆ ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಾರಿಸ್ ವಿಫಲವಾಗಿದೆ.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲೇ ಬಲಿಷ್ಠ ಎಂಜಿನ್ ಮತ್ತು ಅತಿ ಹೆಚ್ಚು ಸೇಫ್ಟಿ ಫೀಚರ್ಸ್ ಹೊಂದಿದ್ದರೂ ಯಾರಿಸ್ ಕಾರು ಮಾದರಿಯು ಪ್ರೀಮಿಯಂ ದರ ಸಮರ ನಡುವೆ ಕೆಲ ತಿಂಗಳಿನಿಂದ ಕನಿಷ್ಠ ಪ್ರಮಾಣದ ಬೇಡಿಕೆ ಪಡೆದುಕೊಂಡಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳ ಆಯ್ಕೆ ಹೊಂದಿದ್ದ ಯಾರಿಸ್ ಕಾರು ಮಾದರಿಯು ಪ್ರತಿಸ್ಪರ್ಧಿಗಳಿಂತಲೂ ತುಸು ದುಬಾರಿಯಾಗಿರುವುದರ ಜೊತೆಗೆ ಮರುಮಾರಾಟ ಮೌಲ್ಯವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಹೊಸ ಎಮಿಷನ್‌ನೊಂದಿಗೆ ಅಭಿವೃದ್ದಿಗೊಂಡಿದ್ದ 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 106-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಬಿಎಸ್-6 ಜಾರಿಗೂ ಮುನ್ನ ಟೊಯೊಟಾ ಕಾರು ಮಾರಾಟ ಉತ್ತಮ ಸ್ಥಾನ ಹೊಂದಿದ್ದ ಯಾರಿಸ್ ಮಾದರಿಯು ಬಿಎಸ್-6 ಎಂಜಿನ್ ಬಿಡುಗಡೆಗೊಂಡ ನಂತರ ಹೆಚ್ಚಳವಾದ ದುಬಾರಿ ದರ ಪರಿಣಾಮ ಸತತ ಹಿನ್ನಡೆ ಅನುಭವಿಸಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಪ್ರತಿ ತಿಂಗಳ ಕಾರು ಮಾರಾಟ ಪಟ್ಟಿಯಲ್ಲಿ ಕಳೆದ ಒಂದು ವರ್ಷದಿಂದ 200 ಯುನಿಟ್‌ನಿಂದ 300 ಯುನಿಟ್ ಮಾತ್ರ ಮಾರಾಟವಾಗುತ್ತಿದ್ದು, ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.16 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.60 ಲಕ್ಷ ಬೆಲೆ ಹೊಂದಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಕೇವಲ ಪೆಟ್ರೋಲ್ ಮಾದರಿಯಲ್ಲಿಯೇ ಪ್ರತಿಸ್ಪರ್ಧಿ ಕಾರುಗಳಿಂತಲೂ ಹೆಚ್ಚು ದರ ಹೊಂದಿದ್ದ ಯಾರಿಸ್ ಕಾರು ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಹೋಂಡಾ ಸಿಟಿ ಸೇರಿದಂತೆ ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್ ಕಾರುಗಳಿಂದಲೂ ಹೆಚ್ಚಿನ ಸ್ಪರ್ಧೆ ಎದುರಿಸಿತ್ತು.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಈ ಹಿನ್ನಲೆಯಲ್ಲಿ ಯಾರಿಸ್ ಕಾರು ಮಾದರಿಯನ್ನು ಸ್ಥಗಿತಗೊಳಿಸುವುದಾಗಿ ಟೊಯೊಟಾ ಕಂಪನಿಯೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಲಭ್ಯವಿರುವ ಸ್ಟಾಕ್ ಮಾರಾಟದ ನಂತರ ಯಾವುದೇ ಹೊಸ ಉತ್ಪಾದನಾ ಪ್ರಕ್ರಿಯೆ ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಭಾರತದಲ್ಲಿ Yaris ಪ್ರೀಮಿಯಂ ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಹೊಸ ಯಾರಿಸ್ ಕಾರು ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದರೂ ಸಹ ಕಂಪನಿಯು ಅಸ್ತಿತ್ವದಲ್ಲಿ ಯಾರಿಸ್ ಕಾರು ಮಾಲೀಕರಿಗೆ ಮುಂದಿನ ಹತ್ತು ವರ್ಷಗಳ ಕಾಲ ಬಿಡಿಭಾಗಗಳ ಸೇವೆಯಲ್ಲಿ ಯಾವುದೇ ತೊಂದರೆಯಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ Yaris ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಸದ್ಯ ಯಾರಿಸ್ ಕಾರು ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದರೂ ಸಹ ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ರೀಬ್ಯಾಡ್ಜ್ ಕಾರುಗಳ ಬಿಡುಗಡೆ ಯೋಜನೆಗೆ ಸಿದ್ದತೆ ನಡೆಸಿದ್ದು, ಶೀಘ್ರದಲ್ಲೇ ಸಿಯಾಜ್ ಕಾರಿನ ರೀಬ್ಯಾಡ್ಜ್ ಮಾದರಿಯು ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ Yaris ಪ್ರೀಮಿಯಂ ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಮಾರುತಿ ಸುಜುಕಿ ಜೊತೆಗೂಡಿ ಈಗಾಗಲೇ ಗ್ಲಾಂಝಾ, ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಸಿಯಾಜ್ ಕಾರು ಮಾದರಿಯನ್ನು ಸಹ ಯಾರಿಸ್ ಕಾರಿನ ಸ್ಥಾನದಲ್ಲಿ ಹೊಸ ಹೆಸರಿನೊಂದಿಗೆ ಮಾರಾಟ ಮಾಡಲಿದೆ.

ಭಾರತದಲ್ಲಿ Yaris ಪ್ರೀಮಿಯಂ ಸೆಡಾನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ರೀಬ್ಯಾಡ್ಜ್ ಹೊಂದಲಿರುವ ಸಿಯಾಜ್ ಕಾರು ಮೂಲ ಮಾದರಿಯಲ್ಲಿ ತಾಂತ್ರಿಕ ಅಂಶಗಳೊಂದಿಗೆ ಹೊಸದಾಗಿ ಬ್ರಾಂಡ್ ಲೊಗೊ ಮತ್ತು ಕೆಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿಯಲಿದ್ದು, ಮೂಲ ಮಾದರಿಗಿಂತಲೂ ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಮಾರಾಟಗೊಳ್ಳಲಿದೆ.

ಭಾರತದಲ್ಲಿ Yaris ಪ್ರೀಮಿಯಂ ಸೆಡಾನ್ ಕಾರು ಮಾರಾಟ ವನ್ನು ಸ್ಥಗಿತಗೊಳಿಸಿದ Toyota ಕಿರ್ಲೊಸ್ಕರ್ ಮೋಟಾರ್

ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರು ಮಾದರಿಗಳ ಮೂಲಕ ಈಗಾಗಲೇ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಟೊಯೊಟಾ ಕಂಪನಿಯು ಸಿಯಾಜ್ ರೀಬ್ಯಾಡ್ಜ್ ಮಾದರಿಯಿಂದಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಯಾರಿಸ್ ಕಾರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಾಗಲಿದೆ ಎನ್ನಬಹುದು.

Most Read Articles

Kannada
Read more on ಟೊಯೊಟಾ toyota
English summary
Toyota kirloskar motor announces yaris discontinued in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X