ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಜಪಾನ್ ಕಾರು ತಯಾರಕ ಕಂಪನಿ ಟೊಯೊಟಾ ಭಾರತದಲ್ಲಿ ತನ್ನ ಐಷಾರಾಮಿ ಸರಣಿ ಕಾರುಗಳ ಮಾರಾಟವನ್ನು ಹೆಚ್ಚಿಸುವತ್ತ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ರಾವ್4 ಹೈಬ್ರಿಡ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಲ್ಲಿ ಹೈಬ್ರಿಡ್ ಪವರ್‌ಟ್ರೈನ್ ಮಾದರಿಗಳ ಮಾರಾಟವು ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಕೂಡಾ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ರಾವ್4 ಎಸ್‌ಯುವಿ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿದೆ. ಮಾರುಕಟ್ಟೆ ಅಧ್ಯಯನದಲ್ಲಿ ಹೈಬ್ರಿಡ್ ಕಾರು ಮಾದರಿಗಳಿಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ರಾವ್4 ಕಾರು ಮಾದರಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಹೊಸ ಕಾರು ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಸಹ ಕೈಗೊಂಡಿರುವ ಟೊಯೊಟಾ ಕಂಪನಿಯು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ರಾವ್4 ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಾರ್ಷಿಕವಾಗಿ 2,500 ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಐಷಾರಾಮಿ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುತ್ತಿದ್ದು, ವೆಲ್‌ಫೈರ್ ಎಂಪಿವಿ ನಂತರ ಇದೀಗ ರಾವ್4 ಬಿಡುಗಡೆಯ ಸಿದ್ದತೆಯಲ್ಲಿದೆ. ಜಾಗತಿಕವಾಗಿ ಮಾರಾಟಗೊಳ್ಳುವ ಟಾಪ್10 ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾವ್4 ಹೈಬ್ರಿಡ್ ಎಸ್‌ಯುವಿ ಮಾದರಿಯು ಐಷಾರಾಮಿ ಫೀಚರ್ಸ್‌ನೊಂದಿಗೆ ಭಾರತದ್ಲೂ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಹೊಸ ರಾವ್4 ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಹೊಸ ಕಾರನ್ನು ಟೊಯೊಟಾ ಕಂಪನಿಯು ಹೊಚ್ಚ ಹೊಸ ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಳ್ಳುತ್ತಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ರಾವ್4 ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ರಾವ್4 ಕಾರು ಗ್ರಾಹಕರ ಗಮನಸೆಳೆಯಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಹೈಬ್ರಿಡ್ ತಂತ್ರಜ್ಞಾನವು ಆಲ್ ವೀಲ್ಹ್ ಡ್ರೈವ್ ಮೋಡ್‌ನೊಂದಿಗೆ ನಾಲ್ಕು ಚಕ್ರಗಳಿಗೂ ಸಮಾನ ಶಕ್ತಿ ಪೂರೈಕೆಯೊಂದಿಗೆ 218-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಕ್ವಿಕ್ ಆಟೋ ಗೇರ್‌ಬಾಕ್ಸ್‌ ಪ್ರೇರಣೆ ಮೂಲಕ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಬಲಿಷ್ಠತೆ ಹೊಂದಿದೆ.

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ರಾವ್4 ಎಸ್‌ಯುವಿ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, 4,600-ಎಂಎಂ ಉದ್ದ, 1,855-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,690-ಎಂಎಂ ವೀಲ್ಹ್ ಬೆಸ್ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಟೊಯೊಟಾ ಐಷಾರಾಮಿ ಕಾರು ರಾವ್4 ಬಿಡುಗಡೆಯಾಗುವುದು ಪಕ್ಕಾ..!

ರಾವ್4 ಎಸ್‌ಯುವಿ ಬೆಲೆ(ಅಂದಾಜು)

ಹೊಸ ರಾವ್4 ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವುದರಿಂದ ಹೊಸ ಕಾರು ತುಸು ದುಬಾರಿಯಾಗಿರಲಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 49 ಲಕ್ಷದಿಂದ ರೂ. 55 ಲಕ್ಷ ಬೆಲೆ ಹೊಂದಲಿರುವ ಹೊಸ ಕಾರು ಮುಂಬರುವ ಏಪ್ರಿಲ್ ಅಥವಾ ಮೇ ಹೊತ್ತಿಗೆ ಬಿಡುಗಡೆಯಾಗಲಿದೆ.

Article Published On: Wednesday, April 21, 2021, 10:55 [IST]
English summary
Toyota RAV4 SUV Spotted Testing In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+