ಕರೋನಾ ಭೀತಿಯ ನಡುವೆಯೂ ಏಪ್ರಿಲ್ ತಿಂಗಳಿನಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಟೊಯೊಟಾ ವೆಲ್‌ಫೈರ್
ಜಪಾನ್ ಮೂಲದ ವಾಹನ ತಯರಾಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ವೆಲ್‌ಫೈರ್ ಆಗಿದೆ. ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ.

ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಒಳಗೊಂಡಿರುವ ವೆಲ್‌ಫೈರ್ ಯೋಗ್ಯ ದರದಲ್ಲಿ ಆಕರ್ಷಿಸುತ್ತಿದೆ. ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಎಕ್ಸಿಕ್ಯುಟಿವ್ ಲೌಂಜ್ ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಈ ಟೊಯೊಟಾ ವೆಲ್‌ಫೈರ್ ಕಾರಿನ ಆರಂಭಿಕ ಬೆಲೆಯು ನವದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.87 ಲಕ್ಷಗಳಾಗಿದೆ.

ಕಳೆದ ತಿಂಗಳಿನಲ್ಲಿ ಟೊಯೊಟಾ ವೆಲ್‌ಫೈರ್ ಮಾದರಿಯ 25 ಯುನಿಟ್ ಗಳನ್ನು ಮಾರಾಟಗೊಳಿಸಿವೆ. ಇನ್ನು ಈ ಐಷಾರಾಮಿ ಕಾರಿನ ಬೆಲೆಯನ್ನು ಪರಿಗಣಿಸಿ ಮತ್ತು ಕೊರೋನಾ ಭೀತಿಯ ನಡುವೆ 25 ಯುನಿಟ್ ಗಳನ್ನು ಮಾರಾಟಗೊಳಿಸಿರುವುದು ಇದೊಂದು ಉತ್ತಮ ಸಂಖ್ಯೆಯಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ವೆಲ್‌ಫೈರ್‌ನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ.

ಈ ಐಷಾರಾಮಿ ಎಂಪಿವಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಮನರಂಜನಾ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಕಾರಿನಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

ಇದರೊಂದಿಗೆ ಚಾಲಿತ ಸ್ಲೈಡಿಂಗ್ ಡೋರುಗಳನ್ನು ಹೊಂದಿವೆ. ಇನ್ನು ಸುರಕ್ಷತೆಗಾಗಿ ಈ ಐಷಾರಾಮಿ ವೆಲ್‌ಫೈರ್ ಕಾರಿನಲ್ಲಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ವೆಲ್‌ಫೈರ್‌ನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.


Click it and Unblock the Notifications