1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ (ಟಿಪಿಡಿಡಿಎಲ್) ದೆಹಲಿಯಲ್ಲಿ 1,400 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಶೀಘ್ರದಲ್ಲಿಯೇ ಇನ್ನಷ್ಟು ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕಂಪನಿ ತಿಳಿಸಿದೆ. ಟಿಪಿಡಿಡಿಎಲ್, ದೆಹಲಿ ಸರ್ಕಾರ ಹಾಗೂ ಟಾಟಾ ಪವರ್ ನಡುವಿನ ಜಂಟಿ ಉದ್ಯಮವಾಗಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಟಿಪಿಡಿಡಿಎಲ್ ದೆಹಲಿಯ ಗುರುತಿಸಲಾದ ಪ್ರದೇಶಗಳಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯನ್ನು ನಿರ್ವಹಿಸುತ್ತಿದೆ. ಈ ಇವಿ ಚಾರ್ಜಿಂಗ್ ಕೇಂದ್ರಗಳು ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುತ್ತವೆ. ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಮುಂಬರುವ ದಿನಗಳಲ್ಲಿ 50 ಸಾರ್ವಜನಿಕ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಉತ್ತರ ದೆಹಲಿ ನಾಗರಿಕ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಕಾರ್ಯ ನಿರ್ವಹಿಸುತ್ತಿದೆ. ಚಾರ್ಜರ್ ಹಾಗೂ ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಕಂಪನಿಯು ತನ್ನ ಭೂಮಿಯನ್ನು ಗುತ್ತಿಗೆಗೆ ನೀಡುತ್ತಿದೆ. ಲ್ಯಾಂಡ್ ಲೀಸ್ ಮಾದರಿಯಲ್ಲಿ, ಸನ್ ಮೊಬಿಲಿಟಿ ಸಹಯೋಗದಲ್ಲಿ ಆಜಾದ್‌ಪುರ ಹಾಗೂ ರೋಹಿಣಿ ಆರ್‌ಜಿ 3 ಗ್ರಿಡ್‌ನಲ್ಲಿ ಎರಡು ಬ್ಯಾಟರಿ ಸ್ವಾಪ್ ಕೇಂದ್ರಗಳನ್ನು ನಿಯೋಜಿಸಲಾಗಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಕಂಪನಿಯು ಒಪೆಕ್ಸ್ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ಖಾಸಗಿ ಮಾಲೀಕರಿಗೆ ಗುತ್ತಿಗೆ ಆಧಾರದ ಮೇಲೆ ಇವಿ ಚಾರ್ಜರ್‌ಗಳನ್ನು ಸ್ಥಾಪಿಸುತ್ತದೆ. ಇದು ಕಂಪನಿಯು ಚಾರ್ಜಿಂಗ್ ಘಟಕವನ್ನು ಸ್ಥಾಪಿಸಲು, ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಗುತ್ತಿಗೆ ಮೊತ್ತವನ್ನು ನಿಜವಾದ ಘಟಕದ ಬಳಕೆಯಾಗಿ ಭೂ ಮಾಲೀಕರಿಗೆ ಪಾವತಿಸಲಾಗುತ್ತದೆ. ವಾಹನ ಮಾಲಿನ್ಯವನ್ನು ತಗ್ಗಿಸಲು ದೆಹಲಿ ಸರ್ಕಾರವು ಕಳೆದ ವರ್ಷ ತನ್ನ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿತ್ತು.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಈ ವರ್ಷ ಸೆಪ್ಟೆಂಬರ್ - ನವೆಂಬರ್ ಅವಧಿಯಲ್ಲಿ ದೆಹಲಿಯಲ್ಲಿ ಮಾರಾಟವಾದ ಒಟ್ಟು ವಾಹನಗಳ ಪೈಕಿ 9% ನಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಈ ಅಂಕಿ ಅಂಶವು ರಾಷ್ಟ್ರೀಯ ಸರಾಸರಿಗಿಂತ ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ. ಕಳೆದ ತ್ರೈಮಾಸಿಕದಲ್ಲಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸಿಎನ್‌ಜಿ ಹಾಗೂ ಡೀಸೆಲ್ ವಾಹನಗಳ ಮಾರಾಟವನ್ನು ಮೀರಿಸಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಕಳೆದ ತ್ರೈಮಾಸಿಕದಲ್ಲಿ ದೆಹಲಿಯಲ್ಲಿ 7,820 ಡೀಸೆಲ್ ವಾಹನ ಹಾಗೂ 2,688 ಸಿ‌ಎನ್‌ಜಿ ವಾಹನಗಳು ಮಾರಾಟವಾಗಿವೆ. ಈ ಅವಧಿಯಲ್ಲಿ ದೆಹಲಿಯಲ್ಲಿ 82,626 ಯುನಿಟ್‌ ಪೆಟ್ರೋಲ್ ವಾಹನಗಳು ಮಾರಾಟವಾಗಿದ್ದವು. ದೆಹಲಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಜಾರಿಯಾದ ನಂತರ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯಿಂದಾಗಿ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಭಾರಿ ಉಳಿತಾಯ ಮಾಡುತ್ತಿದ್ದಾರೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ದೆಹಲಿ, ಎಲೆಕ್ಟ್ರಿಕ್ ವಾಹನಗಳ ಖರೀದಿ ನೋಂದಣಿಯಲ್ಲಿ ಹಾಗೂ ರಸ್ತೆ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡುತ್ತಿರುವ ದೇಶದ ಮೊದಲ ನಗರವಾಗಿದೆ. ದೆಹಲಿ ಸರ್ಕಾರವು 2025ರ ವೇಳೆಗೆ ನಗರದಲ್ಲಿ ಸಂಚರಿಸುವ ಒಟ್ಟು ವಾಹನಗಳ ಪೈಕಿ 25% ನಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿರಬೇಕು ಎಂದು ಬಯಸಿದೆ. ದೆಹಲಿ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಈ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ನಗರಕ್ಕಿಂತ ಹೆಚ್ಚು. ಇದಲ್ಲದೇ 2022ರ ಮಧ್ಯದ ವೇಳೆಗೆ ದೆಹಲಿಯಲ್ಲಿ 600 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿ ನಿಗದಿಪಡಿಸಲಾಗಿದೆ ಎಂಬುದು ಗಮನಾರ್ಹ. ಈ ಯೋಜನೆಯಡಿಯಲ್ಲಿ 1,000 ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿ ಕಿ.ವ್ಯಾಗೆ ರೂ. 10,000 ಸಬ್ಸಿಡಿ ನಿಗದಿಪಡಿಸಲಾಗಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರಿನ ಮೇಲೆ ಗರಿಷ್ಠ ಸಬ್ಸಿಡಿ ರೂ. 1.50 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ತ್ರಿಚಕ್ರ ವಾಹನ, ಎಲೆಕ್ಟ್ರಿಕ್ ಸರಕು ಸಾಗಣೆ ಹಾಗೂ ಎಲೆಕ್ಟ್ರಿಕ್ ಕೊರಿಯರ್ ವಾಹನಗಳ ಮೇಲೆ ಗರಿಷ್ಠ ರೂ. 30,000 ಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಪೆಟ್ರೋಲ್, ಡೀಸೆಲ್ ವಾಹನಗಳು ಚಲಿಸುವಾಗ ಶಬ್ದವನ್ನುಂಟು ಮಾಡುತ್ತವೆ. ಆದರೆ ಎಲೆಕ್ಟ್ರಿಕ್ ವಾಹನಗಳು ಚಲಿಸುವಾಗ ಯಾವುದೇ ರೀತಿಯ ಶಬ್ದ ಉಂಟಾಗುವುದಿಲ್ಲ. ಎಲೆಕ್ಟ್ರಿಕ್ ವಾಹನಗಳು ಶಬ್ದ ಮಾಡದಿರುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಎಲೆಕ್ಟ್ರಿಕ್ ವಾಹನಗಳು ಚಲಿಸುವಾಗ ಶಬ್ದ ಉಂಟಾಗದೇ ಇರುವುದರಿಂದ ರಸ್ತೆಯಲ್ಲಿ ನಡೆಯುವ ಪಾದಚಾರಿಗಳಿಗೆ ವಾಹನಗಳ ಆಗಮನದ ಬಗ್ಗೆ ತಿಳಿಯುವುದಿಲ್ಲ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ವರದಿಗಳ ಪ್ರಕಾರ ರಸ್ತೆಯಲ್ಲಿರುವವರನ್ನು ಸುರಕ್ಷಿತವಾಗಿಸಲು ಎಲೆಕ್ಟ್ರಿಕ್ ವಾಹನಗಳಲ್ಲಿ ಕೃತಕ ಶಬ್ದವನ್ನು ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಈ ಮೂಲಕ ರಸ್ತೆಯಲ್ಲಿ ಸಾಗುವ ಪಾದಚಾರಿಗಳಿಗೆ ಎಲೆಕ್ಟ್ರಿಕ್ ವಾಹನದ ಸದ್ದು ಕೇಳಿಸುವಂತೆ ಹಾಗೂ ರಸ್ತೆಯಲ್ಲಿ ನಡೆಯುವಾಗ ಜಾಗೃತರಾಗಿರುವಂತೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಭಾರೀ ಕೈಗಾರಿಕೆಗಳ ಇಲಾಖೆಯು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ರಮವನ್ನು ಅನುಮೋದಿಸಿದರೆ, ಶಬ್ದ ಮಾಲಿನ್ಯದ ಮಿತಿಗಳನ್ನು ಗಣನೆಗೆ ತೆಗೆದುಕೊಂಡು ಎಲೆಕ್ಟ್ರಿಕ್ ವಾಹನಗಳಲ್ಲಿ ಕೃತಕ ಶಬ್ದಗಳನ್ನು ಅಳವಡಿಸಲಾಗುತ್ತದೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಅನುಮೋದನೆಗೊಂಡ ನಂತರ ರಸ್ತೆಗಳಲ್ಲಿ ಸಂಚರಿಸುವ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಹೊಸ ನಿಯಮಗಳಿಂದಾಗಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಶಬ್ದ ಉತ್ಪಾದಿಸುವ ಯಂತ್ರಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಗಳಿವೆ. ಧ್ವನಿಯನ್ನು ಉತ್ಪಾದಿಸುವ ಯಂತ್ರಗಳನ್ನು ಅಕೌಸ್ಟಿಕ್ ವಾಹನ ಎಚ್ಚರಿಕೆ ವ್ಯವಸ್ಥೆಗಳು (AVAS) ಎಂದು ಕರೆಯುವ ಸಾಧ್ಯತೆಗಳಿವೆ.

1,400 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದ ಟಿಪಿಡಿಡಿಎಲ್

ಇದನ್ನು ಇಂಧನ ಚಾಲಿತ ವಾಹನಗಳಲ್ಲಿಯೂ ಸಹ ಬಳಸಲಾಗುತ್ತದೆ. ಹಿಂದಿನಿಂದ ಬರುವ ವಾಹನಗಳನ್ನು ಎಚ್ಚರಿಸಲು ಸಹ ಇದನ್ನು ಬಳಸಬಹುದು. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಪ್ರಕ್ರಿಯೆಯನ್ನು ಈಗಾಗಲೇ ಬಳಸಲಾಗುತ್ತಿದೆ. ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಕೃತಕ ಶಬ್ದವನ್ನು ಸೇರಿಸಲು ಅಗತ್ಯವಿರುವ ಕಾನೂನುಗಳನ್ನು ಹಲವು ದೇಶಗಳು ಜಾರಿಗೊಳಿಸಿವೆ.

Most Read Articles

Kannada
English summary
Tpddl opens 1400 ev charging stations in delhi details
Story first published: Wednesday, December 22, 2021, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X