ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ದಿನದಂದ ದಿನಕ್ಕೆ 7-ಸೀಟರ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು 7-ಸೀಟರ್ ಕಾರುಗಳನ್ನು ಈಗಾಗಲೇ ಮಾರಾಟಗೊಳಿಸುತ್ತಿದೆ. ಇದರಿಂದ ಭಾರತದಲ್ಲಿ 7-ಸೀಟರ್ ಮಾದರಿಗಳ ವಿಭಾಗದಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಎಸ್‍ಯುವಿಯ 7-ಸೀಟರ್ ಮಾದರಿಯಾಗಿ ಸಫಾರಿ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಇದೇ ಸಾಲಿಗೆ ಹೆಕ್ಟರ್ ಪ್ಲಸ್ ಎಸ್‍ಯುವಿಯು ಕೂಡ ಸೇರುತ್ತದೆ. ಭಾರತದಲ್ಲಿ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ದೊಡ್ಡ ಕುಟುಂಬಗಳು ಹೆಚ್ಚು ಇವೆ. ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡಲು 7-ಸೀಟರ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಬೇಡಿಕೆಯನ್ನು ಪೂರೈಸಲು, ಎಸ್‌ಯುವಿಗಳು ಮತ್ತು ಎಂಪಿವಿಗಳು ಸೇರಿದಂತೆ ಸಾಕಷ್ಟು ಹೊಸ 7-ಸೀಟರ್ ಕಾರುಗಳು ಶೀಘ್ರದಲ್ಲೇ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. 2022ರಲ್ಲಿ ಭಾರತದಲ್ಲಿ ಬಿಡುಗಡೆಯಾಲಿದೆ ಎಂದು ನಿರೀಕ್ಷೆಯಿರುವ ಮುಂಬರುವ 7-ಸೀಟರ್ ಕಾರುಗಳ ಪಟ್ಟಿ ಇಲ್ಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಈಗಾಗಲೇ ಕೆಲವು ವರ್ಷಗಳಿಂದ ಅಭಿವೃದ್ಧಿಯಲ್ಲಿದೆ ಮತ್ತು ಇದು 2022ರ ಮೊದಲಾರ್ಧದಲ್ಲಿ ಭಾರತದಲ್ಲಿ ಮಾರಾಟವಾಗಲಿದೆ. ಹೊಸ ಮಾದರಿಯು ದೊಡ್ಡದಾಗಿದೆ ಮತ್ತು ಹೆಚ್ಚು ಪ್ರೀಮಿಯಂ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಥಾರ್‌ನ ಲ್ಯಾಡರ್-ಫ್ರೇಮ್ ಪ್ಲಾಟ್‌ಫಾರ್ಮ್‌ನ ನವೀಕರಿಸಿದ ಆವೃತ್ತಿಯಿಂದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋಗೆ ಆಧಾರವಾಗಿದೆ. ಎಂಜಿನ್ ಆಯ್ಕೆಗಳು 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ, ಇವೆರಡೂ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಕಿಯಾ ಕೆರೆನ್ಸ್

ಮಧ್ಯಮ ಗಾತ್ರದ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ದವಾಗಿರುವ ಕಿಯಾ ಕಂಪನಿಯು ಹೊಸ ಮಾದರಿಯ ಎಂಪಿವಿ ಮಾದರಿಯೊಂದನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಕಾರನ್ನು 2022ರ ಆರಂಭದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಈ ಕಿಯಾ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೋ ಮತ್ತು ಮಾರುತಿ ಎರ್ಟಿಗಾ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಈ ಎಂಪಿವಿಯು ಈಗಾಗಲೇ ಕೆಲವು ಬಾರಿ ಕಾಣಿಸಿಕೊಂಡಿದೆ. ಕಿಯಾ ಕೆರೆನ್ಸ್ ಸೆಲ್ಟೋಸ್‌ನಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಆದರೆ ಮೂರನೇ ಸಾಲಿನ ಸೀಟುಗಳನ್ನು ಸರಿಹೊಂದಿಸಲು ಬದಲಾವಣೆಗಳೊಂದಿಗೆ ಎಂಪಿವಿಯಲ್ಲಿನ ಪವರ್‌ಟ್ರೇನ್ ಆಯ್ಕೆಗಳು 1.5 ಲೀಟರ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ, ಎಂಜಿನ್ ನೊಂದಿಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಹುಂಡೈ ಸ್ಟಾರ್‌ಗೇಜರ್

ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಯನ್ನು ಪರಿಚಯಿಸಲು ಯೋಜಿಸುತ್ತಿದೆ, ಇದು ಮುಂಬರುವ ಕಿಯಾ ಕೆರೆನ್ಸ್ ನೊಂದಿಗೆ ತನ್ನ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಹ್ಯುಂಡೈನ ಎಂಪಿವಿ ಕೆಲವು ಬಾರಿ ವಿದೇಶಿ ರಸ್ತೆಗಳಲ್ಲಿ ಪರೀಕ್ಷಿಸಲ್ಪಟ್ಟಿದೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಮಹೀಂದ್ರಾ ಬೊಲೆರೊ ನಿಯೋ ಪ್ಲಸ್

ಈ ವರ್ಷದ ಜುಲೈನಲ್ಲಿ ಮಹೀಂದ್ರಾ ಬೊಲೆರೊ ನಿಯೋ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಟಿಯುವಿ300 ಅನ್ನು ಮರುಪರಿಚಯಿಸಿತು. ಸ್ಟೈಲಿಂಗ್ ನವೀಕರಣಗಳು ಮತ್ತು ಹೊಸ ಹೆಸರು ಬೊಲೆರೊ ನಿಯೋ. ಮಹೀಂದ್ರಾ ಕಂಪನಿಯು ಟಿಯುವಿ300 ಪ್ಲಸ್ ಅನ್ನು ಮರಳಿ ತರಲಿದ್ದಾರೆ, ಬಹುಶಃ 'ಬೊಲೆರೊ ನಿಯೋ ಪ್ಲಸ್' ಹೆಸರಿನಲ್ಲಿ ಆಗಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ 2.2 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಎಸ್‌ಯುವಿ ಟಿಯುವಿ300 ಪ್ಲಸ್‌ನಲ್ಲಿ ಕೆಲವು ಸಣ್ಣ ವಿನ್ಯಾಸದ ನವೀಕರಣಗಳನ್ನು ಹೊಂದಿರುತ್ತದೆ ಮತ್ತು ಇದು 9-ಸೀಟ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿರುತ್ತದೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಟಯೊಟಾ ರೂಮಿಯಾನ್

ಟೊಯೊಟಾ ತನ್ನ ರೂಮಿಯಾನ್ ಕಾರನ್ನು ತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಿತು. ಇದು ಮಾರುತಿ ಎರ್ಟಿಗಾದ ರಿಬ್ಯಾಡ್ಜ್ ಮಾದರಿಯಾಗಿದೆ. ಈ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲೂ ಮಾರಾಟವಾಗುವ ನಿರೀಕ್ಷೆಯಿದೆ, ಬಹುಶಃ 2022ರ ಆರಂಭದಲ್ಲಿ ಸಾಧ್ಯತೆ ಇದೆ. ರಿಬ್ಯಾಡ್ಜ್ ಮಾದರಿಯು ಬಹುತೇಕ ಎರ್ಟಿಗಾವನ್ನು ಹೋಲುತ್ತದೆ ಆದರೆ ಹೊಸ ಮುಂಭಾಗದ ಗ್ರಿಲ್ ಮತ್ತು ವಿಭಿನ್ನ ಲೋಗೋಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಈ ಟೊಯೊಟಾ ಎಂಪಿವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‌ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಜೀಪ್ ಮೆರಿಡಿಯನ್‌

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ಕಮಾಂಡರ್‌ ಎಸ್‌ಯುವಿಯನ್ನು ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಿದೆ. ಜೀಪ್ ಕಂಪನಿಯು ಭಾರತದಲ್ಲಿ ಈ ಮಾದರಿಯನ್ನು ಮೆರಿಡಿಯನ್‌ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. 2022ರಲ್ಲಿ ಭಾರತದ ಮಾರುಕಟ್ಟೆಗೆ ಮೆರಿಡಿಯನ್‌ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಆದರೆ ಜೀಪ್ ಕಂಪನಿಯು ಮೆರಿಡಿಯನ್‌ ಎಸ್‍ಯುವಿಯ ಭಾರತದ ಬಿಡುಗಡೆಯ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರಿನಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ. ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್‌ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ನಿರೀಕ್ಷಿಸುತ್ತೇವೆ. ಬ್ರೆಜಿಲ್ ಈ ಕಮಾಂಡರ್ ಎಸ್‍ಯುವಿಯು ಮೊದಲು ಬಿಡುಗಡೆಯಾಗಲಿದೆ, ಭಾರತದಲ್ಲಿ ಈ ಎಸ್‍ಯುವಿಯು ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಕಾರುಗಳಿವು

ಬ್ರೆಜಿಲ್‌ನಲ್ಲಿ ಈ ಮೂರು-ಸಾಲಿನ ಕಮಾಂಡರ್ ಎಸ್‌ಯುವಿಯನ್ನು ಗೊಯಾನಾ ಆಧಾರಿತ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಬಲಗೈ ಡ್ರೈವ್ (ಆರ್‌ಎಚ್‌ಡಿ) ಎಸ್‍ಯುವಿಯನ್ನು ಜೀಪ್‌ನ ರಂಜನಗಾಂವ್ ಘಟಕದಲ್ಲಿ ತಯಾರಿಸಲಾಗುತ್ತದೆ. ಇನ್ನು ಉತ್ತಮ ಆಫ್-ರೋಡ್ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.

Article Published On: Sunday, November 21, 2021, 13:00 [IST]
English summary
Upcoming 7 seater suvs and mpvs here are all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+