ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಹಬ್ಬದ ಋುತುವಿನಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಮುಂಬರುವ ದಸರಾ ಸಂಭ್ರಮದ ವೇಳೆಗೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ವಿವಿಧ ಕಾರು ಮಾದರಿಗಳನ್ನು ರಸ್ತೆಗಿಳಿಸಲು ಸಜ್ಜಾಗಿವೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಕೋವಿಡ್ ಪರಿಣಾಮ ಬಿಡುಗಡೆ ಯೋಜನೆಯಿಂದ ಮುಂದೂಡಿಕೆಯಾಗಿದ್ದ ಪ್ರಮುಖ ಕಾರು ಮಾದರಿಗಳು ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರುಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಪ್ರಮುಖ ಕಾರು ಕಂಪನಿಗಳು ಹಬ್ಬದ ಋುತುಗಳಲ್ಲಿ ಹೊಸ ಮಾದರಿಗಳ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸಿವೆ. ಕೆಳಗೆ ಪಟ್ಟಿ ಮಾಡಲಾಗಿರುವ ಹೊಸ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ದಸರಾ ಇಲ್ಲವೇ ದೀಪಾವಳಿ ಹೊತ್ತಿಗೆ ಖರೀದಿಗೆ ಲಭ್ಯವಿರಲಿವೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಫೋಕ್ಸ್‌ವ್ಯಾಗನ್ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿ

ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ Volkswagen India ಕಂಪನಿಯ ತನ್ನ ಹೊಚ್ಚ ಹೊಸ ಟೈಗುನ್(Taigun) ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದು, ಅನಾವರಣಗೊಂಡಿದ್ದ ಈ ಹೊಸ ಕಾರು ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಹೊಸ ಟೈಗನ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ಜಿಟಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಹೊಸ ಕಾರು ಸ್ಕೋಡಾ ಕುಶಾಕ್ ಮಾದರಿಯಲ್ಲೇ ತಾಂತ್ರಿಕ ವೈಶಿಷ್ಟ್ಯತೆಗಳು, ಎಂಜಿನ್ ಆಯ್ಕೆಯು ಒಂದೇ ಮಾದರಿಯಾಗಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯ ರೂ. 17.50 ಲಕ್ಷ ಬೆಲೆ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

2021ರ ಫೋರ್ಸ್ ಗೂರ್ಖಾ

ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ಹೊಸ ಗೂರ್ಖಾ(Gurkha) ಎಸ್‌ಯುವಿ ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣದೊಂದಿಗೆ ಹೊಸ ಕಾರಿನ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದು, ಇದೇ ತಿಂಗಳು 27ರಂದು ಹೊಸ ಕಾರಿನ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಲಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಹೊಸ ಗೂರ್ಖಾ ಎಸ್‌ಯುವಿ ಮಾದರಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಹೊಸ ಕಾರು ರೆಡ್, ಗ್ರಿನ್, ವೈಟ್, ಆರೇಂಜ್, ಗ್ರೆ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿಯು ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿಯಾಗಿ ರೂ. 11 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಲಾಗಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಟಾಟಾ ಪಂಚ್ ಮೈಕ್ರೊ ಎಸ್‌ಯುವಿ

ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ ಆಧರಿಸಿರುವ ಟಾಟಾ ಪಂಚ್‌(Tata Punch) ಮೈಕ್ರೊ ಎಸ್‌ಯುವಿ ಮಾದರಿಯು ಎಂಟ್ರಿ ಲೆವಲ್ ಕಾರು ಮಾದರಿಯಲ್ಲೇ ಹಲವಾರು ಹೊಸ ಸುಧಾರಿತ ತಂತ್ರಜ್ಞಾನ ಪ್ರೇರಣೆ ಪಡೆದುಕೊಂಡಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಹೊಸ ಕಾರು ಆಕರ್ಷಕ ವಿನ್ಯಾಸ, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಸೆಗ್ಮೆಂಟ್ ಬೆಸ್ಟ್ ಫಿಚರ್ಸ್, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲಿ ಅತ್ಯುತ್ತಮ ಡಿಸೈನ್ ಹೊಂದಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಪಂಚ್ ಕಾರು ಮಾರುತಿ ಇಗ್ನಿಸ್, ಹ್ಯುಂಡೈ ಸ್ಯಾಂಟ್ರೊ ಜೊತೆಗೆ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳ ಎಂಟ್ರಿ ಲೆವಲ್ ವೆರಿಯೆಂಟ್ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಎಂಜಿ ಆಸ್ಟರ್ ಎಸ್‌ಯುವಿ

ಆಸ್ಟರ್ ಕಾರು ಮಾದರಿಯು ಅತ್ಯುತ್ತಮ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರು ಖರೀದಿಗೆ ಅಕ್ಟೋಬರ್ 7ರಿಂದ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸುವ ಮಾಹಿತಿ ಲಭ್ಯವಾಗಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಆಸ್ಟರ್ ಹೊಸ ಕಾರಿನಲ್ಲಿ ಎಂಜಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಆರಂಭಿಕ ಮಾದರಿಗಳಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 1.5-ಲೀಟರ್ ನ್ಯಾಚುರಲ್ ಆಸ್ಪೆರೆಡ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುವ ಆಸ್ಟರ್ ಕಾರು ಕೃತಕ ಬುದ್ಧಿಮತ್ತೆ ಹೊಂದಿರುವ ಭಾರತದ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 17 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಎಕ್ಸ್‌ಯುವಿ700 ಆವೃತ್ತಿಯು ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯದೊಂದಿಗೆ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗುವ ಪ್ರಮುಖ 5 ಹೊಸ ಕಾರು ಮಾದರಿಗಳಿವು!

ಎಕ್ಸ್‌ಯುವಿ700 ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯನ್ನು ಈಗಾಗಲೇ ಬಹಿರಂಗ ಪಡಿಸಲಾಗಿದ್ದು, ಆರಂಭಿಕ ಎಂಎಕ್ಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆ ಹೊಂದಿರುವುದು ಖಚಿತವಾಗಿದೆ. ಆದರೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಎಕ್ಸ್ ಮಾದರಿಗಳು ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.69 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

Article Published On: Thursday, September 23, 2021, 8:45 [IST]
English summary
Upcoming car launches during in festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+