ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಪ್ರತಿ ವರ್ಷದಂತೆ ಈ ವರ್ಷವೂ ವಾಹನ ತಯಾರಕ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಉತ್ತಮ ಮಾರಾಟವನ್ನು ನಿರೀಕ್ಷಿಸುತ್ತಿದ್ದವು. ಆದರೆ ಈ ವರ್ಷ ವಾಹನ ತಯಾರಕ ಕಂಪನಿಗಳಿಗೆ ಉತ್ತಮವಾಗಿಲ್ಲ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ - ಫಾಡಾ) ಈ ಹಬ್ಬದ ಋತುವು ಆಟೋ ಡೀಲರ್‌ಶಿಪ್‌ಗಳಿಗೆ ವ್ಯಾಪಾರದ ದೃಷ್ಟಿಯಿಂದ ಒಂದು ದಶಕದಲ್ಲೇ ಕೆಟ್ಟದಾಗಿದೆ ಎಂದು ಬಣ್ಣಿಸಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಕರೋನಾ ವೈರಸ್ ಸಾಂಕ್ರಾಮಿಕ ಹಾಗೂ ಸೆಮಿ ಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆಯಿಂದಾಗಿ ವಾಹನಗಳಿಗೆ ಬೇಡಿಕೆ ಕುಸಿದಿದೆ ಎಂದು ಫಾಡಾ ಹೇಳಿದೆ. ಚಿಪ್ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಸರಿಯಾದ ಸಮಯಕ್ಕೆ ಡೀಲರ್‌ಗಳಿಗೆ ವಾಹನಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದು ವಾಹನ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಫಾಡಾ ಹೇಳಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಎಸ್‌ಯುವಿಗಳು ಹಾಗೂ ಐಷಾರಾಮಿ ವಾಹನಗಳ ಮಾರಾಟವು ಸೆಮಿ ಕಂಡಕ್ಟರ್'ಗಳ ಕೊರತೆಯಿಂದ ತೀವ್ರವಾಗಿ ತತ್ತರಿಸಿದೆ. ಜೊತೆಗೆ ಎಂಟ್ರಿ ಲೆವೆಲ್ ಪ್ಯಾಸೆಂಜರ್ ಕಾರುಗಳ ಬೇಡಿಕೆಯು ಸಹ ನಿಧಾನಗತಿಯಲ್ಲಿದೆ ಎಂದು ಫಾಡಾ ಹೇಳಿದೆ. ಇದಲ್ಲದೇ ಇಂಧನ ಬೆಲೆ ಏರಿಕೆಯಿಂದಾಗಿ ದ್ವಿಚಕ್ರ ವಾಹನಗಳ ಬೇಡಿಕೆಯೂ ಕುಸಿದಿದೆ. ಇವುಗಳ ಹೊರತಾಗಿ ಜನರು ಆರ್ಥಿಕ ಅನಿಶ್ಚಿತತೆಗಳ ನಡುವೆ ಆರೋಗ್ಯ ಸಂಬಂಧಿತ ತುರ್ತು ಸ್ಥಿತಿಗಳಿಗಾಗಿ ಹಣ ಉಳಿಸಲು ಮುಂದಾಗುತ್ತಿದ್ದಾರೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಈ ಹಿನ್ನೆಲೆಯಲ್ಲಿ ಹೆಚ್ಚಿನ ಮೌಲ್ಯದ ಖರೀದಿಗಳನ್ನು ತಪ್ಪಿಸುತ್ತಿದ್ದಾರೆ. ಫಾಡಾ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, 2020ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಡೀಲರ್ ರವಾನೆಗಳ ಪ್ರಮಾಣವು 22% ನಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 3,33,981 ಯೂನಿಟ್‌ ಪ್ರಯಾಣಿಕ ಕಾರುಗಳನ್ನು ಡೀಲರ್‌ಗಳಿಗೆ ರವಾನಿಸಲಾಗಿತ್ತು.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಈ ಪ್ರಮಾಣವು ಈ ವರ್ಷದ ಅಕ್ಟೋಬರ್‌ನಲ್ಲಿ 2,60,162 ಯುನಿಟ್‌ಗಳಿಗೆ ಕುಸಿದಿದೆ. ಅದೇ ರೀತಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ 19,85,690 ಯುನಿಟ್‌ಗಳಿದ್ದ ದ್ವಿಚಕ್ರ ವಾಹನಗಳ ರವಾನೆ ಪ್ರಮಾಣವು 2021ರ ಅಕ್ಟೋಬರ್‌ನಲ್ಲಿ 14,77,313 ಯುನಿಟ್‌ಗಳಾಗಿದ್ದು, 25.6% ನಷ್ಟು ಕಡಿಮೆಯಾಗಿದೆ. ಆದರೆ ಲಾಕ್‌ಡೌನ್ ನಂತರ ಆರ್ಥಿಕ ಚಟುವಟಿಕೆಗಳ ಏರಿಕೆಯಿಂದಾಗಿ ಕಮರ್ಷಿಯಲ್ ವಾಹನ ವಲಯದ ಪರಿಸ್ಥಿತಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಈ ವಿಭಾಗವು ಕಳೆದ ವರ್ಷಕ್ಕೆ ಹೋಲಿಸಿದರೆ 3.21% ನಷ್ಟು ಬೆಳವಣಿಗೆಯನ್ನು ಕಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ 61,325 ಯುನಿಟ್ ಕಮರ್ಷಿಯಲ್ ವಾಹನಗಳನ್ನು ಡೀಲರ್‌ಗಳಿಗೆ ಕಳುಹಿಸಲಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 59,420 ಯುನಿಟ್‌ ಕಮರ್ಷಿಯಲ್ ವಾಹನಗಳನ್ನು ರವಾನಿಸಲಾಗಿತ್ತು. ಫಾಡಾ, ದೇಶಾದ್ಯಂತ 26,500 ಔಟ್‌ಲೆಟ್‌ಗಳನ್ನು ಹೊಂದಿರುವ 15,000 ಆಟೋ ಡೀಲರ್‌ಗಳನ್ನು ಪ್ರತಿನಿಧಿಸುತ್ತದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಅಕ್ಟೋಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ, ಟಾಟಾ ಮೋಟಾರ್ಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ವಾಹನ ತಯಾರಕ ಕಂಪನಿಗಳ ಮಾರಾಟವು ಕುಸಿತವನ್ನು ದಾಖಲಿಸಿದೆ. ಇದರಿಂದ ಭಾರತದಲ್ಲಿ ಹಬ್ಬಗಳು ಸಮೀಪಿಸಿದ್ದರೂ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬರುತ್ತಿಲ್ಲ. ಆದರೆ ಡಿಸೆಂಬರ್ ವೇಳೆಗೆ ವಾಹನಗಳ ಮಾರಾಟವು ಮತ್ತೆ ಹೆಚ್ಚಾಗುವ ನಿರೀಕ್ಷೆಗಳಿವೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಭಾರತದಲ್ಲಿ ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಕಾರುಗಳನ್ನು ಖರೀದಿಸುವುದು ಸರಿಯಾದ ನಿರ್ಧಾರವೇ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮೂಡುತ್ತಿದೆ. ಈ ಪ್ರಶ್ನೆ ಮೂಡಲು ಹಲವಾರು ಕಾರಣಗಳಿವೆ. ಈ ಕಾರಣಗಳು ಯಾವುವು ಎಂಬುದನ್ನು ನೋಡುವುದಾದರೆ, ಹೆಚ್ಚುತ್ತಿರುವ ಕಾರುಗಳ ಬೆಲೆ, ಹೊಸ ಕಾರುಗಳ ವಿತರಣೆ ಪಡೆಯಲು ದೀರ್ಘ ಕಾಲ ಕಾಯುವಿಕೆ, ಹೊಸ ಸ್ಕ್ರ್ಯಾಪ್ ನಿಯಮಗಳು ಹಾಗೂ ಒಂದೇ ಸಮನೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೊಸ ಕಾರ್ ಅನ್ನು ಖರೀದಿಸಲು ಯೋಚಿಸುವಂತಾಗಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಇವುಗಳ ಜೊತೆಗೆ ಜನರು ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಬಹುತೇಕ ನಗರಗಳಲ್ಲಿ ಅವುಗಳ ಬೆಲೆ ರೂ. 100ರ ಗಡಿ ದಾಟಿದೆ. ಈ ಪರಿಸ್ಥಿತಿಯಲ್ಲಿ ಪೆಟ್ರೋಲ್ ವಾಹನ ಖರೀದಿಸಿದರೆ ಇನ್ನೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಪೆಟ್ರೋಲ್ ಬೆಲೆ ಪ್ರತಿ ನಿತ್ಯ ಹೊಸ ಎತ್ತರವನ್ನು ಮುಟ್ಟುತ್ತಿದೆ. ದೇಶದ ಹಲವು ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 117 ಗಳಾಗಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಮುಂಬರುವ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡು ಬರುವ ಸಾಧ್ಯತೆಗಳಿಲ್ಲ. ಈ ಪರಿಸ್ಥಿತಿಯಲ್ಲಿ, ಹೊಸ ಕಾರನ್ನು ಖರೀದಿಸುವುದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಬಹುದು. ಮೊದಲೇ ಕೋವಿಡ್ 19 ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಇದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆಗಳಿವೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ದೇಶದ ಬಹುತೇಕ ಕಾರು ಕಂಪನಿಗಳು ಈ ವರ್ಷ ತಮ್ಮ ಕಾರುಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿವೆ. ಈ ಹಬ್ಬದ ಸೀಸನ್‌ಗೆ ಮೊದಲು ಅಥವಾ ನವೆಂಬರ್‌ನಲ್ಲಿ ಕಾರುಗಳ ಬೆಲೆ ಮತ್ತೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ವಾರ್ಷಿಕವಾಗಿ ಬೆಲೆ ಏರಿಸಲಾಗಿತ್ತು. ನಂತರ ಏಪ್ರಿಲ್ ತಿಂಗಳಿನಲ್ಲಿ ಹಾಗೂ ಅದಾದ ನಂತರ ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಬೆಲೆ ಏರಿಕೆ ಮಾಡಲಾಯಿತು. ಇದು ಸಹ ಗ್ರಾಹಕರು ಹೊಸ ಕಾರು ಖರೀದಿಸಲು ಹಿಂದೇಟು ಹಾಕುವಂತಾಗಿದೆ.

ಹಬ್ಬದ ಸಂದರ್ಭದಲ್ಲಿಯೂ ಏರಿಕೆ ಕಾಣದ ಹೊಸ ವಾಹನ ಮಾರಾಟ

ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಗಳ ಕೊರತೆಯಿಂದಾಗಿ ಕಾರುಗಳ ವಿತರಣೆ ಪಡೆಯಲು ಹೆಚ್ಚು ಕಾಲ ಕಾಯಬೇಕಾಗಿದೆ. ಸೆಮಿಕಂಡಕ್ಟರ್ ಗಳ ಕೊರತೆಯು ದೇಶಿಯ ಮಾರುಕಟ್ಟೆಯಲ್ಲಿನ ಹಲವು ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಜನಪ್ರಿಯ ಎಸ್‌ಯು‌ವಿಗಳ ವಿತರಣೆ ಪಡೆಯಲು 3 - 6 ತಿಂಗಳ ಕಾಯಬೇಕಾಗಿದೆ. ಹಲವು ಮಾದರಿಗಳ ವಿತರಣೆ ಪಡೆಯಲು ಒಂದು ವರ್ಷದವರೆಗೆ ಕಾಯ ಬೇಕಾಗಿದೆ.

Most Read Articles

Kannada
English summary
Vehicle demand falls amid festive season know the reasons details
Story first published: Wednesday, November 3, 2021, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X