Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ದುಪ್ಪಟ್ಟು ಟೋಲ್ ಶುಲ್ಕ
ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್ ಅಳವಡಿಕೆಯಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಇಲ್ಲದೆ ಡಿಜಿಟಲ್ ವಹಿವಾಟು ನಡೆಸಲು ಸಾಧ್ಯವಾಗಲಿದೆ. ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ.

ಈ ಕಾರಣಕ್ಕಾಗಿ ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಇತರ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.ಬಹುತೇಕ ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿದ್ದರೆ, ಕೆಲವು ವಾಹನಗಳು ಮಾತ್ರ ನಗದು ಮೂಲಕವೇ ಟೋಲ್ ಶುಲ್ಕವನ್ನು ಪಾವತಿಸುತ್ತಿವೆ.

ಈ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಲು ಗಡುವು ನೀಡಲಾಗಿತ್ತು. ಆ ಗಡುವು ಇಂದು ಕೊನೆಗೊಳ್ಳುತ್ತದೆ. ಈ ಕಾರಣಕ್ಕೆ ಇಂದಿನಿಂದ ಟೋಲ್ ಪ್ಲಾಜಾ ಮೂಲಕ ಸಾಗುವ ವಾಹನಗಳು ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೇ ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಹಿಂದೆ ಫಾಸ್ಟ್‌ಟ್ಯಾಗ್ ಕಡ್ಡಾಯ ಅಳವಡಿಕೆಗೆ ಜನವರಿ 1ರವರೆಗೆ ಗಡುವು ನೀಡಲಾಗಿತ್ತು. ನಂತರ ಈ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಯಿತು. ಈಗ ಫಾಸ್ಟ್‌ಟ್ಯಾಗ್ ಹೊಂದಿಲ್ಲದೇ ಟೋಲ್ ಪ್ಲಾಜಾ ಮೂಲಕ ಸಾಗುವ ವಾಹನಗಳಿಗೆ ಎರಡು ಪಟ್ಟು ಹೆಚ್ಚು ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಿದೆ. ಫಾಸ್ಟ್‌ಟ್ಯಾಗ್'ಗಳಿಂದಾಗಿ ವಾಹನಗಳಿಗೆ ವೇಗವಾಗಿ ಟೋಲ್'ಗಳಲ್ಲಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಳೆದ ಕೆಲವು ತಿಂಗಳುಗಳಿಂದ ಫಾಸ್ಟ್‌ಟ್ಯಾಗ್ ಬಳಕೆ ಬಗ್ಗೆ ಪ್ರಚಾರ ನಡೆಸುತ್ತಿದೆ. ಇದರ ಫಲವಾಗಿ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆ 2 ಕೋಟಿಗಿಂತಲೂ ಹೆಚ್ಚಾಗಿದೆ.

75%ನಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಮೂಲಕವೇ ಟೋಲ್ ಶುಲ್ಕವನ್ನು ಪಾವತಿಸುತ್ತಿವೆ. ಈ ಪ್ರಮಾಣವನ್ನು 100%ಗೆ ಹೆಚ್ಚಿಸುವ ಸಲುವಾಗಿ ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಟೋಲ್ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇನ್ನು ಮುಂದೆ ಟೋಲ್ ಪ್ಲಾಜಾಗಳಲ್ಲಿರುವ ನಗದು ವಹಿವಾಟಿನ ಲೇನ್‌ಗಳನ್ನು ತೆಗೆದುಹಾಕಲಾಗುತ್ತದೆ. ಇನ್ನು ಮುಂದೆ ಟೋಲ್ ಪ್ಲಾಜಾಗಳಲ್ಲಿ ಹೈಬ್ರಿಡ್ ಲೇನ್‌ಗಳಿರಲಿವೆ. ಫಾಸ್ಟ್‌ಟ್ಯಾಗ್ ಇಲ್ಲದೆ ಈ ಲೇನ್‌ಗೆ ಪ್ರವೇಶಿಸುವ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.

ಈ ಕಟ್ಟುನಿಟ್ಟಿನ ಕ್ರಮವು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ನಿಗದಿ ಪಡಿಸಿರುವ ಬ್ಯಾಂಕ್ ಹಾಗೂ ಆನ್‌ಲೈನ್ ಮೂಲಕವೂ ಫಾಸ್ಟ್‌ಟ್ಯಾಗ್'ಗಳನ್ನು ಖರೀದಿಸಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್, ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿಯನ್ನು ಹೊಂದಿರುವ ಸ್ಟಿಕ್ಕರ್ ಆಗಿದೆ. ಈ ಸ್ಟಿಕ್ಕರ್ ಅನ್ನು ಮೊಬೈಲ್ ರೀತಿಯಲ್ಲಿಯೇ ರೀಚಾರ್ಜ್ ಮಾಡಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನವು ಟೋಲ್ ಪ್ಲಾಜಾ ಮೂಲಕ ಹಾದು ಹೋದಾಗ ಸಂಬಂಧಿಸಿದ ಶುಲ್ಕವು ಫಾಸ್ಟ್‌ಟ್ಯಾಗ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.