ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ವೊಲ್ವೊ ಇಂಡಿಯಾ ಕಂಪನಿಯು ತನ್ನ ವಿವಿಧ ಮಾದರಿಯ ಐಷಾರಾಮಿ ಕಾರು ಮಾರಾಟದಲ್ಲಿ ತನ್ನ ತನ್ನದೆ ಆದ ಬೇಡಿಕೆಯನ್ನು ಹೊಂದಿದ್ದು, ದೇಶಾದ್ಯಂತ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಮಾರಾಟ ಸೌಲಭ್ಯವನ್ನು ಹೊಂದಿದೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ಕಾರು ಮಾರಾಟದಲ್ಲಿ ಹೊಸ ಬದಲಾವಣೆಗಳೊಂದಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಿದ್ದವಾಗಿರುವ ವೊಲ್ವೊ ಕಂಪನಿಯು ಇತ್ತೀಚೆಗೆ ಚೆನ್ನೈನಲ್ಲಿ ಹೊಸ ಕಾರು ಮಾರಾಟ ಮಳಿಗೆಯೊಂದಕ್ಕೆ ಚಾಲನೆ ನೀಡಿದ್ದು, ಹೊಸ ಮಾರಾಟ ಮಳಿಗೆಯ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಮಾರಾಟ ಮಳಿಗೆಯು 7 ಸಾವಿರ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಒಂದೇ ಸೂರಿನಡಿ ಮಾರಾಟ ಮತ್ತು ಸೇವಾ ವಿಭಾಗವನ್ನು ತೆರೆದಿದೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ಮಿನೆಂಟ್ ಗ್ರೂಪ್‌ನೊಂದಿಗೆ ಸೇರಿ ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಅನ್ನಾ ಸಲೈ ರಸ್ತೆಯಲ್ಲಿ ಹೊಸ ಕಾರು ಮಾರಾಟ ಮಳಿಗೆಯನ್ನು ಮತ್ತು ಟಿವಿಕೆ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ವರ್ಕ್‌ಶಾಪ್ ನಿರ್ಮಾಣ ಮಾಡಲಾಗಿದೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ಇನ್ನು ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ತನ್ನ ಭಾರತೀಯ ಮಾರುಕಟ್ಟೆಯಲ್ಲಿನ ಕಾರ್ಯಾಚರಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಜ್ಯೋತಿ ಮಲ್ಹೋತ್ರಾ ಅವರನ್ನು ವೊಲ್ವೊ ಕಾರ್ಸ್ ಇಂಡಿಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಳಿಸಿದೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ವೊಲ್ವೊ ಕಾರ್ಸ್ ಇಂಡಿಯಾ ವಿಭಾಗಕ್ಕೆ ವೊಲ್ವೊ ಕಂಪನಿಯು ಮೊದಲ ಬಾರಿಗೆ ಭಾರತೀಯ ಮೂಲದ ಅಧಿಕಾರಿಯನ್ನು ನೇಮಕಗೊಳಿಸಿದ್ದು, ನಿವೃತ್ತಿಯಲ್ಲಿರುವ ಚಾರ್ಲ್ಸ್ ಫ್ರಾಂಪ್ ಸ್ಥಾನಕ್ಕೆ ಜ್ಯೋತಿ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ವೊಲ್ವೊ ಕಾರ್ಸ್ ಇಂಡಿಯಾ ಕಂಪನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿದ್ದ ಜ್ಯೋತಿ ಮಲ್ಹೋತ್ರಾ ಅವರಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬಡ್ತಿ ನೀಡಲಾಗಿದೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ಸ್ವೀಡಿಷ್ ಕಾರು ಕಂಪನಿಯ ಈ ಹಿಂದೆ ತನ್ನ ಮೂಲ ಕಾರು ಉತ್ಪಾದನಾ ಘಟಕದಲ್ಲಿನ ಹಿರಿಯ ಅಧಿಕಾರಿಗಳನ್ನೇ ಭಾರತೀಯ ಮಾರುಕಟ್ಟೆಯಲ್ಲಿ ನೇಮಕ ಮಾಡುತ್ತಿತ್ತು. ಇದೇ ಮೊದಲ ಭಾರತೀಯ ಅಧಿಕಾರಿಯೊಬ್ಬರಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬಡ್ತಿ ನೀಡಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ವೊಲ್ವೊ ಕಾರು ಮಾರಾಟ ವಿಭಾಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದು, ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತು ಹೊಸ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ.

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಳಿಸಿರುವುದು ಭವಿಷ್ಯ ವಾಹನಗಳ ಉತ್ಪಾದನೆಯಲ್ಲಿ ಬಹುದೊಡ್ಡ ಬದಲಾವಣೆ ತರುವ ಗುರುತರ ಜವಾಬ್ದಾರಿ ಹೊತ್ತುಕೊಂಡಿದ್ದು, ವೊಲ್ವೊ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್‌ ವಾಹನಗಳ ಗಮನಹರಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಯೋಜನೆಗಳಾಗಿ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸಿದ ವೊಲ್ವೊ ಇಂಡಿಯಾ

ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಇವಿ ಕಾರುಗಳನ್ನು ಮಾತ್ರ ಮಾರಾಟ ಮಾಡುವ ಗುರಿಯೋಜನೆ ಹೊಂದಿದೆ.

Most Read Articles

Kannada
Read more on ವೊಲ್ವೊ volvo
English summary
Volvo Car India Inaugurates New Dealership In Chennai. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X